Team India Test Playing 11: ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ದಿನದಂದು ಭಾರತ ಇನ್ನಿಂಗ್ಸ್ ಮತ್ತು 141 ರನ್’ಗಳಿಂದ ಗೆಲುವು ಸಾಧಿಸಿದೆ. ಮೊದಲ ಇನಿಂಗ್ಸ್‌ ನಲ್ಲಿ 150 ರನ್ ಗಳಿಸಿದ್ದ ಕೆರಿಬಿಯನ್ ತಂಡ ಎರಡನೇ ಇನಿಂಗ್ಸ್‌ ನಲ್ಲಿ 50 ಓವರ್‌ಗಳಲ್ಲಿ 130 ರನ್‌ ಗಳಿಗೆ ಆಲೌಟಾಯಿತು. ಅದೇ ವೇಳೆಗೆ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ ನಲ್ಲಿ ಐದು ವಿಕೆಟ್‌ ಗೆ 421 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದು, 271 ರನ್‌ ಗಳ ಮುನ್ನಡೆ ಸಾಧಿಸಿದೆ. ಈ ಅಮೋಘ ಗೆಲುವಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂದಿನ ಪಂದ್ಯದ ಪ್ಲೇಯಿಂಗ್ 11 ಕುರಿತು ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವದ ಅಗ್ರ 10 ಬೆಸ್ಟ್ ಆಲ್’ರೌಂಡರ್’ಗಳು ಇವರು.. Team Indiaದ ಈ ಒಬ್ಬನಿಗೆ ಮಾತ್ರ ಸ್ಥಾನ!


ಮೊದಲ ಪಂದ್ಯದ ಗೆಲುವಿನ ನಂತರ ರೋಹಿತ್ ಶರ್ಮಾ ಕ್ವೀನ್ಸ್ ಪಾರ್ಕ್ ಓವಲ್‌ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ ನಲ್ಲಿ ಬದಲಾವಣೆಯನ್ನು ಸೂಚಿಸಿದ್ದಾರೆ. ಉಭಯ ತಂಡಗಳ ನಡುವಿನ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಜುಲೈ 20 ರಿಂದ ನಡೆಯಲಿದೆ. ರೋಹಿತ್, 'ಉತ್ತಮವಾಗಿ ಪ್ರಾರಂಭಿಸುವುದು ಅತ್ಯಂತ ಮುಖ್ಯವಾದ ವಿಷಯ. ನಾವು ಪಿಚ್ ಬಗ್ಗೆ ಹೆಚ್ಚು ಚಿಂತಿಸಲಿಲ್ಲ. ಇಲ್ಲಿಗೆ ಬಂದು ಫಲಿತಾಂಶಗಳನ್ನು ಪಡೆಯಲು ಬಯಸಿದ್ದೇವೆ. ಈಗ ನಾವು ಈ ವೇಗವನ್ನು ಎರಡನೇ ಟೆಸ್ಟ್ ನಲ್ಲೂ ಮುಂದುವರೆಸಲು ಬಯಸುತ್ತೇವೆ. ಹೆಚ್ಚು ಟೆಸ್ಟ್ ಆಡದ ಕೆಲವು ಆಟಗಾರರಿದ್ದಾರೆ” ಎಂದರು.


ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಕರ್ ಭರತ್, ರಿತುರಾಜ್ ಗಾಯಕ್ವಾಡ್, ಅಕ್ಷರ್ ಪಟೇಲ್, ಮುಖೇಶ್ ಕುಮಾರ್ ಮತ್ತು ನವದೀಪ್ ಸೈನಿ ಅವರು ಪ್ಲೇಯಿಂಗ್ 11ರಲ್ಲಿ ಸ್ಥಾನ ಪಡೆದಿಲ್ಲ.


ರೋಹಿತ್ ಶರ್ಮಾ ಅವರು ಯಶಸ್ವಿ ಜೈಸ್ವಾಲ್ ಬಗ್ಗೆ ಮಾತನಾಡಿದ್ದು, “ಅವರಲ್ಲಿ ಪ್ರತಿಭೆ ಇದೆ. ಬುದ್ಧಿವಂತಿಕೆಯಿಂದ ಬ್ಯಾಟಿಂಗ್ ಮಾಡಿದ್ದಾರೆ. ಒಂದೊಮ್ಮೆ ಕಷ್ಟಪಟ್ಟು ಕೆಲಸ ಮಾಡಿದ್ದ ಅವರು, ಈಗ ಈ ಸಮಯವನ್ನು ಆನಂದಿಸುತ್ತಿದ್ದಾರೆ” ಎಂದು ಹೊಗಳಿದರು.


ಇದನ್ನೂ ಓದಿ: ಟೆಸ್ಟ್ LIVE ಪಂದ್ಯದಲ್ಲಿ ತಾಳ್ಮೆ ಕಳೆದುಕೊಂಡ ರೋಹಿತ್: ಸಾರ್ವಜನಿಕವಾಗಿ ಈ ಆಟಗಾರನನ್ನು ನಿಂದಿಸಿದ್ರು…!


ಇನ್ನು ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬಗ್ಗೆ ಮಾತನಾಡಿದ ಅವರು, “ 'ಫಲಿತಾಂಶಗಳು ಸ್ವತಃ ಮಾತನಾಡುತ್ತವೆ, ಅವರು ಕೆಲವು ಸಮಯದಿಂದಲೇ ಇದೇ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಬಗ್ಗೆ ಹೇಳಲು ಹೆಚ್ಚೇನೂ ಇಲ್ಲ, ಅದು ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುವುದು. ಈ ರೀತಿಯ ಪಿಚ್‌ ಗಳನ್ನು ಅನುಭವಿಸುವುದೇ ಅವರಿಗೆ ಐಷಾರಾಮಿ. ಅಶ್ವಿನ್ ಮತ್ತು ಜಡೇಜಾ ಇಬ್ಬರೂ ಅತ್ಯುತ್ತಮರು, ಅದರಲ್ಲೂ ಅಶ್ವಿನ್ ಈ ರೀತಿಯ ಬೌಲಿಂಗ್ ಅತ್ಯುತ್ತಮ” ಎಂದು ಕೊಂಡಾಡಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ