Rohit Sharma Angry Viral Video: ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ನಡೆಯಿತು. ಈ ಪಂದ್ಯವನ್ನು ಟೀಂ ಇಂಡಿಯಾ ಕೇವಲ 3 ದಿನಗಳಲ್ಲಿ ಇನ್ನಿಂಗ್ಸ್ ಮತ್ತು 141 ರನ್ ಗಳಿಂದ ಗೆದ್ದಿದೆ. ಪಂದ್ಯದ ಮೂರನೇ ದಿನ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗೆ 421 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದು, ವೆಸ್ಟ್ ಇಂಡೀಸ್ ತಂಡವನ್ನು 50.3 ಓವರ್ ಗಳಲ್ಲಿ ಪೇರಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತುಂಬಾ ಕೋಪಗೊಂಡ ಕ್ಷಣವೂ ಕಂಡುಬಂತು.
ಇದನ್ನೂ ಓದಿ: 13 ವರ್ಷಗಳಿಂದ Team Indiaದಲ್ಲಿ ಒಂದೇ ಒಂದು ಅವಕಾಶ ಪಡೆಯದ ಈತ ಇನ್ಮುಂದೆ ಕ್ಯಾಪ್ಟನ್!
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಆಗಾಗ್ಗೆ ಕೋಪದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ವೇಳೆ ಡ್ರೆಸ್ಸಿಂಗ್ ರೂಮ್ ಬಳಿ ನಿಂತುಕೊಂಡು ಕೋಪಗೊಂಡಂತೆ ಕಾಣಿಸಿಕೊಂಡಿದೆ. ಇದು ಭಾರತದ ಮೊದಲ ಇನಿಂಗ್ಸ್ ನ 153 ನೇ ಓವರ್ ಆಗಿದೆ. ಈ ವೇಳೆ ರವೀಂದ್ರ ಜಡೇಜಾ ಮತ್ತು ಇಶಾನ್ ಕಿಶನ್ ಬ್ಯಾಟಿಂಗ್ ಮಾಡುತ್ತಿದ್ದರು. ಇದು ಇಶಾನ್ ಗೆ ಚೊಚ್ಚಲ ಟೆಸ್ಟ್ ಆಗಿತ್ತು. ಇನಿಂಗ್ಸ್ ನ ಆರಂಭದಲ್ಲಿ 19 ಎಸೆತಗಳನ್ನು ಆಡಿದರೂ ಇಶಾನ್ ಕಿಶನ್ ಒಂದು ರನ್ ಕೂಡ ಗಳಿಸಲಿಲ್ಲ. ಇದರಿಂದಾಗಿ ನಾಯಕ ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮ್ ನಿಂದಲೇ ಕೋಪದಿಂದ ಸನ್ನೆ ಮಾಡಿದರು. ಇದರ ನಂತರ, ರೋಹಿತ್ ಇಶಾನ್ ಕಿಶನ್ಗೆ ರನ್ ಗಳಿಸಲು ಸೂಚಿಸಿದರು. ಖಾತೆ ತೆರೆದ ತಕ್ಷಣ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
— Nihari Korma (@NihariVsKorma) July 15, 2023
ಪಂದ್ಯದ ನಂತರ ಘಟನೆಯ ಕುರಿತು ಮಾತನಾಡಿದ ನಾಯಕ ರೋಹಿತ್ ಶರ್ಮಾ, 'ಇನಿಂಗ್ಸ್ ಡಿಕ್ಲೇರ್ ಮಾಡಲು ನಮಗೆ ಒಂದು ಅಥವಾ ಎರಡು ಓವರ್ ಗಳು ಮಾತ್ರ ಇವೆ ಎಂದು ನಾನು ಅವರಿಗೆ (ಇಶಾನ್ ಕಿಶನ್) ಹೇಳುತ್ತಿದ್ದೆ. ಇಶಾನ್ ತನ್ನ ಖಾತೆಯನ್ನು ತೆರೆಯಬೇಕು. ಮೊದಲ ರನ್ ಗಳಿಸಬೇಕು ಮತ್ತು ನಂತರ ನಾವು ಇನ್ನಿಂಗ್ಸ್ ಡಿಕ್ಲೇರ್ ಮಾಡಬೇಕೆಂದು ನಾನು ಬಯಸಿದ್ದೆ. ಅವರು ಪ್ರತಿ ಬಾರಿಯೂ ಬ್ಯಾಟಿಂಗ್ ಮಾಡಲು ಉತ್ಸುಕರಾಗಿರುವುದನ್ನು ನಾನು ನೋಡಿದ್ದೇನೆ. ಆದರೆ ಇಂದು ನಿರಾಶೆಯಾಗಿರಬಹುದು” ಎಂದರು.
ಇದನ್ನೂ ಓದಿ: IND vs WI: ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾಗೆ ಭರ್ಜರಿ ಜಯ: ಮುನ್ನಡೆ ಸಾಧಿಸಿ ನಂ.1 ಸ್ಥಾನಕ್ಕೇರಿದ ಭಾರತ
ಇಶಾನ್ ಕಿಶನ್ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯ ಆಡುತ್ತಿರುವುದು ಇದೇ ಮೊದಲು. ಇಶಾನ್ ಕಿಶನ್ ಇದುವರೆಗೆ ಟೀಂ ಇಂಡಿಯಾ ಪರ 14 ಏಕದಿನ ಮತ್ತು 27 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 1 ದ್ವಿಶತಕ ಸೇರಿದಂತೆ 510 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಟಿ20ಯಲ್ಲಿ 653 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ ಇದುವರೆಗೆ 48 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ ಇಶಾನ್ ಕಿಶನ್ 38.76ರ ಸರಾಸರಿಯಲ್ಲಿ 2985 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 16 ಅರ್ಧ ಶತಕ ಮತ್ತು 6 ಶತಕಗಳನ್ನು ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ