Team India Cricketer Car Accident: ಭಾರತದ ಹಿರಿಯ ಕ್ರಿಕೆಟಿಗರೊಬ್ಬರ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಭಾರತದ ಈ ಡ್ಯಾಶಿಂಗ್ ಕ್ರಿಕೆಟಿಗನ ಪ್ರಾಣಕ್ಕೆ ಅಪಾಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದ್ದ ಭಾರತದ ಸ್ವಿಂಗ್ ಬೌಲರ್ ಪ್ರವೀಣ್ ಕುಮಾರ್ ಅವರ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಅಪಘಾತದ ವೇಳೆ ವೇಗದ ಬೌಲರ್ ಪ್ರವೀಣ್ ಕುಮಾರ್ ಮತ್ತು ಅವರ ಪುತ್ರ ಕಾರಿನೊಳಗೆ ಇದ್ದರು ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಶ್ರಾವಣದಲ್ಲಿ ಈ ಹಣ್ಣನ್ನು ಶಿವನಿಗೆ ಅರ್ಪಿಸಿದರೆ ಅದೃಷ್ಟ ಬೆಳಗುವುದು-ಸಂಪತ್ತು ತಿಜೋರಿಯಲ್ಲಿ ತುಂಬಿ ತುಳುಕುವುದು!


ಘಟನೆಯ ನಂತರ ಸ್ಥಳದಲ್ಲೇ ಇದ್ದ ಪ್ರತ್ಯಕ್ಷದರ್ಶಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಂದೆಡೆ ಕ್ಯಾಂಟರ್ ಚಾಲಕನನ್ನು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


36 ವರ್ಷದ ಪ್ರವೀಣ್ ಕುಮಾರ್ ತಮ್ಮ ಸ್ವಿಂಗ್‌ ಬೌಲಿಂಗ್’ನಿಂದ ಟೀಂ ಇಂಡಿಯಾದಲ್ಲಿ ಭಾರೀ ಹೆಸರು ಮಾಡಿದ್ದರು. ಟೆಸ್ಟ್, ಏಕದಿನ ಮತ್ತು T20 ಅಂತರಾಷ್ಟ್ರೀಯ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತಕ್ಕಾಗಿ ಆಡಿದ್ದಾರೆ. ಪ್ರವೀಣ್ ಕುಮಾರ್ ಭಾರತದ ಪರ 6 ಟೆಸ್ಟ್ ಪಂದ್ಯಗಳಲ್ಲಿ 27 ವಿಕೆಟ್, 68 ODIಗಳಲ್ಲಿ 77 ವಿಕೆಟ್ ಮತ್ತು 10 T20 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಕೇವಲ 26 ನೇ ವಯಸ್ಸಿನಲ್ಲಿ, ಈ ಡ್ಯಾಶಿಂಗ್ ಕ್ರಿಕೆಟಿಗನ ಅಂತರರಾಷ್ಟ್ರೀಯ ವೃತ್ತಿಜೀವನವು ಕೊನೆಗೊಂಡಿತ್ತು.


ಮಾಹಿತಿ ಪ್ರಕಾರ ಪ್ರವೀಣ್ ಕುಮಾರ್ ಮತ್ತು ಅವರ ಪುತ್ರ ಸುರಕ್ಷಿತವಾಗಿದ್ದಾರೆ. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಬಾಗ್‌ಪತ್ ರಸ್ತೆಯ ಮುಲ್ತಾನ್ ನಗರದ ನಿವಾಸಿಯಾಗಿದ್ದ ಪ್ರವೀಣ್ ಕುಮಾರ್ ತಮ್ಮ ಡಿಫೆಂಡರ್ ವಾಹನದಲ್ಲಿ ಪಾಂಡವ್ ನಗರದಿಂದ ಬರುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: 5 ತಿಂಗಳ ಬಳಿಕ Team Indiaಗೆ ಈ ಆಲ್’ರೌಂಡರ್ ಎಂಟ್ರಿ


ಮಾಹಿತಿ ಪಡೆದ ಕೂಡಲೇ ಸಿವಿಲ್ ಲೈನ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕಳುಹಿಸಲಾಗಿದೆ ಎಂದು ನಗರ ಎಸ್ಪಿ ಪಿಯೂಷ್ ಕುಮಾರ್ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.