MS Dhoni : ದೇಶದ ಪ್ರತಿಷ್ಠಿತ ನಗರದಲ್ಲಿ ಮನೆ ಖರೀದಿಸಿದ್ದಾರೆ MS ಧೋನಿ!
ರಾಂಚಿ ಹೊರವಲಯದಲ್ಲಿ ರಿಂಗ್ ರಸ್ತೆಯಲ್ಲಿ 43 ಎಕರೆ ಫಾರ್ಮ್ ಹೌಸ್
ಮುಂಬೈ : ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಅವರು ತಮ್ಮ ತವರು ರಾಂಚಿ(ಜಾರ್ಖಂಡ್ ರಾಜಧಾನಿ) ಹೊರವಲಯದಲ್ಲಿ ರಿಂಗ್ ರಸ್ತೆಯಲ್ಲಿ 43 ಎಕರೆ ಪ್ರದೇಶದಲ್ಲಿ ಫಾರ್ಮ್ ಹೌಸ್ ಹೊಂದಿದ್ದಾರೆ.
ಅಲ್ಲದೆ ಅಲ್ಲಿ ಅದ್ಭುತವಾದ ಮನೆ(House)ಯನ್ನು ನಿಮಿರ್ಸಿಕೊಂಡಿದ್ದಾರೆ. ಇದು ಭಾರತದ ಅತ್ಯಂತ ಸುಂದರವಾದ ವಸತಿ ಮನೆಗಳಲ್ಲಿ ಒಂದಾಗಿದೆ. ಈ ಮನೆಯಲಿನ್ ಒಂದು ದೊಡ್ಡ ಗ್ಯಾರೇಜ್ ಮತ್ತು ಅವರ ನಾಯಿಗಳಿಗೆ ಮನೆಗಳನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ : ಧೋನಿಯನ್ನು ಎರಡು ಪದಗಳಲ್ಲಿ ಬಣ್ಣಿಸಿದ ವಿರಾಟ್ ಕೊಹ್ಲಿ..!
ಇದೀಗ ಧೋನಿ ಮಹಾರಾಷ್ಟ್ರದ ಪುಣೆಯಲ್ಲೂ ಮನೆ ಖರೀದಿಸಿದ್ದಾರೆ. ಪುಣೆಯ ಪಿಂಪ್ರಿ-ಚಿನ್-ಚನ್ ವಾಡ(Pune's Pimpri-Chinchwad) ಪ್ರದೇಶದಲ್ಲಿ ಮನೆ ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಿಮಿರ್ಸುತ್ತಿರುವ ಮನೆಯ ಚಿತ್ರಗಳನ್ನು ಧೋನಿ ಪತ್ನಿ ಸಾಕ್ಷಿ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ : IPL 2021: ಉಳಿದ ಪಂದ್ಯಗಳು UAE ನಲ್ಲಿಯೇ ನಡೆಯಲಿವೆ, ಮುದ್ರೆಯೋತ್ತಿದ BCCI
ಎಂಎಸ್ ಧೋನಿ(MS Dhoni) ಅವರ ಸ್ಪೀಡ್ ಕಾರುಗಳು ಮತ್ತು ಬೈಕ್‌ಗಳ ಕ್ರೇಜ್ ಹೊಂದಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಪೋರ್ಷೆ, ಹಮ್ಮರ್ ಎಚ್ 2, ಆಡಿ ಕ್ಯೂ 7, ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2 ಒಳಗೊಂಡಂತೆ ಪ್ರಪಂಚದ ಎಲ್ಲ ರೀತಿಯ ಕಾರುಗಳಿವೆ.
ಇದನ್ನೂ ಓದಿ : "ಭಾರತ ತಂಡದ ಅತ್ಯುತ್ತಮ ಫಾರ್ಮ್ ಗೆ ರವಿಶಾಸ್ತ್ರಿ ಆತ್ಮ ವಿಶ್ವಾಸ ಕಾರಣ "
ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) 2021 ಸೋತ ನಂತರ ಧೋನಿ ಪ್ರಸ್ತುತ ರಾಂಚಿಯ ತಮ್ಮ ತೋಟದ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಧೋನಿ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಕ್ಯಾಪ್ಟನ್ ಮತ್ತು ಅವರ ಮೊದಲ ಪಂದ್ಯಗಳಲ್ಲಿ ಐದು ಗೆಲುವುಗಳಿಗೆ ಕಾರಣರಾದರು ಕೋವಿಡ್-19 ಕಾರಣ ಪಂದ್ಯಾವಳಿಯ ಏಳು ಪಂದ್ಯಗಳನ್ನು ಅನಿರ್ದಿಷ್ಟವಾಗಿ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ : Mohammed Shami: ಫೋಟೋ ಶೇರ್ ಮಾಡಿ ಟ್ರೋಲ್‍ಗೆ ಗುರಿಯಾದ ಶಮಿ ಪತ್ನಿ Hasin Jahan
ಧೋನಿ ಈಗಾಗಲೇ ಮನರಂಜನಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಮುಂಬಯಿಯಲ್ಲಿ ಕಚೇರಿ ಹೊಂದಿರುವ ‘ಎಂಎಸ್‌ಡಿ ಎಂಟರ್‌ಟೈನ್‌ಮೆಂಟ್’(MSD Entertainment) ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಕಳೆದ ವರ್ಷ ಧೋನಿಯ ಕಂಪನಿಯು ಡಾಕುಮೆಂಟರಿ ನಿರ್ಮಿಸಿತ್ತು. ನಿರ್ಮಾಣ ಕಂಪನಿಯ ನೇತೃತ್ವವನ್ನು ಅವರ ಪತ್ನಿ ಸಾಕ್ಷಿ ವಹಿಸಿದ್ದಾರೆ.
ಇದನ್ನೂ ಓದಿ : Sushil Kumar : ರೆಸ್ಲರ್ ಸುಶೀಲ್ ಕುಮಾರ್ ಸಹಚರರು ದೊಣ್ಣೆಯಿಂದ ಹೊಡೆಯುವ ಫೋಟೋ ವೈರಲ್!
ಇತ್ತೀಚೆಗೆ, ಸಾಕ್ಷಿ ತಮ್ಮ ರಾಂಚಿ ತೋಟದ ಮನೆಯಲ್ಲಿ ಧೋನಿ ತನ್ನ ಚೇತಕ್(Horse Chetak) ಅನ್ನು ಮುದ್ದಿಸುವ ವೀಡಿಯೊವನ್ನು ಹಂಚಿಕೊಂಡಿದ್ದರು. ಸಾಕುಪ್ರಾಣಿ ಪ್ರಿಯರಾದ ಧೋನಿ ಮತ್ತು ಸಾಕ್ಷಿ ಇತ್ತೀಚೆಗೆ ಚೇತಕ್ ಎಂಬ ಕುದುರೆಯನ್ನ ತಮ್ಮ ಮನೆಗೆ ಸ್ವಾಗತಿಸಿದರು. ಈ ದಂಪತಿಗಳು ಈಗಾಗಲೇ ತಮ್ಮ ತೋಟದ ಮನೆಯಲ್ಲಿ ಹಲವಾರು ಸಾಕು ನಾಯಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ : ಅಟೋ ಡ್ರೈವರ್ ಗಳಿಗೆ ಆಹಾರ ಧಾನ್ಯ ವಿತರಿಸಿದ ಕ್ರಿಕೆಟರ್ ಮಿಥಾಲಿ ರಾಜ್ ತಂದೆ
2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಧೋನಿ ಈ ವರ್ಷದ ಕೊನೆಯಲ್ಲಿ ಯುಎಇ(UAE)ಯಲ್ಲಿ ನಡೆಯುವ ಐಪಿಎಲ್ 2021 ರ ಎರಡನೇ ಹಂತದ ಪುನರಾರಂಭಗೊಂಡರೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮ್ಯಾಚ್ ನಿಂದ ಮತ್ತೆ ಮರಳಲಿದ್ದಾರೆ. ಐಪಿಎಲ್ 2021 ರ ಉಳಿದ ಪಂದ್ಯಗಳು ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಶನಿವಾರ ದೃಢಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ