“ಮೈದಾನ ಮಾತ್ರವಲ್ಲ, ಹೆಂಡ್ತಿ ಜೊತೆನೂ ಸಖತ್ ಮ್ಯಾಚ್ ಆಡ್ತೀನಿ”- ಟೀಂ ಇಂಡಿಯಾದ ಸ್ಟಾರ್ ವೇಗಿಯ ಹೇಳಿಕೆ ವೈರಲ್
Mukesh Kumar: ದಕ್ಷಿಣ ಆಫ್ರಿಕಾ ಪ್ರವಾಸದ ಸಿದ್ಧತೆಗಳ ಬಗ್ಗೆ ಮಾತನಾಡಿದ ಮುಖೇಶ್, “ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ನಾಳೆ ಬೆಂಗಳೂರಿನಲ್ಲಿ ನಮ್ಮ ಎಲ್ಲಾ ತರಬೇತುದಾರರು ಭೇಟಿಯಾಗಲಿದ್ದಾರೆ. ನಾವು ಅಲ್ಲಿಂದ ವಿಮಾನ ಹತ್ತಲಿದ್ದೇವೆ” ಎಂದಿದ್ದಾರೆ.
Mukesh Kumar: ಭಾರತದ ಪರ ಎಲ್ಲಾ ಮೂರು ಮಾದರಿಗಳನ್ನು ಆಡುವ ವೇಗದ ಬೌಲರ್ ಮುಖೇಶ್ ಕುಮಾರ್ ಇತ್ತೀಚೆಗೆ ವಿವಾಹವಾದರು. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯ ಸಂದರ್ಭದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಖೇಶ್ ಕುಮಾರ್ ವಾಪಸಾಗಿ ಸರಣಿಯ ಕೊನೆಯ ಪಂದ್ಯಗಳನ್ನು ಆಡಿದ್ದರು. ಇದೀಗ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮದುವೆಯ ನಂತರ ಎರಡನೇ ಇನ್ನಿಂಗ್ಸ್ ಬಗ್ಗೆ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: W,W,W,W,W,W… 6.8 ಅಡಿ ಎತ್ತರದ ಲಂಬು ಬೌಲರ್ ಮೋಡಿಗೆ 6 ವಿಕೆಟ್ ಉಡೀಸ್
ವೀಡಿಯೋದಲ್ಲಿ ಮುಖೇಶ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವುದು ಕಂಡು ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ವೇಗಿ, "ನಾನು ಉತ್ತಮ ಭಾವನೆ ಹೊಂದಿದ್ದೇನೆ. ಮೈದಾನದಲ್ಲಿ ಮಾತ್ರವಲ್ಲ, ಹೆಂಡ್ತಿ ಜೊತೆನೂ ಸಖತ್ ಮ್ಯಾಚ್ ಆಡ್ತೀನಿ" ಎನ್ನುತ್ತಾ ಜೋರಾಗಿ ನಕ್ಕಿದ್ದಾರೆ ಮುಖೇಶ್.
ಇದಲ್ಲದೆ, ದಕ್ಷಿಣ ಆಫ್ರಿಕಾ ಪ್ರವಾಸದ ಸಿದ್ಧತೆಗಳ ಬಗ್ಗೆ ಮಾತನಾಡಿದ ಮುಖೇಶ್, “ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ನಾಳೆ ಬೆಂಗಳೂರಿನಲ್ಲಿ ನಮ್ಮ ಎಲ್ಲಾ ತರಬೇತುದಾರರು ಭೇಟಿಯಾಗಲಿದ್ದಾರೆ. ನಾವು ಅಲ್ಲಿಂದ ವಿಮಾನ ಹತ್ತಲಿದ್ದೇವೆ” ಎಂದಿದ್ದಾರೆ.
ಇದನ್ನೂ ಓದಿ: 13ನೇ ವಯಸ್ಸಿಗೆ ತನಗಿಂತ 30 ವರ್ಷ ಹಿರಿಯ ಗುರುವನ್ನೇ ವಿವಾಹವಾಗಿ ಇಸ್ಲಾಂಗೆ ಮತಾಂತರಗೊಂಡ ಡ್ಯಾನ್ಸರ್
ಮುಖೇಶ್ ಕುಮಾರ್ ಚಪ್ರಾದ ಬನಿಯಾಪುರ್ ಬೇರುಯಿ ಗ್ರಾಮದ ನಿವಾಸಿ ದಿವ್ಯಾ ಸಿಂಗ್ ಅವರನ್ನು ಮದುವೆಯಾಗಿದ್ದರು. ಡಿಸೆಂಬರ್ 4ರಂದು ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ