IND vs NZ: ಇಂಡೋ-ಕೀವೀಸ್ ODI ಸರಣಿಗೆ ಇವರೇ ಹೊಸ ನಾಯಕ: ಈ ಇಬ್ಬರು ತಂಡದಿಂದ ಔಟ್!

New Zealand Tour:  ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ ತಂಡ 3 ಟಿ20 ಮತ್ತು 3 ಏಕದಿನ ಸರಣಿಯನ್ನು ಆಡಲಿದೆ. ಈ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಿದೆ. ಈ ಬಾರಿ ಭಾರತ ವಿರುದ್ಧ ನ್ಯೂಜಿಲೆಂಡ್ ತಂಡದ ನಾಯಕತ್ವ ಕೇನ್ ವಿಲಿಯಮ್ಸನ್ ಕೈಯಲ್ಲಿರುವುದಿಲ್ಲ. ಈ ಸರಣಿಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

Written by - Bhavishya Shetty | Last Updated : Dec 19, 2022, 09:55 AM IST
    • ಜನವರಿ 18ರಿಂದ ನ್ಯೂಜಿಲೆಂಡ್‌ನ ಭಾರತ ಪ್ರವಾಸ ಆರಂಭ
    • ಈ ಪ್ರವಾಸದಲ್ಲಿ ಮತ್ತೊಮ್ಮೆ ಹೊಸ ನಾಯಕನನ್ನು ಭಾರತ ನೋಡಲಿದೆ
    • ನ್ಯೂಜಿಲೆಂಡ್ ತಂಡದ ನಾಯಕತ್ವ ಕೇನ್ ವಿಲಿಯಮ್ಸನ್ ಕೈಯಲ್ಲಿರುವುದಿಲ್ಲ
IND vs NZ: ಇಂಡೋ-ಕೀವೀಸ್ ODI ಸರಣಿಗೆ ಇವರೇ ಹೊಸ ನಾಯಕ: ಈ ಇಬ್ಬರು ತಂಡದಿಂದ ಔಟ್! title=
New Zealand Cricket

New Zealand Tour:  ಟೀಂ ಇಂಡಿಯಾ ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಈ ಪ್ರವಾಸದ ನಂತರ ಟೀಂ ಇಂಡಿಯಾ 6 ದೊಡ್ಡ ಸರಣಿಗಳನ್ನು ಆಡಲಿದೆ. ಟೀಂ ಇಂಡಿಯಾ ಈ ಎಲ್ಲಾ ಸರಣಿಗಳನ್ನು ತವರು ನೆಲದಲ್ಲಿ ಆಡಲಿದೆ. ಈ ಎಲ್ಲಾ ಸರಣಿಗಳನ್ನು ಐಪಿಎಲ್ 2023 ರ ಮೊದಲು ಆಯೋಜನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಟೀಂ ಇಂಡಿಯಾ ಮುಂದಿನ ಮೂರು ತಿಂಗಳಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ವಿರುದ್ಧ ಆತಿಥ್ಯ ವಹಿಸಲಿದೆ. ಜನವರಿ 18ರಿಂದ ನ್ಯೂಜಿಲೆಂಡ್‌ನ ಭಾರತ ಪ್ರವಾಸ ಆರಂಭವಾಗಲಿದ್ದು, ಈ ಪ್ರವಾಸದಲ್ಲಿ ಮತ್ತೊಮ್ಮೆ ಹೊಸ ನಾಯಕನನ್ನು ಭಾರತ ನೋಡಲಿದೆ.

ಇದನ್ನೂ ಓದಿ: FIFA World Cup 2022: ವಿಶ್ವಕಪ್ ಫುಟ್ಬಾಲ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಮೆಸ್ಸಿ..!

ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ ತಂಡ 3 ಟಿ20 ಮತ್ತು 3 ಏಕದಿನ ಸರಣಿಯನ್ನು ಆಡಲಿದೆ. ಈ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಿದೆ. ಈ ಬಾರಿ ಭಾರತ ವಿರುದ್ಧ ನ್ಯೂಜಿಲೆಂಡ್ ತಂಡದ ನಾಯಕತ್ವ ಕೇನ್ ವಿಲಿಯಮ್ಸನ್ ಕೈಯಲ್ಲಿರುವುದಿಲ್ಲ. ಈ ಸರಣಿಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನಕ್ಕೆ ಟಾಮ್ ಲ್ಯಾಥಮ್ ಅವರನ್ನು ಏಕದಿನ ಸರಣಿಯಲ್ಲಿ ನಾಯಕರನ್ನಾಗಿ ಮಾಡಲಾಗಿದೆ. ವಿಲಿಯಮ್ಸನ್ ಕಳೆದ ವಾರವಷ್ಟೇ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರು ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿದ್ದಾರೆ.

ಕೇನ್ ವಿಲಿಯಮ್ಸನ್ ಹೊರತುಪಡಿಸಿ ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಕೂಡ ಭಾರತ ಪ್ರವಾಸಕ್ಕೆ ಬರುವುದಿಲ್ಲ. ಭಾರತಕ್ಕಿಂತ ಮೊದಲು ನ್ಯೂಜಿಲೆಂಡ್ ಕೂಡ ಪಾಕಿಸ್ತಾನ ಪ್ರವಾಸ ಮಾಡಬೇಕಿದೆ. ಈ ಇಬ್ಬರೂ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುವುದನ್ನು ಕಾಣಬಹುದು. ಆದರೆ ಈ ಇಬ್ಬರೂ ಆಟಗಾರರಿಗೆ ಭಾರತದ ವಿರುದ್ಧ ವಿಶ್ರಾಂತಿ ನೀಡಲಾಗಿದೆ. ಟಿಮ್ ಸೌಥಿ ಅವರನ್ನು ಇತ್ತೀಚೆಗೆ ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಈ ಇಬ್ಬರೂ ಆಟಗಾರರ ಕೆಲಸದ ಹೊರೆ ನಿರ್ವಹಣೆಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ದಿನಾಂಕ, ಪಂದ್ಯದ ಸ್ಥಳ ವಿವರ ಇಲ್ಲಿದೆ

  • 18 ಜನವರಿ ಮೊದಲ ODI ಹೈದರಾಬಾದ್
  • 21 ಜನವರಿ 2ನೇ ODI ರಾಯ್‌ಪುರ
  • 24 ಜನವರಿ 3 ODI ಇಂದೋರ್
  • 27 ಜನವರಿ ಮೊದಲ T20 ರಾಂಚಿ
  • 29 ಜನವರಿ ಎರಡನೇ ಟಿ20 ಲಕ್ನೋ
  • 1 ಫೆಬ್ರವರಿ 3 T20 ಅಹಮದಾಬಾದ್

ಭಾರತದ ಸರಣಿಗೆ ನ್ಯೂಜಿಲೆಂಡ್ ತಂಡ:

ಟಾಮ್ ಲ್ಯಾಥಮ್ (ಸಿ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಹೆಚ್.

ಇದನ್ನೂ ಓದಿ: Argentina vs France FIFA World Cup 2022 final : ವ್ಯರ್ಥವಾದ ಎಂಬಪ್ಪೆ ಹ್ಯಾಟ್ರಿಕ್ ಶ್ರಮ, ಅರ್ಜೆಂಟೈನಾಗೆ ವಿಶ್ವ ಚಾಂಪಿಯನ್ ಪಟ್ಟ

ಪಾಕಿಸ್ತಾನ ಸರಣಿಗೆ ನ್ಯೂಜಿಲೆಂಡ್ ತಂಡ:

ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್, ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News