ಈ ಒಂದು ಕಾರಣದಿಂದಾಗಿ Virat Kohli ಕಳೆದುಕೊಳ್ಳಬೇಕಾಯಿತು ಏಕದಿನ ತಂಡದ ನಾಯಕತ್ವ
ಕೊಹ್ಲಿ ಏಕದಿನ ತಂಡದ ನಾಯಕನಾಗಿ ಮುಂದುವರಿಯಲು ಬಯಸಿದ್ದರು. T20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದ್ದ ವಿರಾಟ್ ಕೊಹ್ಲಿ, ವಿಶ್ವಕಪ್ 2023 ರವರೆಗೆ ODI ತಂಡವನ್ನು ಮುನ್ನಡೆಸುವ ಬಯಕೆಯನ್ನು ಹೊಂದಿದ್ದರು.
ನವದೆಹಲಿ : ಐಸಿಸಿ ಟ್ರೋಫಿಯಲ್ಲಿ (ICC trophy) ಸೋಲುಂಡ ಪರಿಣಾಮ ವಿರಾಟ್ ಕೊಹ್ಲಿಯನ್ನು (Virat Kohli) ಭಾರತ ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಲಾಗಿದೆ. ಈ ವಿಚಾರವನ್ನು ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಸಬಾ ಕರೀಮ್ (Saba Kareem) ಹೇಳಿದ್ದಾರೆ.
'ಕೊಹ್ಲಿ ಏಕದಿನ ತಂಡದ ನಾಯಕನಾಗಿ ಮುಂದುವರಿಯಲು ಬಯಸಿದ್ದರು. T20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಪ್ರಕಟಿಸಿದ್ದ ವಿರಾಟ್ ಕೊಹ್ಲಿ (Virat Kohli), ವಿಶ್ವಕಪ್ 2023 ರವರೆಗೆ (world cup 2023) ODI ತಂಡವನ್ನು ಮುನ್ನಡೆಸುವ ಬಯಕೆಯನ್ನು ಹೊಂದಿದ್ದರು. ಆದರೆ, ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು, ಸ್ಟಾರ್ ಓಪನರ್ ರೋಹಿತ್ ಶರ್ಮಾ (Rohit Sharma) ಅವರು ಭಾರತದ ODI ಮತ್ತು T20 ನಾಯಕತ್ವವನ್ನು ವಹಿಸಲಿದ್ದಾರೆ ಎಂದು ಪ್ರಕಟಿಸಿದೆ.
ಇದನ್ನೂ ಓದಿ : Virat Kohli: ಕಿಂಗ್ ಕೊಹ್ಲಿಗೆ ಬಿಸಿಸಿಐನಿಂದ ಕೇವಲ ಒಂದು ಸಾಲಿನ ಧನ್ಯವಾದ!
ಐಸಿಸಿ ಟ್ರೋಫಿಯಲ್ಲಿನ ವೈಫಲ್ಯವೇ ಕೊಹ್ಲಿಯ ಬಯಕೆಗೆ ತೊಡಕಾಗಿ ಪರಿಣಮಿಸಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾಬಾ ಕರೀಮ್ (Saba Kareem), 'ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಲಾಗಿದೆ ಎನ್ನುವುದು ನಿಜ ಎಂದು ಹೇಳಿದ್ದಾರೆ. ಟಿ20 ತಂಡದ ನಾಯಕತ್ವ ತೊರೆಯುವ ಸಂದರ್ಭದಲ್ಲಿಯೇ ವಿರಾಟ್ ಕೊಹ್ಲಿ, ಏಕದಿನ ತಂಡದ ನಾಯಕನಾಗಿ ಕೂಡಾ ಮುಂದುವರೆಯುವುದಿಲ್ಲ ಎಂದು ಘೋಷಿಸಬೇಕಿತ್ತು. ಆದರೆ, ಅವರು ಇದನ್ನು ಮಾಡಲಿಲ್ಲ. ಇದರರ್ಥ, ಅವರು ಏಕದಿನ ತಂಡದ ನಾಯಕನಾಗಿ ಮುಂದುವರೆಯಲು ಬಯಸಿದ್ದರು. ಆದರೆ, ಐಸಿಸಿ ಟ್ರೋಫಿ (Icc Trophy) ಗೆಲ್ಲದ ಕಾರಣ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.
ದ್ರಾವಿಡ್ ಬಗ್ಗೆ ಸಬಾ ಹೇಳಿದ್ದೇನು?
ರಾಹುಲ್ ದ್ರಾವಿಡ್ (Rahul Dravid) ಯಾವಾಗಲೂ ತಮ್ಮ ಆಟಗಾರರೊಂದಿಗೆ ಸ್ಪಷ್ಟವಾಗಿ ಸಂವಹನ ನಡೆಸಲು ಬಯಸುವ ವ್ಯಕ್ತಿ ಎಂದು ಸಬಾ ಕರೀಮ್ ಹೇಳಿದ್ದಾರೆ. ಹಾಗಾಗಿ ದ್ರಾವಿಡ್ ಅಥವಾ ಬಿಸಿಸಿಐ (BCCI) ಅಧಿಕಾರಿಗಳು ಈ ಬಗ್ಗೆ ಕೊಹ್ಲಿ ಜತೆ ಚರ್ಚಿಸಿರಬೇಕು ಎಂದು ಕರೀಮ್ ಹೇಳಿದ್ದಾರೆ.
ಇದನ್ನೂ ಓದಿ : ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಭಾರತದ ಮಾಜಿ ಆಟಗಾರ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.