Harris Rauf: ಟಿ-20 ವಿಶ್ವಕಪ್‌ 2024 ರ, ಪಾಕಿಸ್ತಾನ vs ಕೆನಡಾ ನಡುವಿನ ಪಂದ್ಯ ಮಂಗಳವಾರ(ಜೂನ್‌ 11) ರಂದು ನೂಯಾರ್ಕನ ನಸ್ಸೌ ಕೌಂಟಿ ಅಂತಾರಾಷ್ಟೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಬಿರುಸಿನ ಬೌಲಿಂಗ್‌ ಮಾಡುವ ಮೂಲಕ ಪಾಕ್‌ ತಂಡ ಕೆನಡಾ ತಂಡದ ಬ್ಯಾಟರ್‌ಗಳ ಬೆವರಿಳಿಸಿತು.


COMMERCIAL BREAK
SCROLL TO CONTINUE READING

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡ ಬಿರುಸಿನ ಬೌಲಿಂಗ್‌ ಮೂಲಕ ಎದುರಾಳಿ ತಂಡವನ್ನ ನಡುಗಿಸಿತ್ತು. ಪಾಕ್‌ ಬೌಲರ್‌ಗಳ ದಾಳಿಗೆ ಸಿಲುಕಿದ ಕೆನಡಾ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಲಷ್ಟೆ ಶಕ್ತವಾಯಿತು.


ಇದನ್ನೂ ಓದಿ: T20 Worldcup 2024: ಪಾಕಿಸ್ತಾನ ತಂಡಕ್ಕೆ ಮೊದಲ ಗೆಲುವು: ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಕೆನಡಾ.


ಕೆನಡಾ ವಿರುದ್ಧದ ಪಂದ್ಯದಲ್ಲಿ ವೇಗದ ಬೌಲರ್‌ ಹ್ಯಾರಿಸ್ ರೌಫ್ ಹೊಸ ದಾಖಲೆಯನ್ನ ಸೃಷ್ಟಿಸುವಲ್ಲಿ ಯಶಸ್ವಿಯಾದರು. ಟಿ20 ಯಲ್ಲಿ ವೇಗವಾಗಿ 100 ವಿಕೆಟ್‌ ಪಡೆಯುವ ಮೂಲಕ ಈ ದಾಖಲೆ ಸೃಷ್ಟಿಸಿದ ಮೂರನೆ ಬೌಲರ್‌ ಎನಿಸಿಕೊಂಡರು.


ಮಂಗಳವಾರ ಕೆನಡಾ ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾರಿಸ್ ನಾಲ್ಕು ಓವರ್‌ಗಳ ಬೌಲಿಂಗ್‌ ಮಾಡಿದರು. ನಾಲ್ಕು ಓವರ್‌ಗಳಲ್ಲಿ 26 ರನ್‌ ಅಷ್ಟೇ ನೀಡಿ 2 ವಿಕೆಟ್‌ ಪಡೆಯುವ ಮೂಲಕ ಈ ದಾಖಲೆಯನ್ನ ಮುಡಿಗೇರಿಕೊಂಡರು. 


71 ಪಂದ್ಯಗಳಲ್ಲಿ ವಿಕೆಟ್‌ ಉರುಳಿಸುವ ಮೂಲಕ ಹ್ಯಾರಿಸ್ ರೌಫ್ ಒಟ್ಟಾಗಿ 100 ವಿಕೆಟ್‌ ಕಲೆಹಾಕಿ ಈ ಮೈಲುಗಲ್ಲನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.