ನವದೆಹಲಿ: ಗುರುವಾರದಂದು ಪೆರು ದೇಶವು ವಿಶ್ವಕಪ್ ಪುಟ್ಬಾಲ್ ನ 32 ತಂಡವಾಗಿ ಪ್ರವೇಶ ಪಡೆದ ನಂತರ ಪುಟ್ಬಾಲ್ ಆಡಳಿತ ಮಂಡಳಿಯು ಇಂದು ನಾಲ್ಕು ಹಂತದ ತಂಡಗಳ ಪಟ್ಟಿಯನ್ನು ರಷ್ಯಾದಲ್ಲಿ ಘೋಷಿಸಿದೆ.


COMMERCIAL BREAK
SCROLL TO CONTINUE READING

ಪೆರು ದೇಶವು ದಕ್ಷಿಣ ಅಮೇರಿಕಾದ ಪುಟ್ಬಾಲ್ ಒಕ್ಕೂಟದ ಮೂಲಕ ಆಯ್ಕೆಯಾದ 5 ನೆಯ ತಂಡವಾಗಿದ್ದು, ಇದು ಒಸಿಯಾನಾ ಪುಟ್ಬಾಲ್ ಒಕ್ಕೂಟದ ನ್ಯೂಜಿಲೆಂಡ ತಂಡವನ್ನು 2-0 ಅಂತರದಲ್ಲಿ ಒಕ್ಕೂಟವನ್ನು ಸೋಲಿಸಿತು.


ಫಿಫಾ ಪ್ರಕಟಣೆಯು  ನಾಲ್ಕು ಲೀಗ್ ಗಳ ತಂಡಗಳ ಪಟ್ಟಿಯನ್ನು ತಯಾರಿಸುವ ಕುರಿತಾಗಿ ಆಯ್ಕೆಯ ಸಮಿತಿಯಿಂದ ಸೆಪ್ಟೆಂಬರ್ ತಿಂಗಳಲ್ಲೇ ನಿರ್ಧಾರವಾಗಿತ್ತು ಎಂದು ತಿಳಿಸಿದೆ. ಪ್ರತಿ ಲೀಗ್ ನಲ್ಲಿ 8 ತಂಡಗಳಂತೆ  ನಾಲ್ಕು ಲೀಗ್ ಗಳನ್ನೂ ಮಾಡಲಾಗಿದೆ. ಒಟ್ಟು 32 ತಂಡಗಳು ಈ ವಿಶ್ವಕಪ್ ಪಂದ್ಯದಲ್ಲಿ ಪಾಲ್ಗೊಳ್ಳುತ್ತವೆ. ಅಲ್ಲದೆ, ಫಿಫಾದ ನಿಯಮಾವಳಿಗಳಂತೆ ಇದನ್ನು ತಯಾರಿಸಲಾಗಿದೆ ಎಂದು ಫಿಪಾ ಹೇಳಿದೆ. 


ಫಿಪಾ ಘೋಷಿಸಿರುವ ತಂಡಗಳ ಪಟ್ಟಿ ಇಂತಿದೆ 


ಗುಂಪು 1  ಗುಂಪು 2 ಗುಂಪು3  ಗುಂಪು 4
ರಷ್ಯಾ ಸ್ಪೇನ್   ಡೆನ್ಮಾರ್ಕ್  ಸರ್ಬಿಯಾ
ಜರ್ಮನಿ ಪೆರು ಐಸ್ಲ್ಯಾಂಡ್ ನೈಜೀರಿಯಾ
ಬ್ರೆಜಿಲ್  ಸ್ವಿಜರ್ಲ್ಯಾಂಡ್ ಕೋಸ್ಟಾರಿಕಾ  ಆಸ್ಟ್ರೇಲಿಯಾ
ಪೋರ್ಚುಗಲ್ ಇಂಗ್ಲೆಂಡ್ ಸ್ವೀಡನ್ ಜಪಾನ್
ಅರ್ಜೆಂಟೀನಾ ಕೊಲಂಬಿಯಾ ಟುನೀಶಿಯ ಮೊರಾಕೊ
ಬೆಲ್ಜಿಯಂ ಮೆಕ್ಸಿಕೋ ಈಜಿಪ್ಟ್ ಪನಾಮ
ಪೋಲೆಂಡ್ ಉರುಗ್ವೆ ಸೆನೆಗಲ್ ದಕ್ಷಿಣ ಕೊರಿಯಾ
ಫ್ರಾನ್ಸ್    ಕ್ರೊಯೇಷಿಯಾ  ಇರಾನ್  ಸೌದಿ ಅರೇಬಿಯಾ