FIFAದಿಂದ ಅರ್ಜೆಂಟಿನಾ ಹೊರಬೀಳುವುದು ಜಸ್ಟ್ ಮಿಸ್: ಎದ್ದು ನಿಂತ ಮೆಸ್ಸಿ ಪಡೆ ಸೆಮೀಸ್ ಪ್ರವೇಶ

FIFA World Cup 2022: ಅರ್ಜೆಂಟೀನಾ 82 ನಿಮಿಷಗಳ ಮುನ್ನಡೆ ಸಾಧಿಸಿತ್ತು. ಈ ಪಂದ್ಯದಲ್ಲಿ ಅರ್ಜೆಂಟೀನಾ 80 ನಿಮಿಷಗಳವರೆಗೆ 2-0 ಮುನ್ನಡೆ ಸಾಧಿಸಿತ್ತು. ಆದರೆ ನಂತರ ನೆದರ್ಲ್ಯಾಂಡ್ಸ್ ಮೊದಲು ಸ್ಕೋರ್ ಅನ್ನು ಸಮಗೊಳಿಸಿತು. ಪಂದ್ಯವನ್ನು ಪೆನಾಲ್ಟಿ ಶೂಟೌಟ್ಗೆ ತೆಗೆದುಕೊಂಡಿತು.ಅರ್ಜೆಂಟೀನಾ 82 ನಿಮಿಷಗಳ ಮುನ್ನಡೆ ಸಾಧಿಸಿತ್ತು. ಈ ಪಂದ್ಯದಲ್ಲಿ ಅರ್ಜೆಂಟೀನಾ 80 ನಿಮಿಷಗಳವರೆಗೆ 2-0 ಮುನ್ನಡೆ ಸಾಧಿಸಿತ್ತು. ಆದರೆ ನಂತರ ನೆದರ್ಲ್ಯಾಂಡ್ಸ್ ಮೊದಲು ಸ್ಕೋರ್ ಅನ್ನು ಸಮಗೊಳಿಸಿತು. ಪಂದ್ಯವನ್ನು ಪೆನಾಲ್ಟಿ ಶೂಟೌಟ್ಗೆ ತೆಗೆದುಕೊಂಡಿತು.

Written by - Bhavishya Shetty | Last Updated : Dec 10, 2022, 07:36 AM IST
    • ಫಿಫಾ ವಿಶ್ವಕಪ್-2022ರಲ್ಲಿ ಅರ್ಜೆಂಟೀನಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ
    • ಅರ್ಜೆಂಟೀನಾ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಸೆಮೀಸ್ ಗೆ ಎಂಟ್ರಿ ಕೊಟ್ಟಿದೆ
    • 5 ಬಾರಿಯ ಚಾಂಪಿಯನ್ ಬ್ರೆಜಿಲ್ ಕನಸು ನುಚ್ಚುನೂರಾಗಿದೆ
FIFAದಿಂದ ಅರ್ಜೆಂಟಿನಾ ಹೊರಬೀಳುವುದು ಜಸ್ಟ್ ಮಿಸ್: ಎದ್ದು ನಿಂತ ಮೆಸ್ಸಿ ಪಡೆ ಸೆಮೀಸ್ ಪ್ರವೇಶ title=
FIFA World Cup-2022

FIFA World Cup 2022: ಫಿಫಾ ವಿಶ್ವಕಪ್-2022ರಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅರ್ಜೆಂಟೀನಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಅಲ್ ದಯೆನ್‌ ನ ಲೌಸನ್ನೆ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಸೆಮೀಸ್ ಗೆ ಎಂಟ್ರಿ ಕೊಟ್ಟಿದೆ. ಈ ಪಂದ್ಯದಲ್ಲಿ, ನಿಗದಿತ ಸಮಯದವರೆಗೆ ಸ್ಕೋರ್ 2-2 ಗೆ ಸಮನಾಗಿತ್ತು. ಆದರೆ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಸಾಧಿಸಿತು.

ಇದನ್ನೂ ಓದಿ: Horoscope Today: ಈ ರಾಶಿಯವರ ಕನಸು ನನಸಾಗುವುದು, ಅದೃಷ್ಟದ ಬಾಗಿಲು ತೆರೆಯಲಿದೆ

ಅರ್ಜೆಂಟೀನಾ 82 ನಿಮಿಷಗಳ ಮುನ್ನಡೆ ಸಾಧಿಸಿತ್ತು. ಈ ಪಂದ್ಯದಲ್ಲಿ ಅರ್ಜೆಂಟೀನಾ 80 ನಿಮಿಷಗಳವರೆಗೆ 2-0 ಮುನ್ನಡೆ ಸಾಧಿಸಿತ್ತು. ಆದರೆ ನಂತರ ನೆದರ್ಲ್ಯಾಂಡ್ಸ್ ಮೊದಲು ಸ್ಕೋರ್ ಅನ್ನು ಸಮಗೊಳಿಸಿತು. ಪಂದ್ಯವನ್ನು ಪೆನಾಲ್ಟಿ ಶೂಟೌಟ್ಗೆ ತೆಗೆದುಕೊಂಡಿತು.

ನೆಹುಯೆಲ್ ಮೊಲಿನಾ 35ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅರ್ಜೆಂಟೀನಾ ಪರ 1-0 ಅಂಕ ಗಳಿಸಿದರು. ಈ ಮುನ್ನಡೆಯೊಂದಿಗೆ ಅರ್ಜೆಂಟೀನಾ ವಿರಾಮದವರೆಗೂ ಮುಂದಿತ್ತು. ನಂತರ ಅನುಭವಿ ಆಟಗಾರ ಲಿಯೊನೆಲ್ ಮೆಸ್ಸಿ 73ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಈ ಬಳಿಕ ನೆದರ್ಲ್ಯಾಂಡ್ಸ್ ನ ವೂಟ್ ವೆಗೋರ್ಸ್ಟ್ ಸತತ ಎರಡು ಗೋಲುಗಳನ್ನು ಗಳಿಸಿ ಸ್ಕೋರ್ ಅನ್ನು ಸಮಗೊಳಿಸಿದರು. ಅವರು 83ನೇ ನಿಮಿಷದಲ್ಲಿ ಮೊದಲ ಗೋಲು ಮತ್ತು ನಂತರ ಹೆಚ್ಚುವರಿ ಸಮಯದಲ್ಲಿ (90+11) ಸ್ಕೋರ್ 2-2 ಮಾಡಿದರು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-3 ಅಂತರದಲ್ಲಿ ಜಯ ಸಾಧಿಸಿತು.

ಇದನ್ನೂ ಓದಿ: ಕುಂಭ ರಾಶಿಯಲ್ಲಿ ಶನಿಯ ಸಂಚಾರ: ಈ ರಾಶಿಯವರಿಗೆ ಬಹಳಷ್ಟು ತೊಂದರೆಗಳು ಎದುರಾಗಲಿವೆ!

ಇದಕ್ಕೂ ಮುನ್ನ ನಡೆದ ಕ್ರೊವೇಷಿಯಾ ಮತ್ತು ಬ್ರೆಜಿಲ್ ನಡುವಿನ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಬ್ರೆಜಿಲ್ ಕನಸು ನುಚ್ಚುನೂರಾಗಿದೆ. ನಿಗದಿತ ಸಮಯದವರೆಗೆ ಯಾವುದೇ ಗೋಲು ಬರಲಿಲ್ಲ. ನಂತರ ಹೆಚ್ಚುವರಿ ಸಮಯದಲ್ಲಿ ಉಭಯ ತಂಡಗಳು 1-1 ಗೋಲು ಗಳಿಸಿದವು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಕ್ರೊವೇಷಿಯಾ 4–2 ಗೋಲುಗಳಿಂದ ಗೆದ್ದಿತು. ನೆಯ್ಮಾರ್ ಹೆಚ್ಚುವರಿ ಸಮಯದಲ್ಲಿ ಬ್ರೆಜಿಲ್ ತಂಡವನ್ನು ಮುನ್ನಡೆಸಿದರು. ಆದರೆ ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ. ಕ್ರೊವೆಷಿಯಾದ ಬ್ರೂನೋ ಪೆಟ್ಕೊವಿಕ್ 117 ನೇ ನಿಮಿಷದಲ್ಲಿ ತಂಡಕ್ಕೆ ಗೋಲು ತಂದುಕೊಟ್ಟರು. ಈ ಮೂಲಕ ಬ್ರೆಜಿಲ್ ಹೊರಬಿತ್ತು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News