Yusuf Pathan and Kirti Azad: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆಗೆ ರಾಜ್ಯದ 42 ಸ್ಥಾನಗಳಿಗೆ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಕಣಕ್ಕಿಳಿಸುವ ಮೂಲಕ ಮಮತಾ ಬ್ಯಾನರ್ಜಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಬಹರಂಪುರ ಕ್ಷೇತ್ರದಿಂದ ಯೂಸುಫ್ ಸ್ಪರ್ಧಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದು ದೇವೇಗೌಡರು ಹೇಳಿದ್ದು ಮರೆತುಹೋಯ್ತಾ!? ಸಿಎಂ


ಮತ್ತೊಂದೆಡೆ, ಟಿಎಂಸಿ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರನ್ನು ಬರ್ಧಮಾನ್ ದುರ್ಗಾಪುರ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ. ಕೀರ್ತಿ ಆಜಾದ್ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಕೀರ್ತಿ ಆಜಾದ್ 2014ರಲ್ಲಿ ಬಿಹಾರದ ದರ್ಭಾಂಗಾದಿಂದ ಬಿಜೆಪಿ ಟಿಕೆಟ್‌’ನಲ್ಲಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಗೆದ್ದಿದ್ದರೂ ಸಹ. ನಂತರ 2018ರಲ್ಲಿ ಕಾಂಗ್ರೆಸ್‌’ಗೆ ಸೇರ್ಪಡೆಗೊಂಡು, ಅಲ್ಲಿಂದ ಮತ್ತೆ 2021ರಲ್ಲಿ ಟಿಎಂಸಿಗೆ ಬಂದರು. ಇದೀಗ ಮಮತಾ ಬ್ಯಾನರ್ಜಿ ಅವರಿಗೆ ಟಿಕೆಟ್ ನೀಡಿದ್ದಾರೆ.


ಯೂಸುಫ್ ಪಠಾಣ್ ಎರಡು ಬಾರಿ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದಾರೆ. 2007ರಲ್ಲಿ ಪಾಕಿಸ್ತಾನ ವಿರುದ್ಧ ಫೈನಲ್‌’ನಲ್ಲಿ ಗೆದ್ದು ಟಿ20 ಚಾಂಪಿಯನ್ ಆದ ತಂಡದಲ್ಲಿದ್ದರು. ಇದಾದ ಬಳಿಕ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರೂ ಆಗಿದ್ದರು.


ಕೋಲ್ಕತ್ತಾದೊಂದಿಗೆ ವಿಶೇಷ ಸಂಪರ್ಕ:


ಕೋಲ್ಕತ್ತಾದೊಂದಿಗೆ ಯೂಸುಫ್ ಪಠಾಣ್ ಅವರ ಸಂಪರ್ಕವು ತುಂಬಾ ವಿಶೇಷವಾಗಿದೆ. ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ದೀರ್ಘಕಾಲ ಆಡಿದ್ದಾರೆ. ತಂಡವನ್ನು ಎರಡು ಬಾರಿ (2012 ಮತ್ತು 2014) ಚಾಂಪಿಯನ್ ಮಾಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸಿದರು.


ಇದನ್ನೂ ಓದಿ:  ಬಿಸಿಸಿಐ ನಿರ್ಧಾರ ಮೆಚ್ಚಿದ ರೋಹಿತ್ ಶರ್ಮಾ: 'ಪ್ರೋತ್ಸಾಹ ಯೋಜನೆ' ಜಾರಿ ಬಗ್ಗೆ ಏನಂದ್ರು ಕ್ಯಾಪ್ಟನ್


 ಯೂಸುಫ್ ಪಠಾಣ್ ವೃತ್ತಿಜೀವನ: 


ಯೂಸುಫ್ ಪಠಾಣ್ 2007 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದರು. ಅದು ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಟಿ20 ವಿಶ್ವಕಪ್‌’ನ ಅಂತಿಮ ಪಂದ್ಯವಾಗಿತ್ತು. ಯೂಸುಫ್ ಭಾರತದ ಪರ 57 ಏಕದಿನ ಪಂದ್ಯಗಳಲ್ಲಿ 810 ರನ್ ಮತ್ತು 22 ಟಿ20 ಪಂದ್ಯಗಳಲ್ಲಿ 236 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 146.58 ಆಗಿತ್ತು. ಪಠಾಣ್ ಐಪಿಎಲ್‌’ನಲ್ಲಿ 174 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 142.97 ಸ್ಟ್ರೈಕ್ ರೇಟ್‌ನಲ್ಲಿ 3204 ರನ್ ಗಳಿಸಿದರು. ಕೋಲ್ಕತ್ತಾ ಅಲ್ಲದೆ, ಅವರು ಐಪಿಎಲ್‌’ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌’ಗಾಗಿಯೂ ಯೂಸುಫ್ ಆಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ