Canada vs England Hockey Match: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುರುವಾರದಂದು ಪುರುಷರ ಹಾಕಿ ಪಂದ್ಯವು ಇಂಗ್ಲೆಂಡ್ ಮತ್ತು ಕೆನಡಾ ನಡುವೆ ನಡೆದಿದೆ. ನೋಡಲು ಹಾಕಿ ಪಂದ್ಯವಾದರೂ ಇಲ್ಲಿ ಆಟಗಾರರ ನಡುವೆ ಕುಸ್ತಿ ಪಂದ್ಯಾಟ ನಡೆದಿತ್ತು. ಹೌದು ಇಂಗ್ಲೆಂಡ್ ಮತ್ತು ಕೆನಡಾದ ಆಟಗಾರರು ಕಿತ್ತಾಡಿಕೊಂಡಿದ್ದಾರೆ. ಇದನ್ನು ಕಂಡ ಪ್ರೇಕ್ಷಕರು ಶಾಕ್‌ ಆಗಿದ್ದಾರೆ. ಇನ್ನು ಗಲಾಟೆ ಬಿಡಿಸಲು ರೆಫ್ರಿಗಳು ಮಧ್ಯ ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಗಲಾಟೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಾಳಿಪಟ-2 ಬಾನಂಗಳದಲ್ಲಿ ಹಾರಿಸಲು ಡೇಟ್‌ ಫಿಕ್ಸ್‌: ಗಣಿ-ಭಟ್ರ ಕಾಂಬಿನೇಷನ್‌ ಮತ್ತೆ ತೆರೆಮೇಲೆ


ಸೆಮಿಫೈನಲ್ ತಲುಪಬೇಕಾದರೆ ಇಂಗ್ಲೆಂಡ್ ಆಟಗಾರರು ದೊಡ್ಡ ಅಂತರದಿಂದ ಗೆಲ್ಲಬೇಕಿತ್ತು. ಇದಕ್ಕಾಗಿ ಕೆನಡಾ ವಿರುದ್ಧ ಗೋಲು ಗಳಿಸಲು ಇಂಗ್ಲೆಂಡ್ ತಂಡದ ಆಟಗಾರರು ನಿರಂತರ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದ್ದರು. ಆಗ ಬಾಲರಾಜ್ ಪನೇಸರ್ ಎಂಬ ಹಾಕಿ ಆಟಗಾರನ ಸ್ಟಿಕ್ ಇಂಗ್ಲೆಂಡಿನ ಕ್ರಿಸ್ ಗ್ರಿಫಿತ್ ಕೈಗೆ ತಾಗಿ ಸಿಕ್ಕಿಬಿದ್ದಿತು. ಇದರಿಂದ ಕೆರಳಿದ ಗ್ರಿಫಿತ್, ಪನೇಸರ್ ಅವರನ್ನು ತಳ್ಳಿದರು. ಇದು ಪನೇಸರ್ ಅವರನ್ನು ಕೋಪಗೊಳ್ಳುವಂತೆ ಮಾಡಿತು. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಟೀ ಶರ್ಟ್ ಹಿಡಿದುಕೊಂಡು ಎಳೆದಾಡ ತೊಡಗಿದರು. ಹಾಕಿ ಮೈದಾನ ಸಂಪೂರ್ಣ ಕುಸ್ತಿ ಕಣದಂತೆ ಆಗಿತ್ತು. 


ಬಾಲರಾಜ್ ಪನೇಸರ್ ಮತ್ತು ಗ್ರಿಫಿತ್ ನಡುವೆ ಎಂತಹ ಭೀಕರ ಕಾದಾಟ ನಡೆದಿತ್ತು ಎಂದರೆ ಅದನ್ನು ನೋಡಿದ ಪ್ರೇಕ್ಷಕರು ಶಾಕ್‌ ಆಗಿದ್ದರು. ನಂತರ ರೆಫರಿ ಮಧ್ಯ ಪ್ರವೇಶಿಸಬೇಕಾಯಿತು. ಇದಾದ ಬಳಿಕ ಉಭಯ ತಂಡಗಳ ಆಟಗಾರರು ಬಂದು ಇಬ್ಬರನ್ನೂ ಬೇರ್ಪಡಿಸಿದರು. ಇದಾದ ನಂತರ ರೆಫರಿ ಕೆನಡಾದ ಬಲರಾಜ್ ಪನೇಸರ್ ಅವರಿಗೆ ರೆಡ್ ಕಾರ್ಡ್ ತೋರಿಸಿ ಪಂದ್ಯದಿಂದ ಹೊರ ಕಳುಹಿಸಿದರು. ಇದೇ ವೇಳೆ ಇಂಗ್ಲೆಂಡ್ ನ ಕ್ರಿಸ್ ಗ್ರಿಫಿತ್ ಹಳದಿ ಕಾರ್ಡ್ ತೋರಿಸಿ ಎಚ್ಚರಿಕೆ ನೀಡಿದರು.


ಇದನ್ನೂ ಓದಿ: ಇನ್ಮುಂದೆ ನೀವು ಡ್ರೈವಿಂಗ್ ಲೈಸನ್ಸ್ ಗಾಗಿ ಆರ್‌ಟಿಒ ಬಳಿ ಡ್ರೈವಿಂಗ್ ಟೆಸ್ಟ್ ಮಾಡುವಂತಿಲ್ಲ...!


ಈ ಗಲಾಟೆ ನಡೆದ ಬಳಿಕ ಕೆನಡಾ ಒಬ್ಬ ಆಟಗಾರನ ಕೊರತೆಯನ್ನು ಅನುಭವಿಸಿತು. ಇದೇ ಕಾರಣದಿಂದ ಕೆನಡಾ ತಂಡ ಪಂದ್ಯವನ್ನು ಸೋತಿತು. ಇಂಗ್ಲೆಂಡ್ ಪಂದ್ಯವನ್ನು 11-2 ರಿಂದ ಗೆದ್ದುಕೊಂಡಿತು. ಆದರೆ ಇನ್ನೂ ತಂಡವು ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಸೆಮಿಫೈನಲ್‌ಗೆ ಪ್ರವೇಶಿಸಲು ಅವರು 15 ಗೋಲುಗಳ ಅಂತರದಿಂದ ಗೆಲ್ಲಬೇಕಾಗಿತ್ತು. ಇನ್ನು ಭಾರತ ತಂಡ ಸೆಮಿಫೈನಲ್ ತಲುಪಿದೆ. ಕಾಮನ್‌ವೆಲ್ತ್ ಇತಿಹಾಸದಲ್ಲಿ ಇಲ್ಲಿಯವರೆಗೆ ಟೀಂ ಇಂಡಿಯಾ ಚಿನ್ನದ ಪದಕ ಗೆದ್ದಿಲ್ಲ. ಆದರೆ ಈ ಬಾರಿ ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ಇತಿಹಾಸವನ್ನು ರಚಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.