ನವದೆಹಲಿ: ಅಫ್ಘಾನಿಸ್ತಾನ(Afghanistan Crisis)ವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ತಾಲಿಬಾನ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಶಾಹಿದ್ ಅಫ್ರೀದಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಂತರವೂ ಸದಾ ಜನಪ್ರಿಯತೆಯನ್ನು ಇಷ್ಟಪಡುವ ಆಫ್ರೀದಿ ಆಗಾಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸದ್ದು ಮಾಡುತ್ತಿರುತ್ತಾರೆ. ಆಫ್ರೀದಿ ಸೋಮವಾರ (ಆ.30) ಮಾಧ್ಯಮಗಳಿಗೆ ಆಘಾತಕಾರಿ ಹೇಳಿಕೆ ನೀಡಿದ್ದು, ಇತ್ತೀಚೆಗೆ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್‌ಗಳು ‘ಧನಾತ್ಮಕ ಮನಸ್ಸು ಹೊಂದಿದ್ದಾರೆ’ ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

‘ತಾಲಿಬಾನ್‌(Taliban)ಗಳು ಹೆಚ್ಚು ಧನಾತ್ಮಕ ಮನಸ್ಸು ಹೊಂದಿದ್ದಾರೆ. ಅವರು ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುತ್ತಾರೆ. ತಾಲಿಬಾನ್‌ಗಳು ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತಾರೆ ಎಂದು ನಾನು ನಂಬುತ್ತೇನೆ’ ಎಂದು ಆಫ್ರೀದಿ ಸೋಮವಾರ ಪಾಕಿಸ್ತಾನ(Pakistan)ದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ‘ತಾಲಿಬಾನ್ ಮಹಿಳೆಯರಿಗೆ ಉದ್ಯೋಗ ನೀಡುತ್ತಿದೆ, ಕ್ರಿಕೆಟ್ ಮತ್ತು ಪಾಕಿಸ್ತಾನದ ವಿರುದ್ಧದ ಕ್ರಿಕೆಟ್ ಸರಣಿಯನ್ನು ಬೆಂಬಲಿಸುತ್ತದೆ. ತಾಲಿಬಾನ್ ಕ್ರಿಕೆಟ್ ಬಗ್ಗೆ ತುಂಬಾ ಸಕಾರಾತ್ಮಕವಾಗಿದೆ’ ಎಂದು ಆಫ್ರೀದಿ(Shahid Afridi) ಹೇಳಿದ್ದಾರೆ.


Tokyo Paralympics: ಸುಮಿತ್ ಆಂಟಿಲ್ ಗೆ ಜಾವಲಿನ್ ನಲ್ಲಿ ಚಿನ್ನದ ಪದಕ


‘ಮುಂದಿನ ಪಾಕಿಸ್ತಾನ ಸೂಪರ್ ಲೀಗ್ (Pakistan Super League) ನನ್ನ ಕೊನೆಯ ಕ್ರಿಕೆಟ್ ಪಂದ್ಯಾವಳಿಯಾಗಿರಲಿದೆ. ಕ್ವೆಟ್ಟಾ ಗ್ಲಾಡಿಯೇಟರ್ಸ್‌(Quetta Gladiators)ಗಾಗಿ ಆಡಲು ನಾನು ಇಷ್ಟಪಡುತ್ತೇನೆ’ ಎಂದು ಆಫ್ರೀದಿ ಹೇಳಿದ್ದಾರೆ. 2022ರಲ್ಲಿ ನಡೆಯಲಿರುವ ಈ ಪಂದ್ಯಾವಳಿಯ 7ನೇ ಸೀಸನ್‌ಗೆ ತನ್ನ ಪಿಎಸ್‌ಎಲ್ ಫ್ರಾಂಚೈಸಿ ಆಫ್ರೀದಿಯನ್ನು ಸೇರಿಸಿಕೊಳ್ಳಲಿದೆ ಎಂದು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮಾಲೀಕ ನದೀಮ್ ಒಮರ್ ಕಳೆದ ವಾರ ಹೇಳಿದ್ದರು. ‘ಪಾಕ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಸದ್ಯ ಕ್ವೆಟ್ಟಾ ಗ್ಲಾಡಿಯೇಟರ್ಸ್ ಕ್ಯಾಪ್ಟನ್ ಆಗಿದ್ದಾರೆ. ಅವರು ಸ್ವಯಂಪ್ರೇರಣೆಯಿಂದ ಕೆಳಗಿಳಿಯಲು ಒಪ್ಪಿದರೆ ನಾವು ಆಫ್ರೀದಿಯವರನ್ನು ಅವರ ಸ್ಥಾನಕ್ಕೆ ನೇಮಿಸುತ್ತೇವೆ ಎಂದು ಒಮರ್ ಹೇಳಿದ್ದಾರೆ.  


ಏಕೆ ಸೀಮಿತ ಕ್ರಿಕೆಟ್ ಆಡುತ್ತಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಫ್ರೀದಿ ‘ಬಯೋ ಬಬಲ್ ಒಳಗೆ ಅಭ್ಯಾಸ ಮಾಡುವುದು ಆಟಗಾರರಿಗೆ ತುಂಬಾ ಕಷ್ಟ’ ಅಂತಾ ಹೇಳಿದ್ದಾರೆ. ವಿವಾದಾತ್ಮಕ ಕಾಶ್ಮೀರ ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕರಾಚಿಯಿಂದ ಅನೇಕ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಿತ್ತು. ಆದರೆ ಈಗ ಕೆಪಿಎಲ್ ಎಲ್ಲಾ ಪ್ರತಿಭೆಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಹೇಳಿದರು.


ಇದನ್ನೂ ಓದಿ: Stuart Binny- ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ


‘ಪಾಕಿಸ್ತಾನ ಕ್ರಿಕೆಟ್‌(Pakistan Cricket)ನಲ್ಲಿ ಸೌಲಭ್ಯಗಳ ಕೊರತೆಯಿದೆ, ಆದ್ದರಿಂದ ಕ್ರಿಕೆಟಿಗರನ್ನು ಉತ್ತೇಜಿಸಲು ಉದ್ಯಮಿಗಳು ಸಹಕರಿಸಬೇಕು’ ಎಂದು ಇದೇ ವೇಳೆ ಆಫ್ರೀದಿ ಹೇಳಿಕೊಂಡಿದ್ದಾರೆ.  41 ವರ್ಷದ ಪಾಕ್ ಮಾಜಿ ಆಲ್‌ರೌಂಡರ್ ಆಫ್ರೀದಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಪಾಕಿಸ್ತಾನ ಪರ 37 ಟೆಸ್ಟ್, 398 ಏಕದಿನ ಮತ್ತು 99 ಟಿ.20 ಪಂದ್ಯಗಳನ್ನು ಆಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.