Cricketer who married sports anchor: ಕ್ರಿಕೆಟಿಗರು ಸಾಮಾನ್ಯವಾಗಿ ತುಂಬಾ ಕಷ್ಟಕರ ಮತ್ತು ಒತ್ತಡದ ಜೀವನವನ್ನು ನಡೆಸುತ್ತಾರೆ. ಅವರ ಜೀವನಶೈಲಿ ಇತರರಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಅವರ ಪ್ರೇಮ ಜೀವನವನ್ನು ಗಮನಿಸಿದರೆ, ಅನೇಕ ಪ್ರಸಿದ್ಧ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರನ್ನೇ ಮದುವೆಯಾಗಿದ್ದಾರೆ. ಉದಾಹರಣೆಗೆ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಕೆಎಲ್ ರಾಹುಲ್, ಹೀಗೆ ಅನೇಕರು...


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಮನೆ ಸುತ್ತಮುತ್ತ ಹಾವುಗಳು ಬರ್ತಿದ್ಯಾ? ತಲೆಕೆಡಿಸಿಕೊಳ್ಳಬೇಡಿ... ಈ ಗಿಡ ನೆಟ್ಟರೆ ಸಾಕು


ಆದರೆ ಈ ಲೇಖನದಲ್ಲಿ ನಾವು ಕ್ರೀಡಾ ಆಂಕರ್‌ʼಗಳನ್ನು ಮದುವೆಯಾದ ಕ್ರಿಕೆಟಿಗರನ್ನು ಕುರಿತು ಮಾಹಿತಿ ನೀಡಲಿದ್‌ದೇವೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ.


ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಟಿವಿ ನಿರೂಪಕಿ ಲೀ ಫರ್ಲಾಂಗ್ ಅವರನ್ನು ವಿವಾಹವಾಗಿದ್ದಾರೆ. 2004 ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಈ ಜೋಡಿ ಮೇ 29, 2010 ರಂದು ಮದುವೆಯಾದರು.


ಭಾರತದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅವರು ಭಾರತದ ಪ್ರಮುಖ ಕ್ರೀಡಾ ನಿರೂಪಕಿಯರಲ್ಲಿ ಒಬ್ಬರಾದ ಮಾಯಾಂತಿ ಲ್ಯಾಂಗರ್ ಅವರನ್ನು ವಿವಾಹವಾಗಿದ್ದಾರೆ. ಸೆಪ್ಟೆಂಬರ್ 2012 ರಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿತ್ತು.


ಆಸ್ಟ್ರೇಲಿಯಾದ ಆಟಗಾರ ಬೆನ್ ಕಟಿಂಗ್ ಟಿವಿ ನಿರೂಪಕಿ ಎರಿನ್ ಹಾಲೆಂಡ್ ಅವರನ್ನು ವಿವಾಹವಾದರು. ಸೆಪ್ಟೆಂಬರ್ 2019 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಅವರು, ಫೆಬ್ರವರಿ 13, 2021 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಟಿವಿ ನಿರೂಪಕಿ ಲಾರಾ ಮೆಕ್‌ಗೋಲ್ಡ್ರಿಕ್ ಅವರನ್ನು ವಿವಾಹವಾಗಿದ್ದಾರೆ. ಲಾರಾ ಪತ್ರಕರ್ತೆ ಮತ್ತು ಟಿವಿ ನಿರೂಪಕಿ.


ಇದನ್ನೂ ಓದಿ: ರಾತ್ರಿಯಾದ್ರೆ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ಟುತ್ತಾಳೆ; ವಿಡಿಯೋ ನೋಡಿ


ಟೀಂ ಇಂಡಿಯಾದ ಮತ್ತೊಂದು ಜೋಡಿ ಜಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮಾರ್ಚ್ 2021 ರಲ್ಲಿ ಭಾರತೀಯ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ