ನವದೆಹಲಿ: ಎಂ.ಎಸ್. ಧೋನಿ ಕ್ರಿಕೆಟ್ ಭವಿಷ್ಯದ ವಿಚಾರವಾಗಿ ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿದ್ದಾರೆ, ಅಗತ್ಯವಿದ್ದಾಗ ಅವರು ಸಂಪರ್ಕಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಕೊಹ್ಲಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸದ್ಯ ಕ್ರಿಕೆಟ್ ನಿಂದ ದೂರ ಉಳಿದು ವಿಶ್ರಾಂತಿ ಪಡೆಯುತ್ತಿರುವ ಧೋನಿ ಮುಂಬರುವ ಬಾಂಗ್ಲಾದೇಶ ವಿರುದ್ಧ ಕೂಡ ಆಡುವ ನಿರೀಕ್ಷೆಯಿಲ್ಲ. ಬಿಸಿಸಿಐ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಗಂಗೂಲಿ ಅವರು ಧೋನಿ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯಲು ಆಯ್ಕೆದಾರರು ಮತ್ತು ಧೋನಿ ಅವರೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.


"ನಾನು ಗಂಗೂಲಿ ಅವರನ್ನು ಅಭಿನಂದಿಸಿದೆ. ಅವರು ಬಿಸಿಸಿಐ ಅಧ್ಯಕ್ಷರಾಗಿರುವುದು ತುಂಬಾ ಖುಷಿಯಾಗಿದೆ. ಆದರೆ ಅವರು ಧೋನಿ ಬಗ್ಗೆ ಇನ್ನೂ ಮಾತನಾಡಲಿಲ್ಲ. ಅವರು ನನ್ನೊಂದಿಗೆ ಸಂಪರ್ಕ ಹೊಂದಲು ಬಯಸಿದಾಗ ಅವರು ಭೇಟಿಯಾಗಲಿದ್ದಾರೆ. ಆಗ ನಾನು ಅವರನ್ನು ಹೋಗಿ ಭೇಟಿ ಮಾಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ. 


ನವೆಂಬರ್ 3 ರಿಂದ ಪ್ರಾರಂಭವಾಗುವ ಬಾಂಗ್ಲಾದೇಶ ಟಿ 20 ಸರಣಿಯಿಂದ ಹೊರಗುಳಿಯುವ ನಿರ್ಧಾರದ ಕುರಿತಾಗಿ ಅಕ್ಟೋಬರ್ 24 ರಂದು ಕೊಹ್ಲಿಯೊಂದಿಗೆ ಮಾತನಾಡುತ್ತೇನೆ, ಉಳಿದ್ದದ್ದು ನಾಯಕನಿಗೆ ಬಿಟ್ಟದ್ದು  ಎಂದು ಗಂಗೂಲಿ ಹೇಳಿದ್ದಾರೆ.


'ಬಿಸಿಸಿಐ ಅಧ್ಯಕ್ಷರು ಭಾರತೀಯ ನಾಯಕನನ್ನು ಭೇಟಿಯಾದಂತೆಯೇ ನಾನು ಅವರನ್ನು (ಕೊಹ್ಲಿ) ಭೇಟಿಯಾಗುತ್ತೇನೆ. ಅವರು ವಿಶ್ರಾಂತಿ ಬಯಸುತ್ತಾರೆಯೇ ಎಂದು ನಿರ್ಧರಿಸುವ ಜವಾಬ್ದಾರಿ ಅವರ ಮೇಲಿದೆ" ಎಂದು ಗಂಗೂಲಿ ಸುದ್ದಿಗಾರರಿಗೆ ತಿಳಿಸಿದರು.