ಪೊರಕೆ ಹಿಡಿದು ಇಂದೋರ್ ಸ್ಟೇಡಿಯಂಗೆ ಬಂದ ಫ್ಯಾನ್ಸ್! ಕಾರಣ ಕೇಳಿದ್ರೆ ಶಾಕ್ ಆಗ್ತೀರ
Fan Brings Broom to Indore Stadium: ಇಂದೋರ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ಅನ್ನು ಆಸ್ಟ್ರೇಲಿಯಾ ಕೇವಲ 33.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಮಾಡಿದೆ. ವಿರಾಟ್ ಕೊಹ್ಲಿ 22 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅದೇ ಸಮಯದಲ್ಲಿ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ 5 ವಿಕೆಟ್ ಪಡೆದರು. ಆದರೆ, ದಿನದಾಟದ ಅಂತ್ಯಕ್ಕೆ ಪ್ರವಾಸಿ ತಂಡದ 4 ವಿಕೆಟ್ ಪಡೆದರು. ಆದರೂ ಆಸ್ಟ್ರೇಲಿಯಾ 47 ರನ್‌ಗಳ ಮುನ್ನಡೆ ಸಾಧಿಸಿತು.
Fan Brings Broom to Indore Stadium: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಸಂಪೂರ್ಣ ವಿಫಲವಾಗಿದೆ. ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಆತಿಥೇಯರ ಮೊದಲ ಇನ್ನಿಂಗ್ಸ್ ಅನ್ನು ಕೇವಲ 109 ರನ್‌ಗಳಿಗೆ ಆಲೌಟ್ ಮಾಡಿದೆ. ಇದಾದ ಬಳಿಕ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 47 ರನ್‌ಗಳ ಮುನ್ನಡೆ ಸಾಧಿಸಿದೆ. ಆದರೆ, ಆಲ್ ರೌಂಡರ್ ರವೀಂದ್ರ ಜಡೇಜಾ ಅವರ 4 ವಿಕೆಟ್ ಪಡೆದಿದ್ದಾರೆ. ಇದೇ ವೇಳೆ ಇಂದೋರ್‌ನಲ್ಲಿರುವ ಅಭಿಮಾನಿಯೊಬ್ಬ ಪೊರಕೆ ಹಿಡಿದು ಕ್ರೀಡಾಂಗಣ ತಲುಪಿರುವ ಘಟನೆ ನಡೆದಿದೆ.
ಇದನ್ನೂ ಓದಿ: Virat Kohli-Anushka Sharma: ʼನನ್ನ ಪತ್ನಿಯೇ ನನಗೆ ಸ್ಫೂರ್ತಿʼ - ವಿರಾಟ್ ಕೊಹ್ಲಿ
ಇಂದೋರ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ಅನ್ನು ಆಸ್ಟ್ರೇಲಿಯಾ ಕೇವಲ 33.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಮಾಡಿದೆ. ವಿರಾಟ್ ಕೊಹ್ಲಿ 22 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅದೇ ಸಮಯದಲ್ಲಿ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ 5 ವಿಕೆಟ್ ಪಡೆದರು. ಆದರೆ, ದಿನದಾಟದ ಅಂತ್ಯಕ್ಕೆ ಪ್ರವಾಸಿ ತಂಡದ 4 ವಿಕೆಟ್ ಪಡೆದರು. ಆದರೂ ಆಸ್ಟ್ರೇಲಿಯಾ 47 ರನ್‌ಗಳ ಮುನ್ನಡೆ ಸಾಧಿಸಿತು. ಮೊದಲ ದಿನದಾಟದ ಅಂತ್ಯಕ್ಕೆ ಪೀಟರ್ ಹ್ಯಾಂಡ್ಸ್‌ಕಾಂಬ್ 7 ಮತ್ತು ಕ್ಯಾಮರೂನ್ ಗ್ರೀನ್ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಆಸ್ಟ್ರೇಲಿಯಾದ ಅಭಿಮಾನಿಗಳ ಗುಂಪು ವಿಶಿಷ್ಟ ರೀತಿಯಲ್ಲಿ ಪೊರಕೆ ಹಿಡಿದು ಇಂದೋರ್‌ನ ಹೋಲ್ಕರ್ ಸ್ಟೇಡಿಯಂಗೆ ತಲುಪಿತ್ತು. ಭಾರತದ ಸ್ವಚ್ಛ ನಗರಿಯಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ “ಭಾರತದ ಸ್ಪಿನ್ನರ್‌ಗಳ ವಿರುದ್ಧ ಸ್ವೀಪ್ ಹೊಡೆತಗಳನ್ನು ಬಾರಿಸಿ, ವಿಕೆಟ್ ಕಳೆದುಕೊಳ್ಳಬೇಡಿ” ಎಂಬ ಸೂಚಕವಾಗಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಸಂದೇಶ ನೀಡಿದರು.
ದೆಹಲಿಯಲ್ಲಿ ನಡೆದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ, ಭಾರತದ ಸ್ಪಿನ್ನರ್‌ಗಳ ವಿರುದ್ಧ ಸ್ವೀಪ್ ಶಾಟ್‌ಗಳನ್ನು ಆಡಲು ಪ್ರಯತ್ನಿಸಿದ ಆಸ್ಟ್ರೇಲಿಯಾದ ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಔಟಾದರು. ಇದರಿಂದಾಗಿ ಪ್ರವಾಸಿ ತಂಡ ಮೂರನೇ ದಿನವೇ ಸೋಲನ್ನು ಎದುರಿಸಬೇಕಾಯಿತು.
ಮೂರನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಇಂದೋರ್ ತಲುಪಿದ ಆಸ್ಟ್ರೇಲಿಯಾದ ಪ್ರಜೆ ಟಾಮ್, ಎಚ್ಚರಿಕೆಯಿಂದ ಯೋಚಿಸಿದ ನಂತರ ಸ್ವೀಪ್ ಹೊಡೆತಗಳನ್ನು ಆಡುವಂತೆ ತಮ್ಮ ದೇಶದ ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀಡಿದರು.
ಇದನ್ನೂ ಓದಿ: IND vs AUS: ಇಂಡೋ-ಆಸೀಸ್ ಟೆಸ್ಟ್ ಮುಗಿಯುತ್ತಿದ್ದಂತೆ ನಿವೃತ್ತಿ ಘೋಷಿಸಲಿದ್ದಾರೆ ಈ 5 ಆಟಗಾರರು!
ಪ್ರತಿ ಚೆಂಡನ್ನು ಸ್ವೀಪ್ ಮಾಡುವುದು ಅಥವಾ ರಿವರ್ಸ್ ಸ್ವೀಪ್ ಮಾಡುವುದು ಸರಿಯಾದ ಬ್ಯಾಟಿಂಗ್ ವಿಧಾನವಲ್ಲ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ತಮ್ಮ ಸಹಜ ಆಟವಾಡುವತ್ತ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.