Deepika Padukone creates history: ಕತಾರ್ ನಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವಚಾಂಪಿಯನ್ ಶಿಪ್ ಗೆ ತೆರೆ ಎಳೆದಾಗಿದೆ. ಕಳೆದ ದಿನ ನಡೆದ ಫೈನಲ್ ಫೈಟ್ ಅದ್ಧೂರಿಯಾಗಿ ನೆರವೇರಿದ್ದು, ಅರ್ಜೆಂಟೀನಾ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇವೆಲ್ಲದಕ್ಕೂ ಮುನ್ನ ಫೈನಲ್ ಆರಂಭದ ಸಂದರ್ಭದಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣ ಮಾಡಲಾಗಿತ್ತು. ಈ ಟ್ರೋಫಿಯನ್ನು ಅನಾವರಣ ಮಾಡಿದ್ದು ಭಾರತೀಯ ಮಹಿಳೆ ಎಂಬುದು ನಮ್ಮ ಹೆಮ್ಮೆಯ ಸಂಗತಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ಕೊಡ್ತಿದ್ದಾರೆ ಈ ಮ್ಯಾಚ್ ವಿನ್ನರ್! ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್


ಭಾರತ ದೇಶಕ್ಕೆ ಇದೊಂದು ಹೆಮ್ಮೆಯ ಸಂಗತಿ. ಫಿಫಾ 2022ರ ವಿಶ್ವಕಪ್ ಟ್ರೋಫಿಯನ್ನು ಅನಾವರಣ ಮಾಡಿದ್ದು ಕರ್ನಾಟಕ ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ. ಈ ಮೂಲಕ ಮತ್ತೊಮ್ಮೆ ದೇಶಕ್ಕೆ ಗೌರವ ತಂದಿದ್ದಾರೆ. ಇನ್ನು ಫಿಫಾ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿದ್ದಾರೆ.


ಸೂಪರ್‌ಸ್ಟಾರ್ ಮತ್ತು ಭಾರತದ ಅತಿದೊಡ್ಡ ಜಾಗತಿಕ ರಾಯಭಾರಿ ದೀಪಿಕಾ ಪಡುಕೋಣೆ, ಫಿಫಾ ವಿಶ್ವಕಪ್ ಟ್ರೋಫಿಯನ್ನು ಲುಸೈಲ್ ಸ್ಟೇಡಿಯಂನಲ್ಲಿ ಅನಾವರಣಗೊಳಿಸಿದರು.


6.175 ಕೆಜಿ ತೂಕ, 18-ಕ್ಯಾರೆಟ್ ಚಿನ್ನ ಮತ್ತು ಮಲಾಕೈಟ್‌ನಿಂದ ಮಾಡಲ್ಪಟ್ಟ ಟ್ರೋಫಿ ಅನಾವರಣವು ಪಂದ್ಯದ ಪೂರ್ವ ಸಮಾರಂಭಗಳಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ. ಹೀಗಾಗಿ ಇದು ಭಾರತಕ್ಕೆ ಜಾಗತಿಕ ಕ್ಷಣವಾಗಿತ್ತು. ದೀಪಿಕಾ ಪಡುಕೋಣೆ ಅವರು ಫಿಫಾ ದಂತಕಥೆ ಮತ್ತು ಮಾಜಿ ಸ್ಪ್ಯಾನಿಷ್ ವೃತ್ತಿಪರ ಫುಟ್ಬಾಲ್ ಆಟಗಾರ, ಇಕರ್ ಕ್ಯಾಸಿಲಾಸ್ ಫೆರ್ನಾಂಡಿಸ್ ಜೊತೆ ಮೈದಾನದಲ್ಲಿ ಹೆಜ್ಜೆ ಹಾಕಿದರು.


ಬಿಳಿ ಅಂಗಿ, ಕಂದು ಬಣ್ಣದ ಓವರ್‌ಕೋಟ್, ಕಪ್ಪು ಬೆಲ್ಟ್ ಮತ್ತು ಮುದ್ದಾದ ನಗು ಚೆಲ್ಲುತ್ತಿದ್ದ ದೀಪಿಕಾ ಕಿಕ್ಕಿರಿದ ಜನರ ನಡುವೆಯೂ ಮಿನುಗುತ್ತಿದ್ದರು. ತನ್ನ ವೃತ್ತಿಜೀವನದ ಮೂಲಕ ಸೂಪರ್‌ಸ್ಟಾರ್ ಆಗಿರುವ ದೀಪಿಕಾ ಪಡುಕೋಣೆ, ತನ್ನ ತಾಯ್ನಾಡು ಭಾರತಕ್ಕೆ ಹೆಮ್ಮೆಪಡುವಂತ ಕೆಲಸ ಮಾಡಿದ್ದಾರೆ.  


ಇದಿಷ್ಟೇ ಅಲ್ಲದೆ ಇತ್ತೀಚೆಗೆಯಷ್ಟೇ ನಡೆದ ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ತೀರ್ಪುಗಾರ ಸದಸ್ಯರಾಗಿ ಆಯ್ಕೆ ಆಗಿದ್ದರು. ಇನ್ನು ಸೌಂದರ್ಯ ಅನುಪಾತದ ಪ್ರಕಾರ ವಿಶ್ವದ ಟಾಪ್ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಏಕೈಕ ಭಾರತೀಯಳಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: IND vs NZ: ಇಂಡೋ-ಕೀವೀಸ್ ODI ಸರಣಿಗೆ ಇವರೇ ಹೊಸ ನಾಯಕ: ಈ ಇಬ್ಬರು ತಂಡದಿಂದ ಔಟ್!


ಎರಡು ಬಾರಿ TIME ಮ್ಯಾಗಜೀನ್ ಪ್ರಶಸ್ತಿ ಪುರಸ್ಕೃತರಾದ ದೀಪಿಕಾ, ವಿವಿಧ ಮಾರ್ಗಗಳ ಮೂಲಕ ವಿಶ್ವ ನಾಯಕರ ಜೊತೆಗೆ ಹೆಚ್ಚಾಗಿ ಗುರುತಿಸಲ್ಪಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ