ವಿರಾಟ್ ಕೊಹ್ಲಿ ಹೇಳಿಕೆಗೆ ಕಪಿಲ್ ದೇವ್ ತೀವ್ರ ಅಸಮಾಧಾನ
ಭಾನುವಾರ ನಡೆದ T20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಂತರ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆ ವಿಚಾರವಾಗಿ ಭಾರತದ ಕ್ರಿಕೆಟ್ ದಂತ ಕಥೆ ಕಪಿಲ್ ದೇವ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಭಾನುವಾರ ನಡೆದ T20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಂತರ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆ ವಿಚಾರವಾಗಿ ಭಾರತದ ಕ್ರಿಕೆಟ್ ದಂತ ಕಥೆ ಕಪಿಲ್ ದೇವ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಜೊತೆಗಿನ ನೆನಪುಗಳನ್ನು ಸ್ಮರಿಸಿದ ಪ್ರಿಯಾಂಕ್ ಖರ್ಗೆ
ಕೊಹ್ಲಿ ಪಂದ್ಯದ ಸೋಲಿನ ನಂತರ ನಾವು ಸಾಕಷ್ಟು ಧೈರ್ಯಶಾಲಿಯಾಗಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.ಈಗ ಈ ವಿಚಾರವಾಗಿ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಕಪಿಲ್ ದೇವ್ "ನಿಸ್ಸಂಶಯವಾಗಿ, ವಿರಾಟ್ ಕೊಹ್ಲಿಯ ರಂತ ಆಟಗಾರನಿಂದ ಇದು ತುಂಬಾ ದುರ್ಬಲ ಹೇಳಿಕೆಯಾಗಿದೆ.ಅವರಿಗೆ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲುವ ಹಸಿವು ಮತ್ತು ಆಸೆ ಇದೆ ಎಂದು ನಮಗೆಲ್ಲರಿಗೂ ತಿಳಿದಿದೆ.ತಂಡದ ದೇಹ ಭಾಷೆ ಮತ್ತು ನಾಯಕನ ಆಲೋಚನಾ ಪ್ರಕ್ರಿಯೆಯು ಮೇಲ್ಮಟ್ಟಕ್ಕೆ ಏರದಿದ್ದರೆ, ಡ್ರೆಸ್ಸಿಂಗ್ ರೂಮ್‌ನೊಳಗಿನ ಆಟಗಾರರ ಮನಸ್ಥಿತಿಯನ್ನು ಎತ್ತುವುದು ತುಂಬಾ ಕಷ್ಟ." ಎಂದು ಅವರು ಹೇಳಿದರು.
ಇದನ್ನೂ ಓದಿ:Puneeth Rajkumar: ಕರುನಾಡಿನ ಪೀತಿಯ ‘ಅಪ್ಪು’ಗೆ ಭಾವಪೂರ್ಣ ವಿದಾಯ, ಅಂತಿಮ ಸಂಸ್ಕಾರದಲ್ಲಿ ಗಣ್ಯರ ಕಂಬನಿ
1983 ರಲ್ಲಿ ಭಾರತವನ್ನು ತಮ್ಮ ಮೊದಲ ವಿಶ್ವಕಪ್‌ಗೆ ಮುನ್ನಡೆಸಿದ ಕಪಿಲ್ ದೇವ್, ಅಂತಹ ಸಂದಿಗ್ಧ ಸಮಯದಲ್ಲಿ ತಂಡವನ್ನು ಪ್ರೇರೇಪಿಸಲು ತಮ್ಮ ಅನುಭವವನ್ನು ಬಳಸಬೇಕೆಂದು ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಮೆಂಟರ್ ಎಂಎಸ್ ಧೋನಿ ಅವರನ್ನು ಒತ್ತಾಯಿಸಿದರು.ತಂಡದ ಟೀಕೆಗಳು ಸಮರ್ಥನೀಯವಾಗಿದ್ದು, ಆಟಗಾರರು ಅದನ್ನು ನಿಭಾಯಿಸಬೇಕು ಎಂದು ಅವರು ಹೇಳಿದರು.
ಈಗ ಭಾರತ ತಂಡವು ಸೆಮಿಸ್ ಗೆ ಅರ್ಹತೆ ಪಡೆಯಬೇಕೆಂದರೆ ಭಾರತ ಉಳಿದ ಮೂರು ಪಂದ್ಯಗಳನ್ನು ಉತ್ತಮ ಸರಾಸರಿಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.ನ್ಯೂಜಿಲೆಂಡ್ ತಂಡದ ಗುಣಮಟ್ಟದ ಬೌಲಿಂಗ್‌ನ ಎದುರು ತಂಡವು 20 ಓವರ್‌ಗಳಲ್ಲಿ 110/7 ಸ್ಕೋರ್ ಗಳಿಸುವ ಮೂಲಕ ಈಗ ಎಲ್ಲರ ಟೀಕೆಗೆ ಪಾತ್ರವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ