IPL 2021: ಉಳಿದ ಪಂದ್ಯಗಳು UAE ನಲ್ಲಿಯೇ ನಡೆಯಲಿವೆ, ಮುದ್ರೆಯೋತ್ತಿದ BCCI

IPL 2021 - ಐಪಿಎಲ್ 2021 (IPL-2021) ಸೀಜನ್ ನ ಉಳಿದ ಪಂದ್ಯಗಳನ್ನು UAE (Indian Premier League 2021 In UAE) ನಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತೀರ್ಮಾನ ಕೈಗೊಂಡಿದೆ. ಶನಿವಾರ ಮುಂಬೈನಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

Written by - Nitin Tabib | Last Updated : May 29, 2021, 09:25 PM IST
  • IPL 2021ರ ಮುಂದಿನ ಪಂದ್ಯಗಳು UAE ನಲ್ಲಿ ನಡೆಯುವುದು ಫಿಕ್ಸ್.
  • ಈ ಕುರಿತು ಅಧಿಕೃತ ಮಾಹಿತಿ ನೀಡಿದ BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ.
  • ICC ವಿಶ್ವಕಪ್ ಕುರಿತು ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಎಂದು ಸಭೆ ನಿರ್ಧಾರ.
IPL 2021: ಉಳಿದ ಪಂದ್ಯಗಳು UAE ನಲ್ಲಿಯೇ ನಡೆಯಲಿವೆ, ಮುದ್ರೆಯೋತ್ತಿದ BCCI title=
IPL 2021 (File Photo)

ನವದೆಹಲಿ: IPL 2021 - ಐಪಿಎಲ್ 2021 (IPL-2021) ಸೀಜನ್ ನ ಉಳಿದ ಪಂದ್ಯಗಳನ್ನು UAE (Indian Premier League 2021 In UAE) ನಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತೀರ್ಮಾನ ಕೈಗೊಂಡಿದೆ. ಶನಿವಾರ ಮುಂಬೈನಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ (BCCI Vice President Rajeev Shukla) ಈ ಕುರಿತು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ಹವಾಮಾನ ವೈಪರಿತ್ಯದಿಂದ ಕೂಡಿರುವ ಕಾರಣ BCCI ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ, ಬಯೋ ಬಬಲ್ ನಲ್ಲಿ ಹಲವಾರು ಆಟಗಾರರು ಕೊರೊನಾ ಪಾಸಿಟಿವ್ ಕಂಡುಬಂದ ಬಳಿಕ ಮಂಡಳಿಯು ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2021) ನ 14 ಋತುವಿನ (IPL 14TH SEASON) ಉಳಿದ ಪಂದ್ಯಗಳನ್ನೂ ಅನಿರ್ದಿಷ್ಟವಾಗಿ ಮುಂದೂಡಿತ್ತು.

ಇದನ್ನೂ ಓದಿ- "ಭಾರತ ತಂಡದ ಅತ್ಯುತ್ತಮ ಫಾರ್ಮ್ ಗೆ ರವಿಶಾಸ್ತ್ರಿ ಆತ್ಮ ವಿಶ್ವಾಸ ಕಾರಣ "

ಇದನ್ನೂ ಓದಿ- IPL 2021: ಈ ದಿನಾಂಕದಿಂದ UAEಯಲ್ಲಿ IPL ಆರಂಭ! ಫೈನಲ್ ಡೇಟ್ ಕೂಡ ಫಿಕ್ಸ್ !

ಇನ್ನೊಂದೆಡೆ ICC T-20 ವರ್ಲ್ಡ್ ಕಪ್ ಗೆ (ICC T20 World Cup) ಸಂಬಂಧಿಸಿದಂತೆ ಯಾವುದೇ ನಿರ್ಣಯವನ್ನು ಕೈಗೊಳ್ಳುವ ಮೊದಲು ಭಾರತದಲ್ಲಿ ಕೊವಿಡ್-19 ಸ್ಥಿತಿಗತಿಯ ಸಮೀಕ್ಷೆಗಾಗಿ ನಿರೀಕ್ಷಿಸುವುದಾಗಿ ಮಂಡಳಿ ಈ ಸಭೆಯಲ್ಲಿ ನಿರ್ಧರಿಸಿದೆ. ICC T-20 ವಿಶ್ವಕಪ್ ಕುರಿತು ನಿರ್ಣಯ ಕೈಗೊಳ್ಳಲು ಜೂನ್ 1 ರಂದು ICC ಸಭೆ ಸೇರಲಿದೆ ಎಂಬುದು ಇಲ್ಲಿ ಉಲ್ಲೇಖನೀಯ. 

ಇದನ್ನೂ ಓದಿ-ಜಾಗತಿಕ ಕ್ರಿಕೆಟ್ ಗೆ ಭಾರತದ ಅಗತ್ಯವಿದೆ- ರಿಚರ್ಡ್ ಹ್ಯಾಡ್ಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News