ಬಾನಂಗಳದಲ್ಲಿ ಗಾಳಿಪಟ-2 ಹಾರಲು ಫಿಕ್ಸ್‌ ಆಯ್ತು ಡೇಟ್‌: ಗಣಿ-ಭಟ್ರ ಕಾಂಬಿನೇಷನ್‌ ಮತ್ತೆ ತೆರೆಮೇಲೆ

ಇನ್ನು ʼನೀನು ಬಗೆಹರಿಯದ ಹಾಡುʼ ಮಾತ್ರ ಆಹಾ..! ಅನ್ನುವಂತಿದೆ. ರಿಲೀಸ್ ಆಗಿರುವ ಎಲ್ಲಾ ಹಾಡುಗಳು ಮಜಾ ಕೊಟ್ಟಿದೆ ಅಂದ್ರೆ ತಪ್ಪಾಗಲ್ಲ. ಸ್ಯಾಂಡಲ್‌ವುಡ್‌ನ ಸ್ಟಾರ್‌ ಡೈರೆಕ್ಟರ್‌ ಯೋಗರಾಜ್‌ ಭಟ್‌ ಡೈರೆಕ್ಷನ್ ಅಂದ್ರೆ ಗೊತ್ತಲ್ಲ. ಅದು ವಿಭಿನ್ನತೆಯ ಆಗರವೇ ಆಗಿರುತ್ತದೆ.  ಭಟ್‌ರ ಸಿನಿಮಾ ನೋಡಿದ್ರೆ ಭರ್ಜರಿ ಕಿಕ್ ಸಿಗುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ ಬಿಡಿ. ಅಷ್ಟು ಸುಂದರವಾಗಿ ಕಥೆ ಕಟ್ಟೋದ್ರಲ್ಲಿ ಎತ್ತಿದ ಕೈ ನಮ್ಮ ಯೋಗರಾಜ್ ಭಟ್ರದ್ದು. 

Written by - YASHODHA POOJARI | Edited by - Bhavishya Shetty | Last Updated : Aug 5, 2022, 01:54 PM IST
  • ಆಗಸ್ಟ್ 12ಕ್ಕೆ ಅದ್ಧೂರಿಯಾಗಿ ʼಗಾಳಿಪಟ 2ʼ ಸಿನಿಮಾ ರಿಲೀಸ್‌
  • ಮತ್ತೆ ತೆರೆಮೇಲೆ ಬರಲಿದೆ ಗಣಿ-ಭಟ್ರ ಕಾಂಬಿನೇಷನ್‌
  • ಬಹುದೊಡ್ಡ ತಾರಾಗಣ ಒಳಗೊಂಡಿರುವ ಸಿನಿಮಾ ಇದು
ಬಾನಂಗಳದಲ್ಲಿ ಗಾಳಿಪಟ-2 ಹಾರಲು ಫಿಕ್ಸ್‌ ಆಯ್ತು ಡೇಟ್‌: ಗಣಿ-ಭಟ್ರ ಕಾಂಬಿನೇಷನ್‌ ಮತ್ತೆ ತೆರೆಮೇಲೆ title=
Gaalipata 2

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ʼಗಾಳಿಪಟ 2ʼ ಇನ್ನೇನು ರಿಲೀಸ್‌ ಆಗಲಿದ್ದು, ಕೌಂಟ್‌ಡೌನ್‌ ಶುರುವಾಗಿದೆ. ಬೆಳ್ಳಿ ತೆರೆ ಮೇಲೆ ಯಾವಾಗ ಸಿನಿಮಾ ಬರುತ್ತದೆ ಎಂದು ಕಾಯುತ್ತಿದ್ದ ಗೋಲ್ಡನ್‌ ಸ್ಟಾರ್‌ ಅಭಿಮಾನಿಗಳು ಇದೀಗ ರಿಲೀಸ್‌ ದಿನಾಂಕಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. 

ಇದನ್ನೂ ಓದಿ: ನಾಯಕನಾಗಿ 'ಸಜ್ಜು' ಎಂಟ್ರಿಗೆ ವೇದಿಕೆ ಸಜ್ಜು..! ಹೇಗಿದೆ ‘ಮ್ಯಾನ್ಷನ್ ಹೌಸ್ ಮುತ್ತು’ ಲುಕ್..?‌

ಇತ್ತೀಚೆಗೆಯಷ್ಟೇ ಹ್ಯಾಟ್ರಿಕ್‌ ಹೀರೋ ಡಾ. ಶಿವರಾಜ್‌ ಕುಮಾರ್‌, ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ನಟ ರಮೇಶ್ ಅರವಿಂದ್ ಸಖತ್ ಕಿಕ್ ಕೊಡುತ್ತಿರುವ ʼಗಾಳಿಪಟ 2ʼ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದರು. ಟ್ರೇಲರ್ ರಿಲೀಸ್ ಆಗಿ ಕೆಲ ಹೊತ್ತಿನಲ್ಲೇ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದುಕೊಂಡಿತ್ತು. ಟಾಪ್ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಹವಾ ಕ್ರಿಯೇಟ್ ಮಾಡಿಬಿಟ್ಟಿದೆ. ರಿಲೀಸ್ ಆಗಿರುವ ಎಕ್ಸಾಂ ಸಾಂಗ್ ಅಂತೂ ಸೋಂಬೇರಿಗಳ ಪಾಲಿಗೆ ಭಗವದ್ಗೀತೆ ಸಿಕ್ಕಂತೆ ಆಗ್ಬಿಟ್ಟಿದೆ.

ಇನ್ನು ʼನೀನು ಬಗೆಹರಿಯದ ಹಾಡುʼ ಮಾತ್ರ ಆಹಾ..! ಅನ್ನುವಂತಿದೆ. ರಿಲೀಸ್ ಆಗಿರುವ ಎಲ್ಲಾ ಹಾಡುಗಳು ಮಜಾ ಕೊಟ್ಟಿದೆ ಅಂದ್ರೆ ತಪ್ಪಾಗಲ್ಲ. ಸ್ಯಾಂಡಲ್‌ವುಡ್‌ನ ಸ್ಟಾರ್‌ ಡೈರೆಕ್ಟರ್‌ ಯೋಗರಾಜ್‌ ಭಟ್‌ ಡೈರೆಕ್ಷನ್ ಅಂದ್ರೆ ಗೊತ್ತಲ್ಲ. ಅದು ವಿಭಿನ್ನತೆಯ ಆಗರವೇ ಆಗಿರುತ್ತದೆ.  ಭಟ್‌ರ ಸಿನಿಮಾ ನೋಡಿದ್ರೆ ಭರ್ಜರಿ ಕಿಕ್ ಸಿಗುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ ಬಿಡಿ. ಅಷ್ಟು ಸುಂದರವಾಗಿ ಕಥೆ ಕಟ್ಟೋದ್ರಲ್ಲಿ ಎತ್ತಿದ ಕೈ ನಮ್ಮ ಯೋಗರಾಜ್ ಭಟ್ರದ್ದು. 

ವರಮಹಾಲಕ್ಷ್ಮಿ ಹಬ್ಬವನ್ನ ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡಿ ಸ್ವಲ್ಪ ಬ್ರೇಕ್ ತಗೊಂಡ್ರೆ ಸಾಕು ಆಗಸ್ಟ್ 12ಕ್ಕೆ ಅದ್ಧೂರಿಯಾಗಿ ʼಗಾಳಿಪಟ 2ʼ ಸಿನಿಮಾ ಓಪನಿಂಗ್ ಪಡೆದುಕೊಳ್ಳುತ್ತದೆ ಅನ್ನೋದು ಕನ್ಫರ್ಮ್ ಆಗಿದೆ. ಹೀಗಾಗಿ ʼಗಾಳಿಪಟ 2ʼ ಸಿನಿಮಾ ನೋಡಲು ನೀವು ರೆಡಿನಾ..? ಬೇಗ ಬೇಗ ಫ್ರೀ ಮಾಡ್ಕೊಂಡು ಸಿದ್ದರಾಗಿ, ಆಗಿದ್ದು ಆಗ್ಲಿ "ಗಾಳಿಪಟ 2" ಮುಗಿಲೆತ್ತರಕ್ಕೆ ಹಾರಿಸೋಣ.

ಇದನ್ನೂ ಓದಿ: Vikrant Rona Collection : 150 ಕೋಟಿ ಗಡಿ ದಾಟುತ್ತಾ ವಿಕ್ರಾಂತ್ ರೋಣ? 7ನೇ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಭರ್ಜರಿ ತಾರಾಂಗಣವೇ ಇದೆ. ಗೋಲ್ಡನ್‌ ಸ್ಟಾರ್‌ ಗಣೇಶ್‌, ದೂದ್‌ಪೇಡಾ ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News