`ಇನ್ಮುಂದೆ ಪಾಕಿಸ್ತಾನದ ಹಿಂದೂಗಳು ಮುಕ್ತವಾಗಿ ಉಸಿರಾಡಬಹುದು`: CAAಗೆ ಪಾಕ್ ಸ್ಟಾರ್ ಕ್ರಿಕೆಟಿಗನ ಬೆಂಬಲ
Danish Kaneria supports CAA: “ಇನ್ಮುಂದೆ ಪಾಕಿಸ್ತಾನಿ ಹಿಂದೂಗಳು ಮುಕ್ತವಾಗಿ ಉಸಿರಾಡಬಹುದು” ಎಂದು ಕನೇರಿಯಾ ಎಕ್ಸ್ ಟ್ವೀಟ್ ಮಾಡಿದ್ದು, ಸಿಎಎ ಜಾರಿಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Ex-Pakistan cricketer Danish Kaneria supports CAA: ಪಾಕಿಸ್ತಾನದ ಮಾಜಿ ಸ್ಟಾರ್ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನವನ್ನು ಬೆಂಬಲಿಸಿದ್ದಾರೆ. 2015 ರ ಮೊದಲು ಭಾರತಕ್ಕೆ ತೆರಳಿದ ನಿರಾಶ್ರಿತರಿಗೆ ಸಂಬಂಧಿಸಿದಂತೆ, ಕನೇರಿಯಾ CAA ನಿಬಂಧನೆಗಳು ಎಲ್ಲಾ ಪಾಕಿಸ್ತಾನಿ ಹಿಂದೂಗಳಿಗೆ ಒಳ್ಳೆಯದು ಎಂದು ಶ್ಲಾಘಿಸಿದ್ದಾರೆ. “ಇನ್ಮುಂದೆ ಪಾಕಿಸ್ತಾನಿ ಹಿಂದೂಗಳು ಮುಕ್ತವಾಗಿ ಉಸಿರಾಡಬಹುದು” ಎಂದು ಕನೇರಿಯಾ ಎಕ್ಸ್ ಟ್ವೀಟ್ ಮಾಡಿದ್ದು, ಸಿಎಎ ಜಾರಿಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಫೆಬ್ರವರಿ ತಿಂಗಳಲ್ಲಿ ಮಿಂಚಿನ ಪ್ರದರ್ಶನ: ಐಸಿಸಿ ಪ್ರಶಸ್ತಿ ಗೆದ್ದ ಯಶಸ್ವಿ ಜೈಸ್ವಾಲ್
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಲೆಗ್ ಸ್ಪಿನ್ನರ್ ಆಗಿ ಆಡಿದ್ದ ಡ್ಯಾನಿಶ್ ಕನೇರಿಯಾ, ಪಾಕ್ ಪರ ಆಡಿದ ಎರಡನೇ ಹಿಂದೂ ಎಂದು ಸಹ ಕರೆಯಲ್ಪಡುತ್ತಾರೆ. ಇತ್ತೀಚೆಗೆ ಪಾಕಿಸ್ತಾನ ತಂಡದ ಇತರ ಕ್ರಿಕೆಟಿಗರು ತಮ್ಮ ವಿರುದ್ಧ ತೋರಿದ ಮತೀಯವಾದವನ್ನು ಬಗ್ಗೆ ಕೂಡ ಅವರು ಮಾತನಾಡಿದ್ದರು. “ತಾನೊಬ್ಬ ಹಿಂದೂ. ಹೀಗಾಗಿ ಅಫ್ರಿದಿಯಂತಹ ಆಟಗಾರರು ನನ್ನ ವಿರುದ್ಧ ತಾರತಮ್ಯ ಮಾಡುತ್ತಿದ್ದರು” ಎಂದು ಹೇಳಿದ್ದಾರೆ. 2000-2010ರ ಅವಧಿಯಲ್ಲಿ ಪಾಕಿಸ್ತಾನ ಪರ ಕ್ರಿಕೆಟ್ ಆಡಿದ್ದ ಕನೇರಿಯಾ 61 ಟೆಸ್ಟ್ ಪಂದ್ಯಗಳಲ್ಲಿ 261 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್’ಗೆ ಆಘಾತ… IPLಗೆ ಸೂರ್ಯಕುಮಾರ್ ಅಲಭ್ಯ! ಮಿಸ್ಟರ್ 360 ಹೊರಗುಳಿಯಲು ಕಾರಣ ಇದುವೇ!
ಸೋಮವಾರ ಕೇಂದ್ರ ಸರ್ಕಾರ ಸಿಎಎ ಜಾರಿ ಘೋಷಣೆ ಮಾಡಿದೆ. ಈ ಕಾಯ್ದೆಯ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿದ್ದು, ಧಾರ್ಮಿಕ ತಾರತಮ್ಯವನ್ನು ಎದುರಿಸಿ ನಿರಾಶ್ರಿತರಾಗಿ ಭಾರತಕ್ಕೆ ಬಂದವರಿಗೆ ಈ ದೇಶದ ಪೌರತ್ವ ನೀಡಲಾಗುವುದು. ಮುಸ್ಲಿಮೇತರ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ಪೌರತ್ವ ಸಿಗಲಿದೆ. ಡಿಸೆಂಬರ್ 21, 2014 ರ ಮೊದಲು ದೇಶಕ್ಕೆ ಬಂದವರು ಮಾತ್ರ ಪೌರತ್ವಕ್ಕೆ ಅರ್ಹರಾಗಿರುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ