ನವದೆಹಲಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಅಭ್ಯಾಸ ಪಂದ್ಯದ ಎರಡನೇ ದಿನದಂದು ಭಾರತ ತಂಡವು 472 ರನ್ ಗಳ ಭರ್ಜರಿ ಮುನ್ನಡೆಯನ್ನು ಸಾಧಿಸಿದೆ.
ಮೊದಲನೇ ಇನಿಂಗ್ಸ್ ನಲ್ಲಿ ಕೇವಲ 194 ರನ್ ಗಳಿಗೆ ಭಾರತ ತಂಡವು ಸರ್ವಪತನವನ್ನು ಕಂಡರೂ ಸಹಿತ ಭಾರತದ ಬೌಲರ್ ಗಳು ತಮ್ಮ ಮಾರಕ ಬೌಲಿಂಗ್ ದಾಳಿಯಿಂದಾಗಿ ಆಸ್ಟ್ರೇಲಿಯಾದ ಎ ತಂಡವನ್ನು ಕೇವಲ 108 ರನ್ ಗಳಿಗೆ ಆಲ್ ಔಟ್ ಮಾಡಿದರು.
ರಿಷಭ್ ಪಂತ್ ಊರ್ವಶಿ ರೌತೆಲಾ ನಂಬರ್ ಅನ್ನು ಬ್ಲಾಕ್ ಮಾಡಿದ್ದೇಕೆ? ಇಲ್ಲಿದೆ ಕಾರಣ
At Stumps on Day 2, India are 386-4 and have a commanding lead of 472 runs over Australia A. pic.twitter.com/ucHallgFfx
— BCCI (@BCCI) December 12, 2020
ಮೊದಲನೇ ಇನಿಂಗ್ಸ್ ನಲ್ಲಿ ಆದ ತಪ್ಪನ್ನು ಸರಿಪಡಿಸಿಕೊಂಡ ಭಾರತದ ಬ್ಯಾಟ್ಸಮನ್ ಗಳು ಉತ್ತಮ ಪ್ರದರ್ಶನವನ್ನು ನೀಡಿದರು.ಆರಂಭದಲ್ಲಿ ತಂಡದ ಮೊತ್ತ 4 ಆಗಿದ್ದಾಗ ಕೇವಲ 3 ರನ್ ಗಳಿಸಿ ಪೃಥ್ವಿ ಶಾ ಔಟಾದರು. ತದನಂತರ ಮಾಯಾಂಕ್ ಅಗರವಾಲ್ 61 ಹಾಗೂ ಶುಬ್ಮನ್ ಗಿಲ್ 65 ರನ್ ಗಳಿಸಿದರು. ಇವರ ನಂತರ ಬಂದಂತಹ ಹನುಮಾ ವಿಹಾರಿ 104 ರನ್ ಗಳಿಸಿದರು. ಇನ್ನೊಂದೆಡೆ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲನಾಗಿದ್ದ ರಿಶಬ್ ಪಂತ್ ಕೇವಲ 73 ಎಸೆತಗಳಲ್ಲಿ 103 ರನ್ ಗಳಿಸಿದರು. ಇದರಲ್ಲಿ ಭರ್ಜರಿ 9 ಬೌಂಡರಿ ಹಾಗೂ 6 ಸಿಕ್ಸರ್ ಗಳು ಒಳಗೊಂಡಿದ್ದವು.
ರಿಷಭ್ ಪಂತ್ ಸಾಧನೆ ಕುರಿತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ದೊಡ್ಡ ಹೇಳಿಕೆ
That's stumps after another big day of cricket in Sydney! #AUSAvIND
SCORECARD: https://t.co/7h4rdQDzHV pic.twitter.com/NK4whyzPWZ
— cricket.com.au (@cricketcomau) December 12, 2020
ಈಗ ಭಾರತ ತಂಡವು ಎರಡನೇ ದಿನದಾಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 386 ರನ್ ಗಳಿಸಿದೆ,ಆ ಮೂಲಕ ಈಗ 472 ರನ್ ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ,