Virat Kohli: ಕಿಂಗ್ ಕೊಹ್ಲಿಗೆ ಬಿಸಿಸಿಐನಿಂದ ಕೇವಲ ಒಂದು ಸಾಲಿನ ಧನ್ಯವಾದ!

ರನ್ ಮಷಿನ್’ ಖ್ಯಾತಿಯ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ 24 ಗಂಟೆಗಳ ನಂತರ ಬಿಸಿಸಿಐ ಈ ರೀತಿ ನೆನಪಿಸಿಕೊಂಡಿದೆ.

Written by - Puttaraj K Alur | Last Updated : Dec 9, 2021, 11:59 PM IST
  • ವಿರಾಟ್ ಕೊಹ್ಲಿಗೆ ಕೇವಲ ಒಂದು ಸಾಲಿನಲ್ಲಿ ಧನ್ಯವಾದ ತಿಳಿಸಿದ ಬಿಸಿಸಿಐ
  • ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ 24 ಗಂಟೆ ನಂತರ ಬಿಸಿಸಿಐ ಟ್ವೀಟ್
  • ಬಿಸಿಸಿಐ ನಿರ್ಧಾರದ ವಿರುದ್ಧ ಕಿಡಿಕಾರಿದ ವಿರಾಟ್ ಕೊಹ್ಲಿ ಅಭಿಮಾನಿಗಳು
Virat Kohli: ಕಿಂಗ್ ಕೊಹ್ಲಿಗೆ ಬಿಸಿಸಿಐನಿಂದ ಕೇವಲ ಒಂದು ಸಾಲಿನ ಧನ್ಯವಾದ!   title=
ಕೊಹ್ಲಿಗೆ ಧನ್ಯವಾದ ತಿಳಿಸಿದ ಬಿಸಿಸಿಐ

ನವದೆಹಲಿ: ಬರೋಬ್ಬರಿ 4.5 ವರ್ಷಗಳ ಕಾಲ ಟೀಂ ಇಂಡಿಯಾದ ನಾಯಕತ್ವ(Team India Captaincy)ವಹಿಸಿದ್ದ ವಿರಾಟ್ ಕೊಹ್ಲಿ ಸೇವೆಗೆ ಬಿಸಿಸಿಐ ಕೇವಲ ಒಂದು ಸಾಲಿನಲ್ಲಿ ಧನ್ಯವಾದ ತಿಳಿಸಿದೆ. ‘ರನ್ ಮಷಿನ್’ ಖ್ಯಾತಿಯ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ 24 ಗಂಟೆಗಳ ನಂತರ ಬಿಸಿಸಿಐ ಈ ರೀತಿ ನೆನಪಿಸಿಕೊಂಡಿದೆ.

ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿ(Virat Kohli)ಯನ್ನು ಬುಧವಾರ ಬಿಸಿಸಿಐ(BCCI) ಕೆಳಗಿಳಿಸಿತ್ತು. ಆದರೆ ಗುರುವಾರ ಅಂದರೆ ಒಂದು ದಿನ ತಡವಾಗಿ ಟ್ವೀಟ್ ಮಾಡಿರುವ ಬಿಸಿಸಿಐ ಟೀಂ ಇಂಡಿಯಾಗೆ ಸಲ್ಲಿಸಿದ ಸೇವೆ ನೆನೆದು ಕೊಹ್ಲಿಗೆ ಧನ್ಯವಾದ ಅರ್ಪಿಸಿದೆ. ಕಿಂಗ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಅವರ ಕೋಟ್ಯಂತರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಸೋಷಿಯಲ್ ಮೀಡಿಯಾ(Social Media)ದಲ್ಲಿ ಬಿಸಿಸಿಐ ವಿರುದ್ಧ ಕಿಡಿಕಾರಿದ್ದ ಅಭಿಮಾನಿಗಳು ಬಿಸಿಸಿಐ ಕೊಹ್ಲಿಯನ್ನು ನಡೆಸಿಕೊಂಡ ರೀತಿಗೆ ಛೀಮಾರಿ ಹಾಕಿದ್ದರು.

ಇದನ್ನೂ ಓದಿ: #ShameOnBcci: ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ BCCI.!

ಇದ್ದಕ್ಕಿದ್ದಂತೆ ಕೊಹ್ಲಿಯನ್ನು ಟೀಂ ಇಂಡಿಯಾದ ನಾಯಕತ್ವ ಸ್ಥಾನ(ODI Skipper)ದಿಂದ ಕೆಳಗಿಳಿಸಿದ ಬಿಸಿಸಿಐನ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಟ್ವಿಟರ್ ನಲ್ಲಿ #ViratKohli #ShameOnBCCI, #Ganguly ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಈಗ ಟ್ವೀಟ್ ಮಾಡಿರುವ ಬಿಸಿಸಿಐ, ‘ತಾಳ್ಮೆ, ಉತ್ಸಾಹ ಮತ್ತು ದೃಢಸಂಕಲ್ಪದಿಂದ ತಂಡವನ್ನು ಮುನ್ನಡೆಸಿದ ನಾಯಕ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದೆ.

ವಿರಾಟ್ ಕೊಹ್ಲಿ ಏಕದಿನ ನಾಯಕ(Virat Kohli Captaincy)ನಾಗಿ 95 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಟೀಂ ಇಂಡಿಯಾ 65 ಗೆಲುವು ಮತ್ತು 27 ಸೋಲುಗಳನ್ನು ಕಂಡಿದೆ. ಕೊಹ್ಲಿ ಗೆಲುವಿನ ಸರಾಸರಿ ಶೇ.70.43ರಷ್ಟಿದೆ. 19 ದ್ವಿಪಕ್ಷೀಯ ಸರಣಿಗಳಲ್ಲಿ ಕೊಹ್ಲಿ 15ರಲ್ಲಿ ಗೆಲುವು ಸಾಧಿಸಿದ್ದಾರೆ.  

ಇದನ್ನೂ ಓದಿ: ಏಕದಿನ ಪಂದ್ಯಗಳಿಗೆ ರೋಹಿತ್ ಶರ್ಮಾ ನಾಯಕತ್ವ ವಹಿಸಿರುವುದಕ್ಕೆ ಗಂಗೂಲಿ ಹೇಳಿದ್ದೇನು?

ಇದಾದ ಬಳಿಕ ಬಿಸಿಸಿಐ ᴛʜʀᴏᴡʙᴀᴄᴋ ಹೆಸರಿನಲ್ಲಿ ಮತ್ತೆ 2 ಪೋಸ್ಟ್ ಗಳನ್ನು ಹಂಚಿಕೊಂಡಿದೆ. ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿ ಟೀಂ ಇಂಡಿಯಾ(Team India)ಗೆ ಗೆಲುವು ತಂದುಕೊಟ್ಟಿದ್ದು, 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಬಿಸಿಸಿಐ ನೆನೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News