Virat Kohli-ವಿರಾಟ್ ಪವರ್ ಒಪ್ಪಿಕೊಂಡ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಹೇಳಿದ್ದೇನು ಗೊತ್ತಾ!

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳ ದಾಖಲೆಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ 50 ಕ್ಕಿಂತ ಹೆಚ್ಚು. ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 43 ಶತಕಗಳನ್ನು ಮತ್ತು ಟೆಸ್ಟ್‌ನಲ್ಲಿ 27 ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

Written by - Yashaswini V | Last Updated : May 24, 2021, 10:09 AM IST
  • ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳ ದಾಖಲೆಯನ್ನು ಹೊಂದಿದ್ದಾರೆ
  • ಕೊಹ್ಲಿಯ ಯಶಸ್ಸನ್ನು ಒಪ್ಪಿದ ವಾರ್ನರ್
  • ವಿರಾಟ್ ಕೊಹ್ಲಿಯ ದಾಖಲೆಗಳು
Virat Kohli-ವಿರಾಟ್ ಪವರ್ ಒಪ್ಪಿಕೊಂಡ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಹೇಳಿದ್ದೇನು ಗೊತ್ತಾ! title=
Virat Kohli

ಮೆಲ್ಬೋರ್ನ್: ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ವಿರಾಟ್ ಕೊಹ್ಲಿಯ ಯಶಸ್ಸನ್ನು ಒಪ್ಪಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ಅವರ ಶತಕಗಳ ದಾಖಲೆಯನ್ನು ಮುರಿಯುವುದು ಸುಲಭವಲ್ಲ ಎಂದು ವಾರ್ನರ್ ಹೇಳಿದ್ದಾರೆ.

ಕೊಹ್ಲಿ 70 ಅಂತರರಾಷ್ಟ್ರೀಯ ಶತಕಗಳನ್ನು ದಾಖಲಿಸಿದ್ದಾರೆ:
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳ ದಾಖಲೆಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಅವರ ಬ್ಯಾಟಿಂಗ್ ಸರಾಸರಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ 50 ಕ್ಕಿಂತ ಹೆಚ್ಚು. ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 43 ಶತಕಗಳನ್ನು ಮತ್ತು ಟೆಸ್ಟ್‌ನಲ್ಲಿ 27 ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ - T20 league ನಿಂದ ವಿಶ್ರಾಂತಿ ಬಯಸಿದ ಯುಜ್ವೆಂದ್ರ ಚಹಾಲ್

ಕೊಹ್ಲಿಯ ಯಶಸ್ಸನ್ನು ಒಪ್ಪಿದ ವಾರ್ನರ್ :
ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (David Warner) 43 ಅಂತಾರಾಷ್ಟ್ರೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಾ, 'ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯಲು ನಮಗೆ ಸಾಧ್ಯವಾಗುವುದಿಲ್ಲ' ಎಂದು ಬರೆದಿದ್ದಾರೆ. 

ಪ್ರಸ್ತುತ ಕ್ರಿಕೆಟಿಗರಲ್ಲಿ ಅಂತರರಾಷ್ಟ್ರೀಯ ಶತಕಗಳ ದಾಖಲೆಯ ದೃಷ್ಟಿಯಿಂದ ಉಳಿದ ಬ್ಯಾಟ್ಸ್‌ಮನ್‌ಗಳು ವಿರಾಟ್ ಕೊಹ್ಲಿಗಿಂತ ಹಿಂದುಳಿದಿದ್ದಾರೆ. ವಿರಾಟ್ ಅವರ ಈ ದಾಖಲೆಯನ್ನು ಮುರಿಯುವುದು ಅವರಿಗೆ ಅಸಾಧ್ಯವಾಗಿದೆ. ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ - 2021 ರ ಏಷ್ಯಾಕಪ್ ನ ಆವೃತ್ತಿ 2023 ಕ್ಕೆ ಮುಂದೂಡಿಕೆ

ವಿರಾಟ್ ಕೊಹ್ಲಿಯ ರೆಕಾರ್ಡ್ಸ್ :-
ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 12169 ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 7490 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಟಿ 20 ಇಂಟರ್‌ನ್ಯಾಷನಲ್‌ನಲ್ಲಿ ಅತಿ ಹೆಚ್ಚು 3159 ರನ್ ಗಳಿಸಿದ ಆಟಗಾರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News