ನವದೆಹಲಿ: ಸೋಮವಾರ ಸಿಡ್ನಿಯಲ್ಲಿ ನಡೆದ 3 ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 97 ರನ್ ಗಳಿಸಿದ ರಿಶಬ್ ಪಂತ್ ಬಗ್ಗೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಿಷಭ್ ಪಂತ್ ಊರ್ವಶಿ ರೌತೆಲಾ ನಂಬರ್ ಅನ್ನು ಬ್ಲಾಕ್ ಮಾಡಿದ್ದೇಕೆ? ಇಲ್ಲಿದೆ ಕಾರಣ


ರಿಷಭ್ ಪಂತ್ (Rishabh Pant) ಅವರ ವಿಧಾನದ ಬಗ್ಗೆ ಯಾವಾಗಲೂ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಇದನ್ನು ಕೆಲವೊಮ್ಮೆ ಅಜಾಗರೂಕವೆಂದು ಪರಿಗಣಿಸಲಾಗುತ್ತದೆ. ಆದರೆ,ಪಂತ್ ತಮ್ಮ ಶಕ್ತಿಯನ್ನು ಬೆಂಬಲಿಸಬೇಕು ಮತ್ತು ಅವರು ಬ್ಯಾಟ್ ಮಾಡುವ ರೀತಿಯಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಗಂಭೀರ್ ಹೇಳಿದರು.


ಇದನ್ನೂ ಓದಿ: "ಅವನು ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಅತಿ ಹೆಚ್ಚು ಕ್ಯಾಚ್ ಡ್ರಾಪ್ ಮಾಡಿದ್ದಾನೆ"


ಸಿಡ್ನಿ ಟೆಸ್ಟ್ ಪಂದ್ಯದ 5 ನೇ ದಿನದವರೆಗೆ ಭಾರತಕ್ಕೆ ಆಟಗಾರರಿಗೆ ಗಾಯವಾಗಿದ್ದು ನಿಜಕ್ಕೂ ಅಡ್ಡಿಯಾಯಿತು,407 ರ ಬೃಹತ್ ಗುರಿಯನ್ನು ಹೊಂದಿದ್ದ ಭಾರತ ತಂಡವು ಆರಂಭದಲ್ಲಿ 98 ರನ್ ಗಳಿಗೆ ಎರಡು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು,ಈ ಸಂದರ್ಭದಲ್ಲಿ ಪಂತ್ ಅವರು ಕೇವಲ 118 ಎಸೆತಗಳಲ್ಲಿ 97 ರನ್ ಗಳಿಸಿದರು.ಇವರಿಗೆ ಪೂಜಾರ ಕೂಡ ಉತ್ತಮ ಸಾಥ್ ನೀಡಿದರು.ಇನ್ನೇನು ಗೆಲುವಿನ ಹಾದಿಗೆ ಮರಳಿತು ಎನ್ನುವಷ್ಟರಲ್ಲಿ ಈ ಇಬ್ಬರು ಆಟಗಾರರು ವಿಕೆಟ್ ಒಪ್ಪಿಸಿದರು.ನಂತರ ಬಂದಂತಹ ಹನುಮಾ ವಿಹಾರಿ ಹಾಗೂ ಆರ್ ಅಶ್ವಿನ್ ಅವರು ಭದ್ರ ನೆಲೆವೂರಿದರು ಇಬ್ಬರು ಗಾಯಗೊಂಡಿದ್ದರು ಕೂಡ ಆಸಿಸ್ ಬೌಲರ್ ಗಳನ್ನು ತಮ್ಮ ರಕ್ಷಣಾತ್ಮಕ ಆಟದಿಂದ ಹೈರಾಣಾಗಿಸಿದರು.ಆ ಮೂಲಕ ತಂಡವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದ್ದರು.


ಇದನ್ನೂ ಓದಿ: Australia A vs India: ಹನುಮಾ ವಿಹಾರಿ, ಪಂತ್ ಶತಕ, ಭಾರತಕ್ಕೆ 472 ರನ್ ಮುನ್ನಡೆ


ಈಗ ರಿಶಬ್ ಪಂತ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಗೌತಮ್ ಗಂಭೀರ್ "ರಿಷಭ್ ಪಂತ್ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ನಿಸ್ಸಂಶಯವಾಗಿ, ಅವರು ಬ್ಯಾಟಿಂಗ್ ಮಾಡಬೇಕಾದ ರೀತಿಯಲ್ಲಿ ಬ್ಯಾಟಿಂಗ್ ಮಾಡಿದರು ಮತ್ತು ಜನರು ಆ ಹೊಡೆತವನ್ನು ಆಡುವ ಅಗತ್ಯವಿಲ್ಲ ಎಂದು ಹೇಳಬಹುದು,ಆದರೆ ಅವರು ಆಡುತ್ತಲೇ ಇದ್ದರು ಮತ್ತು ಭಾರತವನ್ನು ಆಟದಲ್ಲಿ ಉಳಿಸಿಕೊಂಡರು. ಅವರು ಸ್ವಲ್ಪ ಹೆಚ್ಚು ಬ್ಯಾಟಿಂಗ್ ಮಾಡಿದ್ದರೆ ಭಾರತವು ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಿತ್ತು, ಇದು ಬಹುಶಃ ಇದುವರೆಗಿನ ಅತ್ಯಂತ ಐತಿಹಾಸಿಕ ಗೆಲುವಾಗುತ್ತಿತ್ತು  "ಎಂದು ಗಂಭೀರ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.