Dattajirao Passed away: ಟೀಂ ಇಂಡಿಯಾ ಪರ 11 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವಿ ಕ್ರಿಕೆಟಿಗ,  1959 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದ ದತ್ತಾಜಿರಾವ್ ಗಾಯಕ್ವಾಡ್ ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರೂ ಆಗಿದ್ದ ದತ್ತಾಜಿರಾವ್ ಅವರ ನಾಯಕತ್ವದಲ್ಲಿ, ಬರೋಡಾ ತಂಡ 1957-58ರಲ್ಲಿ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇನ್ನು ದತ್ತಾಜಿ ನಿಧನಕ್ಕೆ ಬಿಸಿಸಿಐ ಸಂತಾಪ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 500 ವರ್ಷಗಳ ಬಳಿಕ ಈ ಜನ್ಮರಾಶಿಗೆ ಶುಭ ರಾಜಯೋಗದ ವೈಭವ: ಇವರ ಬಳಿಯೂ ಸುಳಿಯದು ಸಮಸ್ಯೆ- ಇನ್ಮುಂದೆ ಕಾಲಿಟ್ಟಲ್ಲೆಲ್ಲಾ ಗೆಲುವಿದ್ದೇ ಆಟ!


ದತ್ತಾಜಿರಾವ್ ಗಾಯಕ್ವಾಡ್ ಅವರ ನಿಧನಕ್ಕೆ ಬಿಸಿಸಿಐ ಶ್ರದ್ಧಾಂಜಲಿ ಸಲ್ಲಿಸುತ್ತದೆ” ಎಂದು ಮಂಡಳಿ ತನ್ನ ಪೋಸ್ಟ್‌’ನಲ್ಲಿ ಬರೆದುಕೊಂಡಿದೆ.


ಅಂದಹಾಗೆ ಇವರ ಮಗ ಅಂಶುಮಾನ್ ಗಾಯಕ್ವಾಡ್ ಕೂಡ ಟೀಂ ಇಂಡಿಯಾ ಪರ ಕ್ರಿಕೆಟ್ ಆಡಿದ್ದರು. ಅವರು 1952 ರಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇನ್ನು ದತ್ತಾಜಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 1961 ರಲ್ಲಿ ಆಡಿದ್ದರು.


ಇದನ್ನೂ ಓದಿ: ಜೆಬಿಎಫ್ ಕಂಪನಿ ಬಿಕ್ಕಟ್ಟು: 34 ಮಂದಿಗೆ ಉದ್ಯೋಗ ಕಲ್ಪಿಸಲು ಗೇಲ್ ಜತೆ ಮಾತುಕತೆ- ಸಚಿವ ಎಂಬಿ ಪಾಟೀಲ


ದತ್ತಾಜಿರಾವ್ ವೃತ್ತಿ ಜೀವನ ಹೇಗಿತ್ತು?


ದತ್ತಾಜಿರಾವ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿದ್ದು, 350 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಒಂದು ಅರ್ಧಶತಕ ಸಿಡಿಸಿದ್ದು, 52 ಅವರ ಅತ್ಯುತ್ತಮ ಸ್ಕೋರ್ ಆಗಿತ್ತು. 1959 ರ ಇಂಗ್ಲೆಂಡ್ ವಿರುದ್ಧದ ಪ್ರವಾಸದಲ್ಲಿ ಭಾರತ ತಂಡದ ನಾಯಕರಾಗಿದ್ದರು. ದತ್ತಾಜಿರಾವ್ 110 ಪ್ರಥಮ ದರ್ಜೆ ಪಂದ್ಯಗಳಲ್ಲಿ 5788 ರನ್ ಗಳಿಸಿದ್ದಾರೆ. ಅದರಲ್ಲಿ 17 ಶತಕಗಳು ಮತ್ತು 23 ಅರ್ಧ ಶತಕಗಳನ್ನು ಹೊಂದಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 249 ರನ್. ಜೊತೆಗೆ ಪ್ರಥಮ ದರ್ಜೆಯಲ್ಲಿ 25 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.