cricketer who is never dismisses even once: ಟೆಸ್ಟ್ ಕ್ರಿಕೆಟ್... ಇದನ್ನು ಅನೇಕರು ಕ್ರಿಕೆಟ್‌ʼನ ಅತ್ಯುತ್ತಮ ಸ್ವರೂಪವೆಂದು ಪರಿಗಣಿಸುತ್ತಾರೆ. ಐದು ದಿನಗಳ ಅವಧಿಯಲ್ಲಿ ನಡೆಯುವ ಈ ಕ್ರಿಕೆಟ್‌ ಟೂರ್ನಿ, ಓರ್ವ ಆಟಗಾರನ ಕೌಶಲ್ಯ ಮತ್ತು ಮನೋಭಾವವನ್ನು ಪರೀಕ್ಷಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ನಾಲ್ವರು ಕ್ರಿಕೆಟಿಗರ ಟೆಸ್ಟ್‌ ಕೆರಿಯರ್‌ ಅಂತ್ಯ: ನಿವೃತ್ತಿ ಹಾದಿ ತೋರಿಸಿದ ಬಿಸಿಸಿಐ!


ಇನ್ನು ಟೆಸ್ಟ್‌ ಕ್ರಿಕೆಟ್‌ʼನಲ್ಲಿ ಭಾರತದ ಸಾಧನೆ ಗಣ್ಯವಾಗಿಯೇ ಇದೆ, ಇನ್ನು ನಾವಿಂದು ಈ ವರದಿಯಲ್ಲಿ ಟೆಸ್ಟ್‌ ಕ್ರಿಕೆಟ್‌ʼನಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್‌ ಆಗದ ನಾಲ್ವರು ಕ್ರಿಕೆಟಿಗರ ಬಗ್ಗೆ ಮಾತನಾಡಲಿದ್ದೇವೆ. ಈ ನಾಲ್ವರಲ್ಲಿ ಒಬ್ಬರು ಭಾರತದ ಬ್ಯಾಟರ್.


ಜಾನ್ ಚೈಲ್ಡ್ಸ್- ಇಂಗ್ಲೆಂಡ್: 4 ಇನ್ನಿಂಗ್ಸ್, 2 ರನ್
ಗ್ಲೌಸೆಸ್ಟರ್‌ʼಶೈರ್ ಮತ್ತು ಎಸೆಕ್ಸ್‌ʼಗಾಗಿ ಕೌಂಟಿ ಕ್ರಿಕೆಟ್ ಆಡಿದ್ದ ಜಾನ್ ಚೈಲ್ಡ್ಸ್, 36 ವರ್ಷ ಮತ್ತು 320 ದಿನಗಳ ವಯಸ್ಸಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್‌ʼಗೆ ಪಾದಾರ್ಪಣೆ ಮಾಡಿದರು. ಅವರು ಆಡಿದ್ದು ಎರಡೇ ಪಂದ್ಯ. ಇದರಲ್ಲಿ 86 ಓವರ್‌ʼಗಳಿಂದ ಕೇವಲ ಮೂರು ವಿಕೆಟ್‌ʼಗಳನ್ನು ಪಡೆದಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಬೌಲರ್‌ʼಗಳ ಪ್ರಾಬಲ್ಯ ಹೊಂದಿರುವ ಸರಣಿಯಲ್ಲಿ, ಚೈಲ್ಡ್ಸ್ ಎಲ್ಲಾ ನಾಲ್ಕು ಸಂದರ್ಭಗಳಲ್ಲಿಯೂ ಔಟ್ ಆಗದೆ ಉಳಿಯುವಲ್ಲಿ ಯಶಸ್ವಿಯಾಗಿದ್ದರು.

ಟಿನು ಯೋಹನ್ನನ್
ಟಿನು ಯೋಹನ್ನನ್ ಕೇರಳದ ಮೊದಲ ಕ್ರಿಕೆಟಿಗ ಆಗಿದ್ದು, ಟೆಸ್ಟ್ ಮತ್ತು ODIಗಳಲ್ಲಿ ಭಾರತದ ಪರ ಆಡಿದ್ದಾರೆ. ಯೋಹಾನನ್ ಡಿಸೆಂಬರ್ 2001 ರಲ್ಲಿ ಇಂಗ್ಲೆಂಡ್ ವಿರುದ್ಧ ಸ್ಮರಣೀಯ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಆರಂಭಿಕರನ್ನು ಔಟ್ ಮಾಡಿದ್ದಲ್ಲದೆ, ಒಟ್ಟು 4 ವಿಕೆಟ್ ಪಡೆದಿದ್ದರು.‌


ಅಫಾಕ್ ಹುಸೇನ್
ಬಲಗೈ ಆಫ್ ಬ್ರೇಕ್ ಬೌಲರ್ ಮತ್ತು ಉಪಯುಕ್ತ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್‌ಮನ್ ಅಫಾಕ್ ಹುಸೇನ್ 67 ಪಂದ್ಯಗಳಲ್ಲಿ 1448 ರನ್ ಮತ್ತು 214 ವಿಕೆಟ್‌ʼಗಳೊಂದಿಗೆ ಉತ್ತಮ ಪ್ರಥಮ ದರ್ಜೆ ದಾಖಲೆಯನ್ನು ಹೊಂದಿದ್ದಾರೆ. ಉತ್ತಮ ಪ್ರಥಮ ದರ್ಜೆಯ ದಾಖಲೆಯ ಹೊರತಾಗಿಯೂ, ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನದ ಪರ ಕೇವಲ ಎರಡು ಟೆಸ್ಟ್‌ʼಗಳನ್ನು ಆಡಿದ್ದರು.


ಇದನ್ನೂ ಓದಿ: ಗರ್ಲ್ಸ್‌ ಮದುವೆ ಪ್ಲ್ಯಾನ್‌ ಮಾಡಿದ್ದೀರಾ..? ಗ್ಲೋಯಿಂಗ್‌ ಸ್ಕಿನ್‌ಗಾಗಿ ಈ ಜ್ಯೂಸ್‌ ಕುಡಿಯಿರಿ..


ಐಜಾಜ್ ಚೀಮಾ
ಐಜಾಜ್ ಚೀಮಾ ಜಿಂಬಾಬ್ವೆ ವಿರುದ್ಧ 31 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ ಮಾಡಿದರು.  ಕ್ವೈಡ್-ಎ-ಅಜಮ್ ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಇನ್ನು ಈ ಕ್ರಿಕೆಟಿಗ ಕೂಡ ಟೆಸ್ಟ್‌ ಕ್ರಿಕೆಟ್ʼನಲ್ಲಿ ಒಂದೇ ಒಂದು ಬಾರಿಯೂ ಔಟ್‌ ಆಗಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ