13ನೇ ವಯಸ್ಸಿಗೆ ತನಗಿಂತ 30 ವರ್ಷ ಹಿರಿಯ ಗುರುವನ್ನೇ ವಿವಾಹವಾಗಿ ಇಸ್ಲಾಂಗೆ ಮತಾಂತರಗೊಂಡ ನೃತ್ಯ ನಿರ್ದೇಶಕಿ

Dance legend Saroj Khan: ಸರೋಜ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ ಸುಮಾರು 350 ಚಿತ್ರಗಳ ಮೂರು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಇಂದಿಗೂ ನೃತ್ಯ ಲೋಕದಲ್ಲಿ ಸರೋಜ್ ಖಾನ್’ಗೆ ಪೈಪೋಟಿ ನೀಡುವವರು ಯಾರೂ ಇಲ್ಲ.

Written by - Bhavishya Shetty | Last Updated : Dec 8, 2023, 10:27 PM IST
    • ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದ ನೃತ್ಯ ನಿರ್ದೇಶಕಿ ಸರೋಜ್
    • ಸರೋಜ್ ಖಾನ್ ವೈಯಕ್ತಿಕ ಜೀವನದ ಬಗ್ಗೆಯೇ ಹೆಚ್ಚು ಸುದ್ದಿಯಲ್ಲಿದ್ದರು
    • ಸರೋಜ್ ಖಾನ್ ಮೂರು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು
13ನೇ ವಯಸ್ಸಿಗೆ ತನಗಿಂತ 30 ವರ್ಷ ಹಿರಿಯ ಗುರುವನ್ನೇ ವಿವಾಹವಾಗಿ ಇಸ್ಲಾಂಗೆ ಮತಾಂತರಗೊಂಡ ನೃತ್ಯ ನಿರ್ದೇಶಕಿ title=
Saroj Khan

Dance legend Saroj Khan: ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಾವಿರಾರು ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿರಬಹುದು. ಆದರೆ ಯುಗಾಂತರಗಳಿಂದ ಪ್ರೇಕ್ಷಕರ ಹೃದಯದಲ್ಲಿ ಉಳಿದಿರುವುದು ಒಂದಿಷ್ಟು ದಂತಕಥೆಗಳು. ಅಂದಹಾಗೆ ಹಿಂದಿ ಚಿತ್ರರಂಗದಲ್ಲಿ ಸಾವಿರಾರು ಕಲಾವಿದರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರು ಇಂದು ನಮ್ಮ ನಡುವೆ ಇಲ್ಲದಿರಬಹುದು. ಆದರೆ ಅವರ ನೃತ್ಯ ಸಂಯೋಜನೆಯ ಹಾಡುಗಳು ಇಂದಿಗೂ ನಮ್ಮ ನಡುವೆ ಚಿರಸ್ಥಾಯಿಯಾಗಿವೆ.

ಸರೋಜ್ ಖಾನ್ ಯಾವಾಗಲೂ ತನ್ನ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಬಗ್ಗೆಯೇ ಹೆಚ್ಚು ಸುದ್ದಿಯಲ್ಲಿದ್ದರು ಎಂಬುದು ಗಮನಾರ್ಹ.

ಇದನ್ನೂ ಓದಿ: ಬೆಕ್ಕಿನಂತೆ ಕಾಣುತ್ತೆ ಬೆಕ್ಕಲ್ಲ.. ಈ ಕಾಡುಪ್ರಾಣಿಯ ಮಲದಿಂದ ತಯಾರಾಗುತ್ತೆ ಜಗತ್ತಿನ ಅತಿ ದುಬಾರಿ ಕಾಫಿ! ಯಾವುದು ಆ ಪ್ರಾಣಿ?

ಸರೋಜ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ ಸುಮಾರು 350 ಚಿತ್ರಗಳ ಮೂರು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಇಂದಿಗೂ ನೃತ್ಯ ಲೋಕದಲ್ಲಿ ಸರೋಜ್ ಖಾನ್’ಗೆ ಪೈಪೋಟಿ ನೀಡುವವರು ಯಾರೂ ಇಲ್ಲ. ನೃತ್ಯ ಪ್ರಪಂಚದಲ್ಲಿ ಎಲ್ಲರೂ ಸರೋಜ್ ಖಾನ್ ಅವರನ್ನು 'ಮಾಸ್ಟರ್ ಜೀ' ಎಂದು ಕರೆಯುತ್ತಿದ್ದರು. ಆದರೆ ಈ ಹಣೆಪಟ್ಟಿಯನ್ನು ಸಾಧಿಸುವ ಪ್ರಯಾಣದಲ್ಲಿ ಅವರು ಕಠಿಣ ಹೋರಾಟವನ್ನು ಎದುರಿಸಬೇಕಾಯಿತು ಎಂಬುದು ಅನೇಕರಿಗೆ ತಿಳಿದಿರದ ಸಂಗತಿ.

ಸರೋಜ್ ಖಾನ್ ಅವರು ಕಿಶನ್‌ ಚಂದ್ ಸಿಧು ಸಿಂಗ್ ಮತ್ತು ನೋನಿ ಸಿಧು ಸಿಂಗ್ ಅವರಿಗೆ 1948ರಲ್ಲಿ ಜನಿಸಿದರು. ಮಾಧ್ಯಮ ವರದಿಗಳನ್ನು ಪ್ರಕಾರ, ವಿಭಜನೆಯ ಸಮಯದಲ್ಲಿ ಸರೋಜ್ ಖಾನ್ ಅವರ ಕುಟುಂಬವು ಭಾರತಕ್ಕೆ ಬಂದಿತ್ತು. ಸರೋಜ್ ಖಾನ್ ಅವರ ನಿಜವಾದ ಹೆಸರು ನಿರ್ಮಲಾ ಕಿಶನ್ ಚಂದ್ ಸಂಧು ಸಿಂಗ್ ನಾಗ್ಪಾಲ್.

ಸರೋಜ್ ಖಾನ್ ಬಾಲ್ಯದಿಂದಲೂ ಕಲಾಭಿಮಾನಿ. ಕೇವಲ ಮೂರು ವರ್ಷಗಳ ವಯಸ್ಸಿನಲ್ಲಿ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ‘ನಜರಾನಾ’ ಚಿತ್ರದಲ್ಲಿ ಮೊದಲು ಬೇಬಿ ಶ್ಯಾಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಸರೋಜ್ ಖಾನ್ ಅವರು ‘ಹವಾ ಹವಾಯಿ’ ಹಾಡಿನ ಮೂಲಕ ಜನಪ್ರಿಯತೆಯನ್ನು ಪಡೆದರು. ಸರೋಜ್ ಎಂಟು ಫಿಲ್ಮ್‌ಫೇರ್ ಮತ್ತು ಅಮೇರಿಕನ್ ಕೊರಿಯೋಗ್ರಫಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಸರೋಜ್ ಖಾನ್ ಅವರ 8 ತಿಂಗಳ ಮಗು ಕೊನೆಯುಸಿರೆಳೆದಿತ್ತು. ಆದರೆ ತನ್ನ ಕಂದನನ್ನು ಸಮಾಧಿ ಮಾಡಿದ ದಿನವೇ ‘ಹರೇ ರಾಮ ಹರೇ ಕೃಷ್ಣ’ ಚಿತ್ರದ ‘ಧಮ್ ಮಾರೋ ಧಮ್’ ಹಾಡಿನ ಶೂಟಿಂಗ್‌’ಗೆ ತೆರಳಬೇಕಿತ್ತು. ಇದೇ ಕಾರಣದಿಂದ ಸರೋಜ್ ಸಂಜೆ ಶೂಟಿಂಗ್’ಗೆ ಹೋಗಿದ್ದರು.

ಅಂದಹಾಗೆ ಡ್ಯಾನ್ಸ್ ಲೆಜೆಂಡ್ ಸರೋಜ್ ಖಾನ್ ಕೇವಲ 13 ನೇ ವಯಸ್ಸಿನಲ್ಲಿ ತನ್ನ ಗುರುವನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು. ಅಷ್ಟೇ ಅಲ್ಲದೆ, ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸಿದ ಸರೋಜ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಸರೋಜ್ ಖಾನ್ ಜೀವನಾಧಾರಿತ ಬಯೋಪಿಕ್ ತಯಾರಾಗುತ್ತಿದ್ದು, ಇದರಲ್ಲಿ ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: W,W,W,W,W,W… 6.8 ಅಡಿ ಎತ್ತರದ ಲಂಬು ಬೌಲರ್ ಮೋಡಿಗೆ 6 ವಿಕೆಟ್ ಉಡೀಸ್

ನವೆಂಬರ್ 22, 1948 ರಂದು ಹಿಂದೂ ಕುಟುಂಬದಲ್ಲಿ ಜನಿಸಿದ ಸರೋಜ್ ಖಾನ್ ಅವರ ಹೆಸರು ನಿರ್ಮಲಾ ನಾಗ್ಪಾಲ್. ಆಕೆಯ ಗುರು ಸೋಹನ್ ಲಾಲ್ ಅವರನ್ನು ಮದುವೆಯಾದಾಗ ಆಕೆಗೆ ಕೇವಲ 13 ವರ್ಷ ವಯಸ್ಸಾಗಿತ್ತು. ಆದರೆ ಅವರ ಗುರು ಸೋಹನ್ ಅದಾಗಲೇ ಮದುವೆಯಾಗಿದ್ದರು ಎಂದು ಹೇಳಲಾಗುತ್ತದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News