ನವದೆಹಲಿ: ಸೆಂಚುರಿಯನ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ 2003 ರ ವಿಶ್ವಕಪ್ ಪಂದ್ಯದ ವೇಳೆ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್ ಅವರು  ಶೋಯಿಬ್ ಅಖ್ತರ್ ಬೌಲಿಂಗ್ ನಲ್ಲಿ  ಸಚಿನ್ ತೆಂಡೂಲ್ಕರ್ ಹೊಡೆದ ಆಫ್ ಸೈಡ್ ಸಿಕ್ಸರ್ ನ್ನು ನೆನಪಿಸಿಕೊಂಡರು.


ಇದನ್ನು ಓದಿ: ಸಚಿನ್ 'ಕೃಷ್ಣ', ನಾನು 'ಸುದಾಮ' ಎಂದು ಟ್ರೋಲ್ ಆದ ಮೊಹಮ್ಮದ್ ಕೈಫ್‌


COMMERCIAL BREAK
SCROLL TO CONTINUE READING

ಅವರು ಶೋಯೆಬ್ ಅಖ್ತರ್ ಅವರ ಓವರ್ ಪಾಯಿಂಟ್ ಮತ್ತು ಅದರ ನಂತರ ಫ್ಲಿಕ್ ಬೌಂಡರಿಗಾಗಿ ಫೈನ್-ಲೆಗ್ಗೆ ಹೊಡೆದರು.ಅದು ಸಚಿನ್ ಅವರ ಶಕ್ತಿ, ಅವರು ಎಂದಿಗೂ ಎಲ್ಬಿಡಬ್ಲ್ಯೂ ಆಗುವುದಿಲ್ಲ, ಅವರು ಎಂದಿಗೂ ಚೆಂಡನ್ನು ತಪ್ಪಿಸಲಿಲ್ಲ. ಅದಕ್ಕಾಗಿಯೇ ಅವರು ಅಂತಹ ಮಹಾನ್ ಬ್ಯಾಟ್ಸ್‌ಮನ್‌ ಆಗಿದ್ದರು, ಏಕೆಂದರೆ ಬೌಲರ್ ಚೆಂಡನ್ನು ಒಳಗೆ ತಂದು ಬ್ಯಾಟ್ಸ್‌ಮನ್ ನ್ನು ಎಲ್‌ಬಿಡಬ್ಲ್ಯು ಮೂಲಕ ಔಟ್ ಮಾಡುವ ಸಾಧ್ಯತೆ ಇದೆ,ಅದು ಸಚಿನ್‌ಗೆ ಅವರ ವೃತ್ತಿಜೀವನದಲ್ಲಿ ಕೆಲವೇ ಬಾರಿ ಸಂಭವಿಸಿದೆ'ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪಾಕಿಸ್ತಾನದ 2003 ರ ಪಂದ್ಯ ಕುರಿತ ಚರ್ಚೆ ವೇಳೆ ಕೈಫ್‌ ಹೇಳಿದರು.


2002 ರಲ್ಲಿ ನಾಸಿರ್ ಹುಸೇನ್ ನನ್ನನ್ನು ಬಸ್ ಡ್ರೈವರ್ ಎಂದು ಹಿಯಾಳಿಸಿದ್ದರು- ಕೈಫ್

ಈ ಪಂದ್ಯದಲ್ಲಿ ಸಚಿನ್ 98 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣಕರ್ತರಾಗಿದ್ದರು.