PKL 10 : ನಾಳೆಯಿಂದ ಪ್ರೊ ಕಬಡ್ಡಿ ಲೀಗ್‌ ಪ್ರಾರಂಭ..! ಈ ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಿ..!

Pro Kabaddi League 10 : 4 ವರ್ಷಗಳ ನಂತರ ಆರಂಭವಾಗಿರುವ ಪ್ರೊ ಕಬಡ್ಡಿ ಲೀಗ್‌ನ 10ನೇ ಸೀಸನ್‌ನಲ್ಲಿ ಎಲ್ಲಾ 12 ಫ್ರಾಂಚೈಸಿಗಳು ತಮ್ಮ ತವರಿನ ಅಂಗಳದಲ್ಲಿ ಆಡಲು ಸಿದ್ಧವಾಗಿವೆ. ಡಿಸೆಂಬರ್ 2ರಂದು ಪ್ರಾರಂಭವಾಗಲಿರುವ ಪಂದ್ಯಾವಳಿಗಳು 2024ರ ಫೆಬ್ರವರಿ 21ರವರೆಗೆ ನಡೆಯಲಿವೆ.

Written by - Krishna N K | Last Updated : Dec 1, 2023, 02:56 PM IST
  • ವಿವೋ ಪ್ರೊ ಕಬಡ್ಡಿ ಲೀಗ್‌ (PKL) ಸೀಸನ್‌ 10ರ ಅಬ್ಬರ ಶುರುವಾಗಲಿದೆ.
  • ನಾಳೆ ಪ್ರೊ ಕಬ್ಬಡ್ಡಿ ಪಂದ್ಯಾವಳಿಗಳಿಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.
  • ಮೊದಲಿಗೆ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ.
PKL 10 : ನಾಳೆಯಿಂದ ಪ್ರೊ ಕಬಡ್ಡಿ ಲೀಗ್‌ ಪ್ರಾರಂಭ..! ಈ ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಿ..! title=

PKL 10 : ವಿಶ್ವಕಪ್‌ ಕಪ್‌ ಬೆನ್ನಲ್ಲೆ ದೇಶದಲ್ಲಿ ಬಹುನಿರೀಕ್ಷಿತ ವಿವೋ ಪ್ರೊ ಕಬಡ್ಡಿ ಲೀಗ್‌ (PKL) ಸೀಸನ್‌ 10ರ ಅಬ್ಬರ ಶುರುವಾಗಲಿದೆ. ನಾಳೆ ಪ್ರೊ ಕಬ್ಬಡ್ಡಿ ಪಂದ್ಯಾವಳಿಗಳಿಗೆ ಅಧಿಕೃತವಾಗಿ ಚಾಲನೆ ಸಿಗಲಿದ್ದು, ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ರಣ ರೋಚಕ ಪಂದ್ಯದ ಉದ್ಘಾಟನೆ ನಡೆಯಲಿದೆ.

ನಾಳೆ ರಾತ್ರಿ 8 ಗಂಟೆಗೆ ಆರಂಭವಾಗುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಮೊದಲಿಗೆ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ. ಈ ರೋಚಕ ಪಂದ್ಯಾವಳಿಯ ಆರಂಭದಲ್ಲೇ ಸ್ಟಾರ್ ಆಟಗಾರರಾದ ಫಾಜೆಲ್ ಅತ್ರಾಚಲಿ ಮತ್ತು ಪವನ್ ಸೆಹ್ರಾವತ್ ಮುಖಾಮುಖಿಯಾಗಲಿದ್ದು, ಕುತೂಹಲ ಕೆರಳಿಸಿದೆ. 

ಇದನ್ನೂ ಓದಿ: ICC T20 World Cup 2023: ಟಿ20 ವಿಶ್ವಕಪ್‍ಗೆ ಹೊಸ ಸ್ವರೂಪ, 20 ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ   

4 ವರ್ಷಗಳ ನಂತರ ಆರಂಭವಾಗಿರುವ ಪ್ರೊ ಕಬಡ್ಡಿ ಲೀಗ್‌ನ 10ನೇ ಸೀಸನ್‌ನಲ್ಲಿ ಎಲ್ಲಾ 12 ಫ್ರಾಂಚೈಸಿಗಳು ತಮ್ಮ ತವರಿನ ಅಂಗಳದಲ್ಲಿ ಆಡಲು ಸಿದ್ಧವಾಗಿವೆ. ಡಿಸೆಂಬರ್ 2ರಂದು ಪ್ರಾರಂಭವಾಗಲಿರುವ ಪಂದ್ಯಾವಳಿಗಳು 2024ರ ಫೆಬ್ರವರಿ 21ರವರೆಗೆ ನಡೆಯಲಿವೆ.

ಪ್ರೊ ಕಬಡ್ಡಿ ಲೀಗ್‌ ಸೀಸನ್‌ 10 ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು ಅಲ್ಲದೆ, ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್  ಸಹ ಆಗಲಿದ್ದು, ಎಲ್ಲಿಯಾದರೂ ಕುಳಿತು ನಿಮ್ಮ ನೆಚ್ಚಿನ ತಂಡದ ಆಟವನ್ನು ನೋಡಿ ಆನಂದಿಸಬಹದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News