ಕ್ರಿಕೆಟ್ ಆಸ್ಟ್ರೇಲಿಯಾಗಿಂತ 28 ಪಟ್ಟು ಶ್ರೀಮಂತವಾಗಿದೆ ಬಿಸಿಸಿಐ: ಹಾಗಾದ್ರೆ ಒಟ್ಟು ಆದಾಯ ಎಷ್ಟು ಗೊತ್ತಾ?

BCCI Net worth 2023: ವಿಶ್ವದಾದ್ಯಂತ ಕ್ರಿಕೆಟ್ ಮಂಡಳಿಗಳ ಆದಾಯದಲ್ಲಿ 2 ನೇ ಸ್ಥಾನದಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾ (CA) 28 ಪಟ್ಟು ಹಿಂದೆ ಇದೆ. ಈ ಮೂಲಕ ಬಿಸಿಸಿಐನ ಸಂಪತ್ತು ಎಷ್ಟಿದೆ ಎಂಬುದನ್ನು ಅಂದಾಜು ಮಾಡಬಹುದು.

Written by - Bhavishya Shetty | Last Updated : Dec 10, 2023, 03:32 PM IST
    • ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ
    • 2.25 ಬಿಲಿಯನ್ ಯುಎಸ್ ಡಾಲರ್ ಅಂದರೆ ರೂ. 18,700 ಕೋಟಿ ಹೊಂದಿದೆ.
    • ಕ್ರಿಕೆಟ್ ವೆಬ್‌’ಸೈಟ್ ಕ್ರಿಕ್ ಬಜ್ ವರದಿಯಲ್ಲಿ ಬಹಿರಂಗ
ಕ್ರಿಕೆಟ್ ಆಸ್ಟ್ರೇಲಿಯಾಗಿಂತ 28 ಪಟ್ಟು ಶ್ರೀಮಂತವಾಗಿದೆ ಬಿಸಿಸಿಐ: ಹಾಗಾದ್ರೆ ಒಟ್ಟು ಆದಾಯ ಎಷ್ಟು ಗೊತ್ತಾ? title=
Board of Control for Cricket in India

BCCI Net worth 2023: ವಿಶ್ವದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ, ಮಾಧ್ಯಮ ವರದಿಯೊಂದು ಮಂಡಳಿಯ ನಿವ್ವಳ ಮೌಲ್ಯವನ್ನು ಬಹಿರಂಗಪಡಿಸಿದ್ದು, ಪ್ರಸ್ತುತ 2.25 ಬಿಲಿಯನ್ ಯುಎಸ್ ಡಾಲರ್ ಅಂದರೆ (ರೂ. 18,700 ಕೋಟಿ) ಹೊಂದಿದೆ.

ಇದನ್ನೂ ಓದಿ: ಸಲಾರ್‌ 2ನೇ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್: ಕ್ರೇಜ್ ದುಪ್ಪಟ್ಟು ಮಾಡಲು ರೆಡಿಯಾಗುತ್ತಿದೆ ಹ

ವಿಶ್ವದಾದ್ಯಂತ ಕ್ರಿಕೆಟ್ ಮಂಡಳಿಗಳ ಆದಾಯದಲ್ಲಿ 2 ನೇ ಸ್ಥಾನದಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾ (CA) 28 ಪಟ್ಟು ಹಿಂದೆ ಇದೆ. ಈ ಮೂಲಕ ಬಿಸಿಸಿಐನ ಸಂಪತ್ತು ಎಷ್ಟಿದೆ ಎಂಬುದನ್ನು ಅಂದಾಜು ಮಾಡಬಹುದು.

ಕ್ರಿಕೆಟ್ ಆಸ್ಟ್ರೇಲಿಯಾದ ನಿವ್ವಳ ಮೌಲ್ಯ 79 ಮಿಲಿಯನ್ US ಡಾಲರ್ (658 ಕೋಟಿ ರೂಪಾಯಿ). ಇದರ ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಹೆಸರು 3 ನೇ ಸ್ಥಾನದಲ್ಲಿದೆ,. ಅವರ ಆದಾಯವು 59 ಮಿಲಿಯನ್ ಡಾಲರ್ ಇದೆ. ಕ್ರಿಕೆಟ್ ಮಂಡಳಿಯ ನಿವ್ವಳ ಮೌಲ್ಯದ ಈ ಅಂಕಿಅಂಶಗಳನ್ನು ಕ್ರಿಕೆಟ್ ವೆಬ್‌’ಸೈಟ್ ಕ್ರಿಕ್ ಬಜ್ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

BCCI ಗಳ ಗಳಿಕೆಗೆ ದೊಡ್ಡ ಕೊಡುಗೆ ಅಂತರಾಷ್ಟ್ರೀಯ ಅಥವಾ ದೇಶೀಯ ಕ್ರಿಕೆಟ್‌’ನ ಸ್ವರೂಪವಲ್ಲ. ಬದಲಾಗಿ 2008 ರಲ್ಲಿ ಪ್ರಾರಂಭವಾದ T20 ಇಂಡಿಯನ್ ಪ್ರೀಮಿಯರ್ ಲೀಗ್ (IPL). ಈ ಲೀಗ್ ದೊಡ್ಡ ಆದಾಯವನ್ನು ತರುತ್ತದೆ. ಕ್ರಿಕೆಟ್ ಆಸ್ಟ್ರೇಲಿಯಾಗೂ ಕೂಡ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಹೆಚ್ಚು ಆದಾಯ ತಂದುಕೊಡುತ್ತದೆ.

ಇದನ್ನೂ ಓದಿ: Daily GK Quiz: ಮೊದಲ ಆಂಗ್ಲೋ-ಮೈಸೂರು ಯುದ್ಧ ಯಾವಾಗ ನಡೆಯಿತು?

ಕ್ರಿಕೆಟ್ ಸೌತ್ ಆಫ್ರಿಕಾ ಕೂಡ ಬಿಸಿಸಿಐನ ತಂತ್ರಗಾರಿಕೆಯಲ್ಲಿ ಮುನ್ನಡೆಯುತ್ತಿದೆ. ಇದು ಇತ್ತೀಚೆಗೆ SA20 ಹೆಸರಿನ ತನ್ನ T20 ಲೀಗ್ ಅನ್ನು ಪ್ರಾರಂಭಿಸಿತು. ಇದರಲ್ಲಿ ಅನೇಕ ಭಾರತೀಯ ಫ್ರಾಂಚೈಸಿಗಳನ್ನು ಸೇರಿಸಲಾಯಿತು. ಆದರೆ ಪ್ರಸ್ತುತ ಈ ಮಂಡಳಿಯ ನಿವ್ವಳ ಮೌಲ್ಯವು ಕೇವಲ 47 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಇದು ಬಿಸಿಸಿಐನ ನಿವ್ವಳ ಮೌಲ್ಯದ ಕೇವಲ 2 ಪ್ರತಿಶತವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News