ಮೊದಲ ಫೋಟೋ : ಈಗ ಹೀಗಿದ್ದಾಳೆ ನೋಡಿ Virushka ಮುದ್ದಿನ ಮಗಳು ವಾಮಿಕ..!
ಟೀಂ ಇಂಡಿಯಾ ಖಾಸಗೀ ವಿಮಾನವೊಂದರಲ್ಲಿ ಇಂಗ್ಲೆಂಡಿಗೆ ರವಾನೆಯಾಗಿದೆ. ಅದರ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಒಂದು ಸಾಕಷ್ಟು ವೈರಲ್ ಆಗುತ್ತಿದೆ. ವಿರೂಷ್ಕಾ ದಂಪತಿ ಇಂಗ್ಲೆಂಡ್ ಗೆ ರವಾನೆಯಾಗುತ್ತಿರುವ ಫೋಟೋ ಅದು.
ನವದೆಹಲಿ : ಇಂಗ್ಲೆಂಡ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ (Virat Kohli) ಈಗ ಲಂಡನ್ ನಲ್ಲಿದ್ದಾರೆ. ಜೊತೆಗೆ ಅನುಷ್ಕಾ ಮುದ್ದಿನ ಮಗಳು ಕೂಡಾ ಕೊಹ್ಲಿ ಜೊತೆಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ (Socia media) ಒಂದು ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ಆ ಫೋಟೋ ಯಾವುದು ಗೊತ್ತಾ..?
ವಿರೂಷ್ಕಾ ಜೊತೆ ವಾಮಿಕ ..!
ಟೀಂ ಇಂಡಿಯಾ (Team India) ಖಾಸಗೀ ವಿಮಾನವೊಂದರಲ್ಲಿ ಇಂಗ್ಲೆಂಡಿಗೆ ರವಾನೆಯಾಗಿದೆ. ಅದರ ನಂತರ ಸೋಶಿಯಲ್ ಮೀಡಿಯಾಗಳಲ್ಲಿ (Social media) ಫೋಟೋ ಒಂದು ಸಾಕಷ್ಟು ವೈರಲ್ ಆಗುತ್ತಿದೆ. ವಿರೂಷ್ಕಾ (Virushka) ದಂಪತಿ ಇಂಗ್ಲೆಂಡ್ ಗೆ ರವಾನೆಯಾಗುತ್ತಿರುವ ಫೋಟೋ ಅದು. ದಂಪತಿ ಜೊತೆ ಮುದ್ದು ಮಗು ವಾಮಿಕ (Vamika) ಕೂಡಾ ಕಾಣಿಸುತ್ತಿದ್ದಾಳೆ. ಮಗಳನ್ನು ಅಪ್ಪಿಕೊಂಡು ಅನುಷ್ಕಾ ಪ್ರವಾಸಕ್ಕೆ ತೆರಳುತ್ತಿರುವ ಫೋಟೋ ಅದು. ಜೊತೆ ವಿರಾಟ್ ಕೂಡಾ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಕೆಮೆರಾಮೆನ್ ಒಬ್ಬರು ವಾಮಿಕಾ ಕ್ಲೋಸ್ ಆಪ್ ಫೋಟ್ ಕ್ಲಿಕ್ಕಿಸಿದ್ದಾರೆ. ಇದರಲ್ಲಿ ವಾಮಿಕ ಮುಖ ಸ್ಪಷ್ಟವಾಗಿ ಕಾಣಿಸುತ್ತಿದೆ.
"ನಾನು ಸಸ್ಯಾಹಾರಿ ಎಂದು ಎಂದಿಗೂ ಸಾರಿ ಹೇಳುವುದಿಲ್ಲ"
ಯಾರನ್ನು ಹೋಲುತ್ತಾರೆ ವಾಮಿಕ..?
ಫೋಟೋದಲ್ಲಿ ವಾಮಿಕ ಮುಖ ಸ್ಪಷ್ಟವಾಗಿ ಕಾಣಿಸುತ್ತಿದೆ. ದೂಸ್ರಾ ಮಾತೇ ಇಲ್ಲ. ವಾಮಿಕ ಮುಖ ಅಪ್ಪ ವಿರಾಟ್ ಕೊಹ್ಲಿಯ (Virat Kohli) ಪಡಿಯಚ್ಚು. ಅಪ್ಪನನ್ನೇ ಹೋಲುತ್ತಾಳೆ ಮಗಳು ವಾಮಿಕ. ಅದೇ ಕಣ್ಣು ಅದೇ ಮೂಗು. ಥೇಟ್ ಅಪ್ಪನ ಪ್ರಿಂಟ್ ಕಾಪಿ ತರಹ ಕಾಣಿಸುತ್ತಿದ್ದಾಳೆ ಮುದ್ದು ಮಗಳು ವಾಮಿಕ.
'ವಾಮಿಕ' ಹೆಸರಿನ ಅರ್ಥ ಏನು.? ಕೊಹ್ಲಿಗೆ ಸವಾಲೆಸೆದ ಅಭಿಮಾನಿ:
ಇತ್ತೀಚೆಗೆ ಕೊಹ್ಲಿ ಮುಂಬಯಿನಲ್ಲಿ ಕ್ವಾರಂಟೈನ್ ನಲ್ಲಿದ್ದರು. ಆಗ ಫ್ಯಾನ್ಸ್ ಜೊತೆ ಮಾತುಕತೆಗೆ ಕೊಹ್ಲಿ ಮುಂದಾಗಿದ್ದರು. ಆಗ ಅಭಿಮಾನಿಯೊಬ್ಬ ಕೊಹ್ಲಿಗೆ ತೀರಾ ಖಾಸಗೀ ಪ್ರಶ್ನೆ ಎಸೆದಿದ್ದರು. ಅಭಿಮಾನಿಯ ಪ್ರಶ್ನೆ ಇಷ್ಟೇ. ವಾಮಿಕ ಪದದ ಅರ್ಥ ಏನು.? ಅವಳು ಹೇಗಿದ್ದಾಳೆ. ? ಅವಳ ಝಲಕ್ ನಾವೊಮ್ಮೆ ನೊಡಬಹುದೇ..?
ಇದನ್ನೂ ಓದಿ : ಧೋನಿಯನ್ನು ಎರಡು ಪದಗಳಲ್ಲಿ ಬಣ್ಣಿಸಿದ ವಿರಾಟ್ ಕೊಹ್ಲಿ..!
ಕೊಹ್ಲಿ ಕೊಟ್ಟ ಉತ್ತರವೇನು..?
ಫ್ಯಾನ್ ಪ್ರಶ್ನೆಗೆ ಕೊಹ್ಲಿ ಸಹಜವಾಗಿಯೇ ಉತ್ತರಿಸಿದ್ದಾರೆ. ವಾಮಿಕ ಪದದ ಅರ್ಥ ವಿವರಿಸಿದ್ದಾರೆ. ವಾಮಿಕ ಅಂದರೆ ದೇವಿ ದುರ್ಗೆಯ (Godess Durga) ಮತ್ತೊಂದು ಹೆಸರು. ಮಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ (Social media) ತೋರಿಸುವುದಿಲ್ಲ ಎಂದು ತಂದೆ, ತಾಯಿಯಾಗಿ ನಾವು ನಿರ್ಧರಿಸಿದ್ದೇವೆ.. ಸೋಶಿಯಲ್ ಮಿಡಿಯಾ ಅಂದರೆ ಏನು ಎಂದು ಆಕೆ ತಿಳಿದುಕೊಳ್ಳುವ ತನಕ ಮತ್ತು ಆಕೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಶಕ್ತಳಾಗುವ ತನಕ ಮಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪರಿಚಯಿಸುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.