Flashback 2020: Cricket Controversies 2020 ಗಾವಸ್ಕರ್ ನಿಂದ ಹಿಡಿದು ರೈನಾವರೆಗೆ ಕ್ರಿಕೆಟ್ ಲೋಕದ ವಿವಾದಗಳು ಇಲ್ಲಿವೆ

Flashback 2020: Cricket Controversies 2020 - ಕ್ರಿಕೆಟ್ ಅನ್ನು 'ಜಂಟಲ್ಮ್ಯಾನ್ಸ್ ಗೇಮ್' ಎಂದು ಕರೆಯಲಾಗುತ್ತದೆ ಆದರೆ ಕ್ರಿಕೆಟ್ ಮತ್ತು ವಿವಾದಗಳು ಏಕಕಾಲದಲ್ಲಿ ಮುನ್ನಡೆಯುತ್ತವೆ. ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಈ ವರ್ಷದಲ್ಲಿ ಹೆಚ್ಚು ಕ್ರಿಕೆಟ್ ಪಂದ್ಯಾವಳಿಗಳು ನಡೆದಿಲ್ಲ ಆದರೆ ಅನೇಕ ವಿವಾದಗಳು ಸೃಷ್ಟಿಯಾದವು ಮತ್ತು ಅವು ಕ್ರಿಕೆಟ್ ಅನ್ನು ಹೆಡ್ಲೈನ್ ನಲ್ಲಿರಿಸಿದವು.

Last Updated : Dec 14, 2020, 05:24 PM IST
  • ಸಾಮಾನ್ಯವಾಗಿ ಕ್ರಿಕೆಟ್ ಅನ್ನು ಜೆಂಟಲ್ಮನ್ ಜೆಮ್ ಎಂದು ಕರೆಯಲಾಗುತ್ತದೆ.
  • ಆದರೆ ಇದಕ್ಕೆ ವಿಪರೀತ ಎಂಬಂತೆ ಕ್ರಿಕೆಟ್ ಹಾಗೂ ವಿವಾದಗಳು ಜೊತೆಜೊತೆಗೆ ಸಾಗುತ್ತವೆ.
  • 2020 ರಲ್ಲಿ ಹೆಚ್ಚಿನ ಕ್ರಿಕೆಟ್ ಆಟ ನಡೆದಿಲ್ಲ ಆದರೂ ಕೂಡ ಕೆಲ ವಿವಾದಗಳ ಕಾರಣ ಆಟಗಾರರು ಹೆಡ್ಲೈನ್ ಸೃಷ್ಟಿಸಿದ್ದಾರೆ.
Flashback 2020: Cricket Controversies 2020 ಗಾವಸ್ಕರ್ ನಿಂದ ಹಿಡಿದು ರೈನಾವರೆಗೆ ಕ್ರಿಕೆಟ್ ಲೋಕದ ವಿವಾದಗಳು ಇಲ್ಲಿವೆ title=
Flashback 2020: Cricket Controversies 2020

ನವದೆಹಲಿ:  Flashback 2020: Cricket Controversies 2020 - ಕ್ರಿಕೆಟ್ ಅನ್ನು ಸಾಮಾನ್ಯವಾಗಿ ಒಂದು 'ಜಂಟಲ್ಮನ್ ಗೇಮ್' ಎಂದು ಕರೆಯಲಾಗುತ್ತದೆ. ಆದರೆ, ಕ್ರಿಕೆಟ್ ಹಾಗೂ ವಿವಾದಗಳು ಜೊತೆ ಜೊತೆಯಾಗಿಯೇ ಮುನ್ನಡೆಯುತ್ತವೆ. ಕ್ರಿಕೆಟ್ ಆಟಗಾರರ ಮೇಲಿರುವ ಒತ್ತಡ, ವರ್ಕ್ ಲೋಡ್ ಹಾಗೂ ತೀಕ್ಷ್ಣ ಮಿಡಿಯಾ ಕವರೇಜ್ ಕಾರಣ ಕ್ರಿಕೆಟ್ ಆಟಗಾರರು ಸ್ವಾಭಾವಿಕವಾಗಿ ತಮ್ಮ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ.

ಕೊರೊನಾ ಮಹಾಮಾರಿಯ ಕಾರಣ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ. ಆದರೂ, ಕೂಡ ಬೇಕಾದಷ್ಟು ಆಫ್ ಫೀಲ್ಡ್ ಆಕ್ಷನ್ ನಡೆದ ಕಾರಣ ಕ್ರಿಕೆಟ್ (Cricket) ಆಟಗಾರರು ಹೆಡ್ಲೈನ್ ಸೃಷ್ಟಿಸಿದ್ದಾರೆ. ಹಾಗಾದರೆ ಬನ್ನಿ 2020 ರ ಕ್ರಿಕೆಟ್ ವಿವಾದಗಳನ್ನೊಮ್ಮೆ ಮೆಲಕುಹಾಕೋಣ.

CSK ತೊರೆದ ಸುರೇಶ ರೈನಾ
ಅನುಭವಿ ಸೂಪರ್ ಲೇಫ್ಟರ್ ಸುರೇಶ ರೈನಾ ಕಳೆದ ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಲವಾದ ಸ್ಥಂಬವಾಗಿದ್ದರೂ. ಲಾಕ್ ಡೌನ್ ಕಾಲಾವಧಿಯಲ್ಲಿ ಅವರು ಸಾಮಾಜಿಕ ಮಾಧ್ಯಮಗಳ ಮೇಲೆ ಹಲವು ತರಬೇತಿ ಪಡೆಯುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಟಾಪ್ ಆರ್ಡರ್ ಆಟಗಾರರಾಗಿರುವ ಸುರೇಶ ರೈನಾ ಪಂದ್ಯಾವಳಿಗಾಗಿ ಭಾರಿ ತಯಾರಿ ನಡೆಸಿದ್ದರು. ಆದರೆ, ವೈಯಕ್ತಿಕ ಕಾರಣಗಳ ಹಿನ್ನೆಲೆ ಅವರು ದುಬೈನಿಂದ ಭಾರತಕ್ಕೆ ಮರಳಿದಾಗ ಎಲ್ಲರ ಪಾಲಿಗೆ ಇದೊಂದು ಶಾಕಿಂಗ್ ಸುದ್ದಿಯಾಗಿತ್ತು.

ರೈನಾಗೆ ಹಂಚಿಕೆಯಾದ ಕೋಣೆಯಿಂದ ಅವರು ಅಸಂತುಷ್ಟರಾಗಿದ್ದರು ಎಂಬ ವರದಿಗಳು ಕೇಳಿ ಬಂದಿದ್ದವು. ಬಳಿಕ ಬಿಸಿಸಿಐ ಮಾಜಿ ಅಧ್ಯಕ್ಷ  ಹಾಗೂ ಪ್ರಸ್ತುತ CSK ತಂಡದ ಮಾಲೀಕರಾಗಿರುವ ಎನ್. ಶ್ರೀನಿವಾಸನ್ ಕೂಡ ಸಂದರ್ಶನವೊಂದರಲ್ಲಿ ಈ ಕುರಿತು ಅಸಮಾಧಾನ ಹೊರಹಾಕಿದ್ದರು.

ಇದನ್ನು ಓದಿ- Flashback 2020: ಇಹಲೋಕ ತ್ಯಜಿಸಿದ ಚಿತ್ರೋದ್ಯೋಮದ ಖ್ಯಾತನಾಮರು

ಮಾರ್ಲೋನ್ ಸಾಮ್ಯುಯೆಲ್-ಬೆನ್ ಸ್ಟೋಕ್ಸ್ ವಿವಾದ
ಈ ವಿವಾದ ನಮ್ಮನ್ನು 2015 ರಲ್ಲಿ ಕೊಂಡೊಯ್ಯುತ್ತದೆ. ಆಗ ವೆಸ್ಟಇಂಡೀಸ್ ತಂಡದ ಕ್ರಿಕೆಟರ್ ಗ್ರೆನೆಡಾದಲ್ಲಿ ನಡೆದ ಒಂದು ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಆಟಗಾರನನ್ನು ಔಟ್ ಮಾಡಿ ಬಳಿಕ ಮಾಕ್ ಸೆಲ್ಯೂಟ್  ನೀಡಿ ಪೆವಿಲಿಯನ್ ಗೆ ಕಳುಹಿಸಿದ್ದರು. ನಂತರ 2016 ರ ವಿಶ್ವ ಕಪ್ ಟಿ-20 ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್, ಸ್ಯಾಮ್ಯುಯೆಲ್ ಮೇಲೆ ಟಿಪ್ಪಣಿಯೊಂದನ್ನು ಮಾಡಿದ್ದರು.

ಇದನ್ನು ಓದಿ-  Top 25 Global Instagram Influencer ಪಟ್ಟಿ ಸೇರಿದ ವಿರಾಟ್ - ಅನುಷ್ಕಾ

ಇತ್ತೀಚೆಗಷ್ಟೇ ಪಾಡಕಾಸ್ಟ್ ವೇಳೆ ಬೆನ್ ಸ್ಟೋಕ್ಸ್  ಬಾಯೂ ಬಬಲ್ ಕುರಿತು ತಮಾಷೆ ಮಾಡುತ್ತಾ ನಾನು ಈ ರೀತಿ ನನ್ನ ಶತ್ರುಗಳ ಕುರಿತು ಕೂಡ ಆಲೋಚಿಸುವುದಿಲ್ಲ, ಅಷ್ಟೇ ಯಾಕೆ ಸ್ಯಾಮ್ಯುಯೆಲ್ ಕುರಿತು ಕೂಡ ಇಲ್ಲ  ಎಂದಿದ್ದರು. ಆದರೆ ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಯಾಮ್ಯುಯೆಲ್ಸ್, ಸ್ಟೋಕ್ಸ್ ಪತ್ನಿಯನ್ನು ಈ ವಿವಾದದಲ್ಲಿ ಎಳೆತಂದರು. ಈ ವಿವಾದ ಕೂಡ ಹೆಡ್ಲೈನ್ ಸೃಷ್ಟಿಸಿತು.

ಲಂಕಾ ಪ್ರಿಮಿಯರ್ ಲೀಗ್ ನಲ್ಲಿ ಶಾಹೀದ್ ಆಫ್ರಿದಿ ರಿಯಾಕ್ಷನ್
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೆ ಕ್ರಿಕೆಟ್ ಆಟದ ಅಪಾರ ಅನುಭವ ಇದೆ. ಆದರೆ ಇತ್ತೀಚೆಗೆ ಲಂಕಾ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ಯುವ ಅಫಘಾನ್ ವೇಗದ ಬೌಲರ್ ಗೆ ಅವರು  ಕೋಪದಿಂದ ಪ್ರತಿಕ್ರಿಯಿಸುವ ವಿಡಿಯೋ ವೈರಲ್ಆಗಿತ್ತು. ಆಟದ ವೇಳೆ ಬೌಲರ್ ಮೊಹಮ್ಮದ್ ಅಮೀರ್‌ ಕುರಿತು ಟಿಪ್ಪಣಿ ನಡೆಸಿದ್ದರು. ಇದರಿಂದ ಆಫ್ರಿದಿ ಕುಪಿತರಾಗಿದ್ದರು.

ವಿರಾಟ್ ಕೊಹ್ಲಿ ಕುರಿತು ಸುನೀಲ್ ಗಾವಸ್ಕರ್ ಟಿಪ್ಪಣಿ
ಲಾಕ್ ಡೌನ್ ಬಾಳಿನ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್ ಕುರಿತು ಸುನೀಲ್ ಗಾವಸ್ಕರ್ ಟಿಪ್ಪಣಿ ಮಾಡಿದ್ದರು. ಲಾಕ್ ಡೌನ್ ಅವಧಿಯಲ್ಲಿ ಕೊಹ್ಲಿ ತಮ್ಮ ಪತಿ ಅನುಷ್ಕಾ ಶರ್ಮಾ ಜೊತೆಗೆ ಟೆರೆಸ್ ಮೇಲೆ ಕ್ರಿಕೆಟ್ ಆಡುವ ವಿಡಿಯೋ ವೈರಲ್ ಆಗಿತ್ತು.

ಈ ವಿಡಿಯೋ ಉಲ್ಲೇಖಿಸಿ ಕೊಹ್ಲಿಯ ಹಾಳಾದ ಫಾರ್ಮ್ ಕುರಿತು ಗಾವಸ್ಕರ್ ಟಿಪ್ಪಣಿ ಮಾಡಿದ್ದರು. ಇದಕ್ಕೆ ಅನುಷ್ಕಾ ಶರ್ಮಾ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟೇಟ್ಮೆಂಟ್ ವೊಂದನ್ನು ನೀಡುವ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದರು. ಈ ಸ್ಟೇಟ್ಮೆಂಟ್ ಗೆ ಅನುಷ್ಕಾಗೆ ಭಾರಿ ಬೆಂಬಲ ಸಿಕ್ಕ ಬಳಿಕ ಗಾವಸ್ಕರ್ ಬ್ಯಾಕ್ ಫುಟ್ ಗೆ ಜಾರಿದ್ದರು.

Trending News