Indian Captain in T20 World Cup 2024 : ODI ವಿಶ್ವಕಪ್‌ನಲ್ಲಿ ಪವರ್‌ಫುಲ್ ಓಪನರ್ ರೋಹಿತ್ ಶರ್ಮಾ ಟೀಮ್ ಇಂಡಿಯಾದ ನೇತೃತ್ವ ವಹಿಸಿದ್ದರು. ರೋಹಿತ್ ಮತ್ತು ಟೀಂ ಇಂಡಿಯಾದ ಪ್ರದರ್ಶನ ವಿಶ್ವಕಪ್ ನಲ್ಲಿ ಅದ್ಭುತವಾಗಿತ್ತು. ಆದರೆ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ಲಕ್ಷಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸನ್ನು  ನುಚ್ಚು ನೂರು ಮಾಡಿದೆ. ಟಿ20 ವಿಶ್ವಕಪ್ ಮುಂದಿನ ವರ್ಷ (T20 World Cup-2024) ನಡೆಯಲಿದೆ. ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಾಯಕತ್ವವನ್ನು ಯಾರು  ವಹಿಸುತ್ತಾರೆ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. 


COMMERCIAL BREAK
SCROLL TO CONTINUE READING

ಜವಾಬ್ದಾರಿ ಹೊತ್ತಿರುವ  ಹಾರ್ದಿಕ್ ಮತ್ತು ಸೂರ್ಯ:
ರೋಹಿತ್ ಶರ್ಮಾ ಬಹಳ ದಿನಗಳಿಂದ ಭಾರತ ಟಿ20 ತಂಡದ ಭಾಗವಾಗಿಲ್ಲ. ರೋಹಿತ್ ಅನುಪಸ್ಥಿತಿಯಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ಹಾರ್ದಿಕ್ ಗಾಯಗೊಂಡಿದ್ದು, ಸೂರ್ಯಕುಮಾರ್ ಯಾದವ್ ತಂಡದ ನಾಯಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕ ಯಾರಾಗಬೇಕು ಎನ್ನುವುದರ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ. 


ಇದನ್ನೂ ಓದಿ : PKL 10 : ನಾಳೆಯಿಂದ ಪ್ರೊ ಕಬಡ್ಡಿ ಲೀಗ್‌ ಪ್ರಾರಂಭ..! ಈ ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಿ..!


ತಮ್ಮ ಆಯ್ಕೆ ತಿಳಿಸಿದ ಗಂಗೂಲಿ :  
ಟಿ20 ವಿಶ್ವಕಪ್ ನಲ್ಲಿ ಯಾರು ಭಾರತ ತಂಡವನ್ನು ಮುನ್ನಡೆಸಬೇಕು ಎನ್ನುವ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ ತನ್ನ ಆಯ್ಕೆಯನ್ನು ಹೇಳಿದ್ದಾರೆ.  'ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ (ODI) ಉತ್ತಮ ಪ್ರದರ್ಶನ ನೀಡಿದ್ದರು. ಹಾಗಾಗಿ ಟಿ20 ವಿಶ್ವಕಪ್ ವರೆಗೆ ಭಾರತ ತಂಡದ ನಾಯಕರಾಗಿ ಮುಂದುವರಿಯಬೇಕು ಎಂದಿದ್ದಾರೆ. 


ಜೂನ್ 4ರಿಂದ ಟೂರ್ನಿ ಆರಂಭ : 
ಮುಂದಿನ ವರ್ಷ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ನಲ್ಲಿ 20 ತಂಡಗಳು ಭಾಗಿಯಾಗಲಿವೆ. ಈ ಐಸಿಸಿ ಪಂದ್ಯಾವಳಿಯು ಜೂನ್ 4 ರಿಂದ 30 ರವರೆಗೆ ನಡೆಯಲಿದೆ. 20 ತಂಡಗಳನ್ನು ತಲಾ 5ರಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ  ಟಾಪ್ 2 ತಂಡಗಳು ಸೂಪರ್-8 ಸುತ್ತಿಗೆ ಅರ್ಹತೆ ಪಡೆಯಲಿವೆ. ಅರ್ಹತೆ ಪಡೆಯುವ ತಂಡಗಳನ್ನು ತಲಾ 4ರಂತೆ 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇದಾದ ನಂತರ  ಟಾಪ್ -2 ಅರ್ಹತಾ ತಂಡಗಳು ನಾಕೌಟ್ ಸುತ್ತಿಗೆ ತಲುಪಲಿವೆ. ನಂತರ ಈ 4 ತಂಡಗಳ ನಡುವೆ ಸೆಮಿಫೈನಲ್ ನಡೆಯಲಿದೆ. ಜೂನ್ 30 ರಂದು ಫೈನಲ್ ಪಂದ್ಯ ನಡೆಯಲಿದೆ.


ಇದನ್ನೂ ಓದಿ : ICC T20 World Cup 2023: ಟಿ20 ವಿಶ್ವಕಪ್‍ಗೆ ಹೊಸ ಸ್ವರೂಪ, 20 ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.