Ajay Jadeja on pakistan team coach: ಪಾಕಿಸ್ತಾನ ಕ್ರಿಕೆಟ್ ತಂಡವು 2023ರ ವಿಶ್ವಕಪ್‌’ನಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನವನ್ನು ನೀಡಿತ್ತು. ಆ ಬಳಿಕ ಮೊದಲು ಬಾಬರ್ ಅಜಮ್ ನಾಯಕತ್ವಕ್ಕೆ ರಾಜೀನಾಮೆ ನೀಡಿದರೆ, ನಂತರ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಲ್ಲಿ ನಿರ್ವಹಣೆಯಿಂದ ಹಿಡಿದು ಕೋಚಿಂಗ್ ಸಿಬ್ಬಂದಿವರೆಗೆ ಎಲ್ಲವೂ ಬದಲಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕ್ರಿಕೆಟ್ ಆಸ್ಟ್ರೇಲಿಯಾಗಿಂತ 28 ಪಟ್ಟು ಶ್ರೀಮಂತವಾಗಿದೆ ಬಿಸಿಸಿಐ: ಹಾಗಾದ್ರೆ ಒಟ್ಟು ಆದಾಯ ಎಷ್ಟು?


ಪ್ರಸ್ತುತ, ಪಾಕಿಸ್ತಾನ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಮಧ್ಯೆ ಪಾಕಿಸ್ತಾನದ ಕೋಚ್ ಆಗುವ ಬಗ್ಗೆ ಭಾರತೀಯ ಅನುಭವಿಯೊಬ್ಬರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.


ಪಾಕಿಸ್ತಾನದ ಕೋಚ್ ಆಗುವುದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಅಜಯ್ ಜಡೇಜಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಪಾಕಿಸ್ತಾನ ಕ್ರಿಕೆಟ್‌ ಕೋಚ್ ಪಾತ್ರವನ್ನು ನಿರ್ವಹಿಸಲು ನಾನು ಸಿದ್ಧನಿದ್ದೇನೆ” ಎಂದು ಉತ್ತರಿಸಿದರು.


ಅಫ್ಘಾನ್ ತಂಡದೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡಿರುವ ಅವರು, ಪಾಕಿಸ್ತಾನ ಕೂಡ ಒಂದು ಕಾಲದಲ್ಲಿ ಅಫ್ಘಾನಿಸ್ತಾನದಂತೆಯೇ ಇತ್ತು ಎಂದು ಹೇಳಿದ್ದಾರೆ.


ಇದನ್ನೂ ಓದಿ: ಈ ವಾರ ಬಿಗ್ ಬಾಸ್ ಮನೆಯಿಂದ ಈ ‘ಘಟಾನುಘಟಿ’ ಸ್ಪರ್ಧಿ ಎಲಿಮಿನೇಟ್!


2023ರ ವಿಶ್ವಕಪ್‌’ನಲ್ಲಿ ಅಫ್ಘಾನಿಸ್ತಾನದ ಅದ್ಭುತ ಪ್ರದರ್ಶನದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಪ್ರಮುಖ ಪಾತ್ರ ವಹಿಸಿದ್ದಾರೆ. ಮೊದಲೆರಡು ಪಂದ್ಯಾವಳಿಗಳಲ್ಲಿ ಕೇವಲ ಒಂದು ಗೆಲುವು ದಾಖಲಿಸಿದ್ದ ಅಫ್ಘಾನಿಸ್ತಾನ ತಂಡವು ನಾಲ್ಕು ಗೆಲುವುಗಳೊಂದಿಗೆ 2023 ರ ವಿಶ್ವಕಪ್ ಅನ್ನು ಅಂತ್ಯಗೊಳಿಸಿತ್ತು. ಅಫ್ಘಾನಿಸ್ತಾನ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನದೊಂದಿಗೆ ಟೂರ್ನಿಯನ್ನು ತೊರೆದಿದ್ದು, ಇದರೊಂದಿಗೆ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ