Mohammed Siraj 5 Wickets Against Sri Lanka: ಕೊಲಂಬೊದಲ್ಲಿ ಮಿಯಾನ್ ಮ್ಯಾಜಿಕ್ ಮೊಹಮ್ಮದ್ ಸಿರಾಜ್ ಅದ್ಭುತವನ್ನೇ ಸೃಷ್ಟಿಸಿದ್ದಾರೆ. ಕೇವಲ 16 ಎಸೆತಗಳಲ್ಲಿ ಐದು ವಿಕೆಟ್ ಪಡೆದ ಈ ಬೌಲರ್ ಟೀಂ ಇಂಡಿಯಾಗೆ ಏಷ್ಯಾಕಪ್ ಗೆದ್ದುಕೊಡುವಂತೆ ಮಾಡಿದ್ದಾರೆ. ಲಂಕಾದ ಬ್ಯಾಟಿಂಗ್ ಕ್ರಮಾಂಕವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಮೊಹಮ್ಮದ್ ಸಿರಾಜ್ ಅವರ ಹಿನ್ನೆಲೆಯ ಬಗ್ಗೆ ನಾವಿಂದು ನಿಮಗೆ ತಿಳಿಸಲಿದ್ದೇವೆ.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿರಾಜ್ ಕೇವಲ 16 ಎಸೆತಗಳಲ್ಲಿ ಐದು ವಿಕೆಟ್ ಪಡೆದಿದ್ದು, ಈ ಮೂಲಕ ಏಕದಿನ ಕ್ರಿಕೆಟ್’ನಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಪಾತುಂ ನಿಸ್ಸಾಂಕ, ಸದಿರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ್ ಡಿ ಸಿಲ್ವಾ ಮತ್ತು ದಸುನ್ ಶಾನಕ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ್ದು ಸಿರಾಜ್.
ಇದನ್ನೂ ಓದಿ: 2025ರವರೆಗೆ ಈ ರಾಶಿಯವರಿಗೆ ಪ್ರತೀದಿನವೂ ಸುವರ್ಣಯುಗ: ಹಣದ ಸುರಿಮಳೆ, ಕೈಯಿಟ್ಟಲ್ಲೆಲ್ಲಾ ಯಶಸ್ಸು, ರಾಜರಂತಹ ಜೀವನ
ಸಿರಾಜ್ ಶ್ರೀಲಂಕಾ ವಿರುದ್ಧ ಒಂದೇ ಓವರ್’ನಲ್ಲಿ ನಾಲ್ಕು ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ ಒಂದು ಓವರ್‌ನಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಮತ್ತು ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ, ಶ್ರೀಲಂಕಾದ ಮಾಜಿ ಶ್ರೇಷ್ಠ ಬೌಲರ್ ಲಸಿತ್ ಮಾಲಿಂಗ ಏಕದಿನದಲ್ಲಿ ಒಂದು ಓವರ್’ನಲ್ಲಿ ನಾಲ್ಕು ವಿಕೆಟ್’ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದರು.
ಮೊಹಮ್ಮದ್ ಸಿರಾಜ್ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ವಿಶ್ವಾಸಾರ್ಹ ವೇಗದ ಬೌಲರ್ ಮತ್ತು ODI ಮಾದರಿಯಲ್ಲಿ ನಂಬರ್ 1 ಬೌಲರ್ ಕೂಡ ಆಗಿದ್ದಾರೆ. 13 ಮಾರ್ಚ್ 1994 ರಂದು ಹೈದರಾಬಾದ್ ನಗರದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮೊಹಮ್ಮದ್ ಸಿರಾಜ್, ಬಾಲ್ಯದಿಂದಲೂ ಕ್ರಿಕೆಟ್’ನಲ್ಲಿ ಆಸಕ್ತಿ ಹೊಂದಿದ್ದರು. ತಮ್ಮ ಕಠಿಣ ಪರಿಶ್ರಮದಿಂದ ಇಡೀ ಜಗತ್ತಿನಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡ ಮಿಯಾನ್ ನಿಜಜೀವನ ಹೇಳಿಕೊಳ್ಳುವಷ್ಟು ಸವಲತ್ತಿನಿಂದ ಕೂಡಿರಲಿಲ್ಲ.
ಮೊಹಮ್ಮದ್ ಸಿರಾಜ್ ಕುಟುಂಬ:
ಮೊಹಮ್ಮದ್ ಸಿರಾಜ್ ತಂದೆಯ ಹೆಸರು ಮೊಹಮ್ಮದ್ ಗೌಸ್ ಮತ್ತು ತಾಯಿಯ ಹೆಸರು ಶಬನಮ್ ಬೇಗಂ. ಸಿರಾಜ್ ಅವರ ತಂದೆ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದು, ತಾಯಿ ಅಜ್ಜಿಯೊಂದಿಗೆ ಇತರರ ಮನೆಗಳಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನು ಸಿರಾಜ್ ಅವರ ಹಿರಿಯ ಸಹೋದರ ಮೊಹಮ್ಮದ್ ಇಸ್ಮಾಯಿಲ್ ಅವರಿಗೆ ಸಿರಾಜ್ ಪ್ರತಿಭೆಯ ಬಗ್ಗೆ ತಿಳಿದಿತ್ತು. ಅದಕ್ಕಾಗಿಯೇ ಮೊಹಮ್ಮದ್ ಇಸ್ಮಾಯಿಲ್ ತನ್ನ ಸಹೋದರ ಮೊಹಮ್ಮದ್ ಸಿರಾಜ್ ಅವರನ್ನು ಕ್ರಿಕೆಟ್ ಆಡುವಂತೆ ಸಂಪೂರ್ಣವಾಗಿ ಬೆಂಬಲಿಸಿದರು. ಒಂದು ಕಾಲದಲ್ಲಿ ಮೊಹಮ್ಮದ್ ಸಿರಾಜ್ ಅವರ ಕುಟುಂಬದ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿತ್ತು. ಇದೇ ಕಾರಣದಿಂದ ಯಾವುದೇ ಅಕಾಡೆಮಿಗೆ ಸೇರದೆ ತಮ್ಮ ಅಭ್ಯಾಸವನ್ನು ಮಾಡುತ್ತಿದ್ದರು. ಇದೆಲ್ಲದರಲ್ಲೂ ಮೊಹಮ್ಮದ್ ಸಿರಾಜ್ ಅವರಿಗೆ ಅಣ್ಣನ ಸಂಪೂರ್ಣ ಬೆಂಬಲವಿತ್ತು.
ಇದನ್ನೂ ಓದಿ: ಈ ರಾಶಿಯವರ ಮೇಲಿರಲಿದೆ ಶಿವಾನುಗ್ರಹ: ಇಂದು ವ್ಯಾಪಾರದಲ್ಲಿ ಭಾರೀ ಲಾಭ, ವಿದೇಶ ಪ್ರಯಾಣದ ಯೋಗ
ಸರಿಯಾಗಿ ತರಬೇತು ಪಡೆಯಲು ಹಣವಿಲ್ಲದ ಕಾರಣ ಬೀದಿಗಳಲ್ಲಿ ಬಿದ್ದಿದ್ದ ಟೆನಿಸ್ ಬಾಲ್ ಮೂಲಕ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರಂತೆ ಮೊಹಮ್ಮದ್ ಸಿರಾಜ್. ಆದರೆ ಇಂದು ಸಿರಾಜ್ ಅವರನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಅಚ್ಚರಿಯ ಮತ್ತು ಅದ್ಭುತ ಪ್ರದರ್ಶನದ ಮೂಲಕ ಟೀಂ ಇಂಡಿಯಾ ತನ್ನ 8ನೇ ಏಷ್ಯಾಕಪ್ ಎತ್ತಿಹಿಡಿಯುವಂತೆ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.