ಬಿಸಿಸಿಐ ನಿರ್ಧಾರ ಮೆಚ್ಚಿದ ರೋಹಿತ್ ಶರ್ಮಾ: 'ಪ್ರೋತ್ಸಾಹ ಯೋಜನೆ' ಜಾರಿ ಬಗ್ಗೆ ಏನಂದ್ರು ಟೀಂ ಇಂಡಿಯಾ ಕ್ಯಾಪ್ಟನ್?

BCCI Test Cricket Incentive Plan: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ದಿನ ಯೋಜನೆ ಪ್ರಕಟಿಸಿದ್ದಾರೆ. ಪ್ರತಿ ಋತುವಿನಲ್ಲಿ ಕನಿಷ್ಠ ಏಳು ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರರಿಗೆ ಪಂದ್ಯ ಶುಲ್ಕವನ್ನು ಪ್ರಸ್ತುತ 15 ಲಕ್ಷದಿಂದ 45 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.

Written by - Bhavishya Shetty | Last Updated : Mar 10, 2024, 03:00 PM IST
    • ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ದಿನ ಯೋಜನೆ ಪ್ರಕಟಿಸಿದ್ದಾರೆ
    • ಬಿಸಿಸಿಐಯ ನಿರ್ಧಾರದಿಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಂತಸ
    • ಟೆಸ್ಟ್ ಕ್ರಿಕೆಟ್‌’ಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ
ಬಿಸಿಸಿಐ ನಿರ್ಧಾರ ಮೆಚ್ಚಿದ ರೋಹಿತ್ ಶರ್ಮಾ: 'ಪ್ರೋತ್ಸಾಹ ಯೋಜನೆ' ಜಾರಿ ಬಗ್ಗೆ ಏನಂದ್ರು ಟೀಂ ಇಂಡಿಯಾ ಕ್ಯಾಪ್ಟನ್? title=
Rohit Sharma

BCCI Test Cricket Incentive Plan: ಟೆಸ್ಟ್ ಕ್ರಿಕೆಟ್‌’ಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 75 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಮಾಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ರೂ 45 ಲಕ್ಷ ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ.

ಇದನ್ನೂ ಓದಿ: Rohit Sharma: ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ: ಏನಂದ್ರು ಕ್ಯಾಪ್ಟನ್?

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ದಿನ ಯೋಜನೆ ಪ್ರಕಟಿಸಿದ್ದಾರೆ. ಪ್ರತಿ ಋತುವಿನಲ್ಲಿ ಕನಿಷ್ಠ ಏಳು ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರರಿಗೆ ಪಂದ್ಯ ಶುಲ್ಕವನ್ನು ಪ್ರಸ್ತುತ 15 ಲಕ್ಷದಿಂದ 45 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಅಂದರೆ ಒಂದು ಋತುವಿನಲ್ಲಿ ಸುಮಾರು 10 ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸುವ ಟೆಸ್ಟ್ ಆಟಗಾರನಿಗೆ 4.50 ಕೋಟಿ ರೂ. ಸಿಗಲಿದೆ. ಈ ಮೊತ್ತವು ಆಟಗಾರನು ವಾರ್ಷಿಕ ಕೇಂದ್ರ ಒಪ್ಪಂದದ ಅಡಿಯಲ್ಲಿ ಪಡೆಯುವ 'ರಿಟೈನರ್ ಶುಲ್ಕ'ಕ್ಕೆ ಹೆಚ್ಚುವರಿಯಾಗಿರುತ್ತದೆ.

ಅಂದಹಾಗೆ ಬಿಸಿಸಿಐಯ ಈ ಐತಿಹಾಸಿಕ ನಿರ್ಧಾರದಿಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಂತಸಗೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದು, “ಟೆಸ್ಟ್ ಕ್ರಿಕೆಟ್ ನಿಜವಾದ ಸ್ವರೂಪವಾಗಿತ್ತು. ಇನ್ಮುಂದೆಯೂ ಜೀವಂತವಾಗಿರಲಿದೆ... ಬಿಸಿಸಿಐ ಮತ್ತು ಜೈ ಶಾ ಟೆಸ್ಟ್ ಕ್ರಿಕೆಟ್‌’ಗೆ ಆದ್ಯತೆ ನೀಡುತ್ತಿರುವ ರೀತಿಯನ್ನು ನೋಡುವುದು ಖುಷಿಯ ಸಂಗತಿ” ಎಂದಿದ್ದಾರೆ.

ಇದನ್ನೂ ಓದಿ: ಸರಣಿ ಗೆಲುವಿನ ಬೆನ್ನಲ್ಲೇ ಟೆಸ್ಟ್ ಆಟಗಾರರಿಗೆ ಬಿಸಿಸಿಐನಿಂದ ಸಿಹಿಸುದ್ದಿ: ಸಂಬಳದ ಹೊರತಾಗಿ ಸಿಗಲಿದೆ ವಿಶೇಷ ವೇತನ

“2022-23 ಮತ್ತು 2023-24 ಸೀಸನ್‌’ಗಳಿಗೆ ಮಂಡಳಿಯು ಸುಮಾರು 45 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ. ಈ ಯೋಜನೆಯಿಂದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಪ್ಪಂದಗಳಿಗಿಂತ ಹೆಚ್ಚು ಗಳಿಸುತ್ತಾರೆ. ಇದು ಐಪಿಎಲ್ ಮುಖ್ಯ, ಆದರೆ ದ್ವಿಪಕ್ಷೀಯ ಕ್ರಿಕೆಟ್ ಕೂಡ ಬಹಳ ಮುಖ್ಯ ಎಂಬುದನ್ನು ತೋರಿಸುತ್ತದೆ. ನಮ್ಮ ಆಟಗಾರರಿಗೆ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಒದಗಿಸುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಹಿರಿಯ ಪುರುಷರ ತಂಡಕ್ಕೆ ‘ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹಕ ಯೋಜನೆ’ಯನ್ನು ಪ್ರಾರಂಭಿಸಲು ನಾನು ಸಂತೋಷಪಡುತ್ತೇನೆ” ಎಂದು ಕಳೆದ ದಿನ ಜೈ ಶಾ ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News