ಫಿಫಾ ವಿಶ್ವಕಪ್ 2018: ರಿಪೋರ್ಟಿಂಗ್ ವೇಳೆ ಪತ್ರಕರ್ತೆಗೆ ಮುತ್ತಿಟ್ಟ ಭೂಪ ! ಮುಂದೆ ಆಗಿದ್ದೇನು?
ಮಾಸ್ಕೋ: ವಿಶ್ವಕಪ್ ಪುಟ್ಬಾಲ್ ಕುರಿತು ಲೈವ್ ವರದಿ ಮಾಡುತ್ತಿದ್ದ ಮಹಿಳೆಗೆ ವ್ಯಕ್ತಿಯೋರ್ವನು ಚುಂಬಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.
ಈ ಜೂಲಿತ್ ಗೊಂಜಾಲೆಜ್ ತೆರಾನ್ ಎನ್ನುವ ಕೊಲಂಬಿಯನ್ ಪತ್ರಕರ್ತೆ ಜರ್ಮನ್ ನ್ಯೂಸ್ ಚಾನೆಲ್ ಗಾಗಿ ಸುದ್ದಿ ಕವರ್ ಮಾಡುತ್ತಿದ್ದ ವೇಳೆ ಪುಟ್ಬಾಲ್ ಅಭಿಮಾನಿಯೊಬ್ಬ ಲೈವ್ ಕವರಿಂಗ್ ವೇಳೆಯೇ ಪತ್ರಕರ್ತೆ ಕೆನ್ನೆಗೆ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ್ದಾನೆ.
ಆದರೆ ಅಚ್ಚರಿಯೆಂದರೆ ಈ ಮಹಿಳೆ ಎಂದಿನಂತೆ ತನ್ನ ಲೈವ್ ಕವರಿಂಗ್ ಮುಂದುವೆಸಿದ್ದಾಳೆ. ಈಗ ವೀಡಿಯೋ ಈಗ ವೈರಲ್ ಆಗಿದ್ದು. ಈ ಘಟನೆಯ ನಂತರ ಆ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾಳೆ, ಆದರೆ ಅವನು ಆಗಲೇ ಅಲ್ಲಿಂದ ಕಾಲ್ಕಿತ್ತಿದ್ದ ಎಂದು ತಿಳಿದುಬಂದಿದೆ. ಈಗ ಘಟನೆಗೆ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗಿವೆ.