Bharat Arun and Mohammad Siraj: ಟೀಂ ಇಂಡಿಯಾದ ಬಲಿಷ್ಠ ಬೌಲರ್ ಮೊಹಮ್ಮದ್ ಸಿರಾಜ್ ಯಾರಿಗೆ ತಿಳಿದಿಲ್ಲ ಹೇಳಿ? ಆದರೆ ಅವರು ನಡೆದು ಬಂದ ಹಾದಿ, ಅವರ ಕೌಟುಂಬಿಕ ಹಿನ್ನೆಲೆ, ತಂಡಕ್ಕೆ ಆಯ್ಕೆಯಾದ ಕಥೆ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಹೀಗಾಗಿ ನಾವಿಂದು ಈ ವರದಿಯಲ್ಲಿ ಮೊಹಮ್ಮದ್ ಸಿರಾಜ್ ತಂಡಕ್ಕೆ ಆಯ್ಕೆಯಾದ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಆಟೋ ಡ್ರೈವರ್ ತಂದೆ, ಮನೆ ಮನೆಗೆ ಸಹಾಯಕಿಯಾಗಿ ಕೆಲಸಕ್ಕೆ ಹೋಗುತ್ತಿದ್ದ ತಾಯಿ. ಅಣ್ಣನ ಬೆಂಬಲದಲ್ಲಿ ಕ್ರಿಕೆಟ್ ಆಡಲು ಮುಂದಾದ ಸಿರಾಜ್ ಈಗ ಟೀಂ ಇಂಡಿಯಾದ ಸ್ಟಾರ್ ಬೌಲರ್. ಆದರೆ ಒಂದೊಮ್ಮೆ ಸ್ಲಂ ಜೀವನ ನಡೆಸುತ್ತಿದ್ದ ಸಿರಾಜ್ ಇಂದು ಕೋಟ್ಯಾಧಿಪತಿಯಾಗಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ಅವರ ಪ್ರತಿಭೆ-ಅವರ ಅದ್ಭುತ ಪ್ರದರ್ಶನ.


ಇದನ್ನೂ ಓದಿ: ತಂದೆ ಆಟೋ ಡ್ರೈವರ್, ಸ್ಲಂನಲ್ಲಿ ವಾಸ! ಲಂಕಾ ಬ್ಯಾಟಿಂಗ್ ಕ್ರಮಾಂಕವನ್ನೇ ನಡುಗಿಸಿದ ಸಿರಾಜ್ ಹಿನ್ನೆಲೆ ಏನು ಗೊತ್ತಾ?


ಆದರೆ ಈ ಪ್ರತಿಭೆಯನ್ನು ಪ್ರಪಂಚದ ಮುಂದಿಡಲು ಕಾರಣವಾಗಿದ್ದು ಆ ಒಬ್ಬ ವ್ಯಕ್ತಿ, ಅಂದು ಅವರು ಪಟ್ಟು ಹಿಡಿದಿಲ್ಲ ಎಂದಾದರೆ, ಇಂದು ಮಿಯಾ ಮ್ಯಾಜಿಕ್ ಭಾರತ ಪರ ಆಡುತ್ತಿರಲಿಲ್ಲವೇನೋ…!!


ಅದು 2015ರ ಐಪಿಎಲ್ ಸಮಯ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಬಾದ ವಿರುದ್ಧದ ಪಂದ್ಯವಾಡಲು ಹೈದರಾಬಾದ್’​ಗೆ ತೆರಳಿತ್ತು. ಅಂದು ಆರ್ ಸಿ ಬಿ ತಂಡದ ಬ್ಯಾಟಿಂಗ್ ಅಭ್ಯಾಸಕ್ಕಾಗಿ ನೆಟ್​ ಬೌಲರ್​’ಗಳ ಅವಶ್ಯಕತೆಯಿತ್ತು. ಈ ಕಾರಣದಿಂದಾಗಿ ಸ್ಥಳೀಯ ಕೆಲ ಬೌಲರ್’​ಗಳನ್ನು ಕರೆಸಲಾಗಿತ್ತು. ಅಂದು ಯುವ ವೇಗಿಯೊಬ್ಬ ನೆಟ್’ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು.


ಅತ್ತ ಬ್ಯಾಟ್ಸ್​’ಮನ್​’ಗಳಿಗೆ ಅಭ್ಯಾಸಕ್ಕಿಂತ ಈತನ ಎಸೆತಗಳನ್ನು ಎದುರಿಸುವುದೇ ಸವಾಲಾಗಿತ್ತು. ಇವೆಲ್ಲವನ್ನೂ ದೂರದಲ್ಲೇ ನಿಂತು ಗಮನಿಸುತ್ತಿದ್ದರು ಅಂದಿನ ಆರ್​’ಸಿಬಿ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್. ಆ ಬಳಿಕ ಅವರು, ಅಂದಿನ ಸನ್​ರೈಸರ್ಸ್ ಹೈದರಾಬಾದ್ ತಂಡದ ನಿರ್ದೇಶಕರಾಗಿದ್ದ ವಿವಿಎಸ್​ ಲಕ್ಷ್ಮಣ್ ಬಳಿ ಈ ಯುವ ವೇಗಿಯ ಬಗ್ಗೆ ವಿಚಾರಿಸಿದರು.


“ಅದ್ಭುತ ಬೌಲರ್. ಆತನೇನಾದರೂ ಹೈದರಾಬಾದ್‌ ತಂಡದ ಪರ ಆಡುತ್ತಿದ್ದಾನಾ?” ಎಂದು ಭರತ್ ಅರುಣ್ ಕೇಳಿದರು. ಆದರೆ ವಿವಿಎಸ್​ ಲಕ್ಷ್ಮಣ್’ಗೆ ಆತನ ಪರಿಚಯ ಇರಲಿಲ್ಲ.


ಇದಾದ ಬಳಿಕ 2016 ರಲ್ಲಿ ಭರತ್ ಅರುಣ್ ಅವರು ಹೈದಾರಾಬಾದ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾದರು. ತಕ್ಷಣವೇ ರಣಜಿ ಟ್ರೋಫಿಗಾಗಿ ಆಯ್ಕೆ ಮಾಡಲಾದ ಹೈದರಾಬಾದ್ ತಂಡದಲ್ಲಿ, ಆ ಯುವ ವೇಗಿ ಇದ್ದಾನಾ ಎಂದು ಭರತ್ ಅರುಣ್ ನೋಡಿದರು. ಆದರೆ ಆತನ ಹೆಸರು ಕಾಣಿಸದಿದ್ದಾಗ, ತಕ್ಷಣವೇ ಆತನನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಶಿಫಾರಸ್ಸು ಮಾಡಿದರು. ಇಲ್ಲದಿದ್ದರೆ ತಾನು ಕೋಚ್ ಹುದ್ದೆಯಿಂದ ಕೆಳಗಿಳಿಯುವುದಾಗಿ ಖಡಕ್ ಆಗಿ ಹೇಳಿದರು.


ಅಂದು ಭರತ್ ಅರುಣ್ ಅವರು ಹಠಹಿಡಿದ ಕಾರಣ ಹೈದರಾಬಾದ್ ತಂಡಕ್ಕೆ ಮೊಹಮ್ಮದ್ ಸಿರಾಜ್ ಆಯ್ಕೆಯಾದರು. ಕಡೆಗೂ ಭರತ್ ಅವರ ನಿರೀಕ್ಷೆ ಹುಸಿಯಾಗಲಿಲ್ಲ. 2016ರ ರಣಜಿ ಟ್ರೋಫಿ ಮುಗಿದಾಗ ಮೊಹಮ್ಮದ್ ಸಿರಾಜ್ ಬತ್ತಳಿಕೆ ಸೇರಿತ್ತು ಬರೋಬ್ಬರಿ 41 ವಿಕೆಟ್​.


ಇದಾದ ಬಳಿಕ 2017 ರಲ್ಲಿ ಟೀಮ್ ಇಂಡಿಯಾದಿಂದ ಸಿರಾಜ್ ಆಯ್ಕೆ ಸಿಹಿಸುದ್ದಿ ಬಂತು. ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​’ಗೆ ಸಿರಾಜ್ ಪಾದಾರ್ಪಣೆ ಮಾಡಿದ್ದರು. ಆದರೆ ಮೊದಲ ಪಂದ್ಯದಲ್ಲೇ 4 ಓವರ್​ಗಳಲ್ಲಿ ಬರೋಬ್ಬರಿ 53 ರನ್​ ನೀಡಿ ನಿರಾಸೆ ಮೂಡಿಸಿದ್ದರು.


ಇದನ್ನೂ ಓದಿ: ಏಷ್ಯಾಕಪ್ ಗೆದ್ದ ಭಾರತಕ್ಕೆ, ಸೋಲುಂಡ ಶ್ರೀಲಂಕಾಗೆ ಸಿಕ್ಕ ಮೊತ್ತ ಎಷ್ಟು? ಯಾರ ಪಾಲಿಗೆ ಯಾವ ಅವಾರ್ಡ್? ಇಲ್ಲಿದೆ ವಿವರ


ಇನ್ನು ಆ ಬಳಿಕ ಟೀಂ ಇಂಡಿಯಾದಲ್ಲಿ ಪರಿಪೂರ್ಣ ಬೌಲರ್ ಆಗಿ ಮಿಂಚಲು ಕಾರಣವಾಗಿದ್ದು, ವಿರಾಟ್ ಕೊಹ್ಲಿ. ಸತತ ವೈಫಲ್ಯ ಅನುಭವಿಸಿದರೂ ಸಹ ಆರ್​’ಸಿಬಿ ನಾಯಕ ಕೊಹ್ಲಿ ಸಿರಾಜ್ ಬೆಂಬಲಕ್ಕೆ ನಿಂತರು. ಸತತ ಪಂದ್ಯಗಳಲ್ಲಿ ಕಣಕ್ಕಿಳಿಸಿದರು. ಕಡೆಗೂ ಸಿರಾಜ್, ಕೊಹ್ಲಿ ನಂಬಿಕೆಯನ್ನು ಉಳಿಸಿಕೊಂಡರು. ಅಲ್ಲದೆ 2019 ರಲ್ಲಿ ಏಕದಿನ ಕ್ರಿಕೆಟ್’​ಗೆ ಪಾದಾರ್ಪಣೆ ಮಾಡಿದ ಸಿರಾಜ್, 2020 ರಲ್ಲಿ ಟೆಸ್ಟ್​ ಕ್ರಿಕೆಟ್’​ನಲ್ಲಿ ಕಾಣಿಸಿಕೊಂಡರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.