FIFA World Cup: ಅರ್ಜೆಂಟಿನಾ-ನೆದರ್ಲ್ಯಾಂಡ್ಸ್ ಪಂದ್ಯದ ವೇಳೆ ಮೈದಾನಕ್ಕಿಳಿದ ಪಾರ್ನ್ ಸ್ಟಾರ್ ಮಾಡಿದ್ದೇನು ನೀವೇ ಓದಿ
Argentina vs Netherlands: ಅರ್ಜೆಂಟಿನಾ ಹಾಗೂ ನೆದರ್ಲ್ಯಾಂಡ್ಸ್ ಮಧ್ಯೆ ಶುಕ್ರವಾರ ತಡರಾತ್ರಿ ನಡೆದ ಈ ಕ್ವಾರ್ಟರ್ ಫೈನಲ್ ಪಂದ್ಯ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ. ಮೈದಾನದಲ್ಲಿ ಆಟಗಾರರ ನಡುವೆ ಉದ್ವಿಗ್ನತೆಯ ನಡುವೆ, ಪೆನಾಲ್ಟಿ ಶೂಟೌಟ್ನಲ್ಲಿ ಫಲಿತಾಂಶ ಹೊರಬಿದ್ದಿದೆ.
FIFA World Cup Quarter Final Match: ಫೀಫಾ ವರ್ಲ್ಡ್ ಕಪ್ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಶುಕ್ರವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 4-3 ಗೋಲುಗಳಿಂದ ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಿದೆ. ಈ ಪಂದ್ಯ ಸಾಕಷ್ಟು ಕೋಲಾಹಲದಿಂದ ಕೂಡಿತ್ತು. ಮೈದಾನದಲ್ಲಿ ಆಟಗಾರರ ನಡುವೆ ಕಂಡು ಬಂದ ಭಾರಿ ಉದ್ವಿಗ್ನತೆಯ ನಡುವೆಯೇ, ಒಬ್ಬ ವ್ಯಕ್ತಿ ಮೈದಾನಕ್ಕೆ ಪ್ರವೇಶಿಸಿದ್ದಾನೆ, ಇದರಿಂದಾಗಿ ಪಂದ್ಯವನ್ನು ಸ್ವಲ್ಪ ಕಾಲ ನಿಲ್ಲಿಸಬೇಕಾದ ಪ್ರಸಂಗ ಎದುರಾಗಿತ್ತು.
ಮೈದಾನಕ್ಕೆ ಪ್ರವೇಶಿಸಿದ ಈ ವ್ಯಕ್ತಿಯ ಹೆಸರು ವಿಟಾಲಿ ಜೊಡೊರೊವೆಟ್ಸ್ಕಿ, ಈತ ರಷ್ಯಾದ ಯೂಟ್ಯೂಬರ್ ಆಗಿದ್ದಾನೆ ಎನ್ನಲಾಗಿದೆ. ಇದಕ್ಕೂ ಮುನ್ನ 2014ರ ವಿಶ್ವಕಪ್ ಫೈನಲ್‌ನಲ್ಲೂ ಆತ ಇದೇ ಕೆಲಸ ಮಾಡಿದ್ದನು ಎನ್ನಲಾಗಿದೆ. ಶುಕ್ರವಾರ, ವಿಟಾಲಿ ಟಾಪ್ ಲೆಸ್ ಆಗಿ ಮೈದಾನಕ್ಕೆ ಪ್ರವೇಶಿಸಿದ್ದಾನೆ ಮತ್ತು ಆತ ತನ್ನ ಎದೆಯ ಮೇಲೆ ‘ವಿಟಾಲಿ GOAT’ ಎಂದು ಬರೆದುಕೊಂಡಿದ್ದ.
ಯೂಟ್ಯೂಬ್‌ನಲ್ಲಿ 10 ಮಿಲಿಯನ್ ಚಂದಾದಾರರು
ವಿಟಾಲಿ ಅಶ್ಲೀಲ ಚಿತ್ರಗಳಲ್ಲಿ ಕೆಲಸ ಮಾಡಿದ್ದಾನೆ ಎನ್ನಲಾಗಿದೆ. YouTube ನಲ್ಲಿ ಆತ 10 ಮಿಲಿಯನ್ ಗೂ ಅಧಿಕ ಚಂದಾದಾರರನ್ನು ಹೊಂದಿದ್ದಾನೆ. ವಿಟಾಲಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಎಕ್ಸ್-ರೇಟೆಡ್ ವೀಡಿಯೊಗಳನ್ನು ನಿಯಮಿತವಾಗಿ ಅಪ್‌ಲೋಡ್ ಮಾಡುತ್ತಾನೆ.
ಇದನ್ನೂ ಓದಿ-FIFAದಿಂದ ಅರ್ಜೆಂಟಿನಾ ಹೊರಬೀಳುವುದು ಜಸ್ಟ್ ಮಿಸ್: ಎದ್ದು ನಿಂತ ಮೆಸ್ಸಿ ಪಡೆ ಸೆಮೀಸ್ ಪ್ರವೇಶ
ಅಂದಹಾಗೆ, 2019 ರಲ್ಲಿ, ವಿಟಾಲಿಯ ಮಾಜಿ ಗೆಳತಿ ಕಿನ್ಸೆ ವೊಲಾನ್ಸ್ಕಿ ಕೂಡ ಬಿಕಿನಿಯನ್ನು ಧರಿಸಿ ಫುಟ್ಬಾಲ್ ಮೈದಾನಕ್ಕೆ ಪ್ರವೇಶಿಸಲು ಯತ್ನಿಸಿದ್ದಳು. ಈ ಘಟನೆಯ ನಂತರ ಇಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು. ಕಿನ್ಸೆ ವೊಲಾನ್ಸ್ಕಿ ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್ ಹೊಂದಿದ್ದಾಳೆ,
ಇದನ್ನೂ ಓದಿ-FIFA World Cup 2022: ಬ್ರೆಜಿಲ್ ಸೋಲಿಗೆ ಕಾರಣವಾಯ್ತಾ ಬೆಕ್ಕಿನ ಶಾಪ..!
ಇದಕ್ಕೂ ಮೊದಲು ಮತ್ತೊಬ್ಬ ವ್ಯಕ್ತಿ ಮೈದಾನಕ್ಕೆ ಪ್ರವೇಶಿಸಿದ್ದ
ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ವಿಟಾಲಿ ಹೊರತುಪಡಿಸಿ ಮತ್ತೊಬ್ಬ ವ್ಯಕ್ತಿ ಕೂಡ ಮೈದಾನದೊಳಗೆ ಓಡಿ ಓಡಿಬಂದಿದ್ದ. 75ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.