Gautam Gambhir: ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ ಮನ್ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಜಗಳದ ನಂತರ ಭಾರೀ ಚರ್ಚೆಯಲ್ಲಿದ್ದಾರೆ. ಇಷ್ಟೇ ಅಲ್ಲದೆ, ಮೈದಾನದ ಹೊರಗೆ ಕೂಡ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ವಾರ್ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಗೌತಮ್ ಗಂಭೀರ್ ಟೀಂ ಇಂಡಿಯಾದ ಬಲಿಷ್ಠ ಕ್ರಿಕೆಟಿಗರಲ್ಲಿ ಒಬ್ಬರು. 2007 ರ ಟಿ20 ವಿಶ್ವಕಪ್ ಮತ್ತು 2011 ವಿಶ್ವಕಪ್‌ ನ ಅಂತಿಮ ಪಂದ್ಯಗಳಲ್ಲಿ ಪ್ರಚಂಡ ಇನ್ನಿಂಗ್ಸ್‌’ಗಳನ್ನು ಆಡುವ ಮೂಲಕ ಭಾರತವನ್ನು ಚಾಂಪಿಯನ್ ಮಾಡಿದ್ದರು.


ಇದನ್ನೂ ಓದಿ: ಅನುಷ್ಕಾ ಶರ್ಮಾ ಈ ಫೋಟೋ ಶೇರ್ ಮಾಡಿ ಟ್ರೋಲ್ ಆದ ವಿರಾಟ್ ಕೊಹ್ಲಿ


ಇನ್ನು ಕ್ರಿಕೆಟ್ ಮಾತ್ರವಲ್ಲದೆ, ರಾಜಕೀಯದಲ್ಲೂ ಗಂಭೀರ್ ಸಕ್ರಿಯವಾಗಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದರೂ ಆಗಿದ್ದಾರೆ. ಗೌತಮ್ ಗಂಭೀರ್ ಐಪಿಎಲ್‌ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ನ ಮೆಂಟರ್. ಇದಲ್ಲದೇ ಕ್ರಿಕೆಟ್ ಕಾಮೆಂಟರಿಯನ್ನೂ ಮಾಡುತ್ತಾರೆ.


ಇದರ ಹೊರತಾಗಿ ಗೌತಮ್ ಗಂಭೀರ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಅವರ ಪತ್ನಿ ನತಾಶಾ ಜೈನ್ ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನೂ ಸೋಲಿಸುತ್ತಾರೆ. ನತಾಶಾ ಜೈನ್ ಮಾಧ್ಯಮದಿಂದ ಯಾವತ್ತೂ ದೂರ ಇರುತ್ತಾರೆ.


ಗೌತಮ್ ಗಂಭೀರ್ ಪತ್ನಿ ನತಾಶಾ ಜೈನ್ ಕೋಟಿ ಕೋಟಿ ಆಸ್ತಿಯ ಒಡತಿ. ಇವರ ತಂದೆ ಮಿಲಿಯನೇರ್ ಉದ್ಯಮಿ. ರವೀಂದ್ರ ಜೈನ್ ನತಾಶಾ ಜೈನ್ ಅವರ ತಂದೆ. ಗೌತಮ್ ಗಂಭೀರ್ ಅವರ ತಂದೆ ದೀಪಕ್ ಗಂಭೀರ್ ಕೂಡ ಪ್ರಸಿದ್ಧ ಜವಳಿ ಉದ್ಯಮಿ. ದೀಪಕ್ ಗಂಭೀರ್ ಮತ್ತು ರವೀಂದ್ರ ಜೈನ್ ಸುಮಾರು 30 ವರ್ಷಗಳಿಂದ ಸ್ನೇಹಿತರಾಗಿದ್ದರು. 2008 ರಲ್ಲಿ, ಗೌತಮ್ ಗಂಭೀರ್ ಮತ್ತು ನತಾಶಾ ಜೈನ್ ಕುಟುಂಬದ ಮೂಲಕ ಪರಿಚಯವಾದರು. ಇದಾದ ನಂತರ ಗಂಭೀರ್ ಗೆ ನತಾಶ ಮೇಲೆ ಪ್ರೀತಿಯಾಗಿದ್ದು, ಎರಡು ವರ್ಷಗಳ ಕಾಲ ಇಬ್ಬರು ಡೇಟಿಂಗ್ ಮಾಡಿದ್ದಾರೆ. ನಂತರ ವಿವಾಹವಾದರು.


ಗೌತಮ್ ಗಂಭೀರ್ ಮತ್ತು ನತಾಶಾ ಜೈನ್ 28 ಅಕ್ಟೋಬರ್ 2011 ರಂದು ಗುರ್ಗಾಂವ್‌ ನಲ್ಲಿ ವಿವಾಹವಾದರು. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.


ಇನ್ನು ಗೌತಮ್ ಗಂಭೀರ್ ಅವರ ತಂದೆ ದೀಪಕ್ ಗಂಭೀರ್ ಕೂಡ ಜವಳಿ ಉದ್ಯಮಿ. ಗೌತಮ್ ಗಂಭೀರ್ ದೆಹಲಿಯ ಬರಾಖಂಬಾದಲ್ಲಿರುವ ಮಾಡರ್ನ್ ಸ್ಕೂಲ್‌ ನಿಂದ ಶಿಕ್ಷಣ ಪಡೆದು ನಂತರ ಹಿಂದೂ ಕಾಲೇಜಿನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ಗೌತಮ್ ಗಂಭೀರ್‌ ಗೆ ಒಬ್ಬ ಸಹೋದರಿಯೂ ಇದ್ದಾರೆ. ಅವರ ಹೆಸರು ಏಕ್ತಾ. ಗಂಭೀರ್ ಅವರಿಗಿಂತ ಏಕ್ತಾ ಮೂರು ವರ್ಷ ಚಿಕ್ಕವರು.


ಐಷಾರಾಮಿ ಮನೆಯ ಜೊತೆಗೆ ಗೌತಮ್ ಗಂಭೀರ್ ಬಳಿ ಐಷಾರಾಮಿ ಕಾರುಗಳ ಸಂಗ್ರಹವಿದೆ. ಆಡಿ, ಮರ್ಸಿಡಿಸ್, ಬಿಎಂಡಬ್ಲ್ಯು, ಮಾರುತಿ ಸುಜುಕಿ, ಬೊಲೆರೊ ಮುಂತಾದ ದುಬಾರಿ ವಾಹನಗಳಿವೆ. ಗಂಭೀರ್ ಅವರ ಮನೆ ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿದ್ದು, ಸುಮಾರು 20 ಕೋಟಿಗೂ ಹೆಚ್ಚು ಬೆಲೆಬಾಳುತ್ತದೆ. 2013 ರಲ್ಲಿ ಈ ಐಷಾರಾಮಿ ಮನೆಯನ್ನು ಖರೀದಿಸಿದ್ದರು. ಇದಲ್ಲದೆ, ರಾಜೇಂದ್ರ ನಗರ ಮತ್ತು ಕರೋಲ್ ಬಾಗ್ ಪ್ರದೇಶದಲ್ಲಿ 3 ಮನೆಗಳನ್ನು ಗಂಭೀರ್ ಹೊಂದಿದ್ದು, ಇದರ ಒಟ್ಟು ಮೌಲ್ಯ ಸುಮಾರು 15 ಕೋಟಿ. ಇದರ ಜೊತೆ ನೋಯ್ಡಾದಲ್ಲಿ 5 ಕೋಟಿ ರೂ, ಬೆಲೆಯ ಫ್ಲಾಟ್ ಹೊಂದಿದ್ದಾರೆ.


ಇದನ್ನೂ ಓದಿ: LSG ವಿರುದ್ಧ ರಣರೋಚಕ ಕಾಳಗದಲ್ಲಿ ಗೆದ್ದು ಬೀಗಿದ RCB..!


ಕ್ರಿಕೆಟ್ ಜೀವನ:


ಗಂಭೀರ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 58 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಒಂಬತ್ತು ಶತಕಗಳನ್ನು ಒಳಗೊಂಡಂತೆ 41.95 ಸರಾಸರಿಯಲ್ಲಿ 4154 ರನ್ ಗಳಿಸಿದ್ದಾರೆ. ಗಂಭೀರ್ 147 ODIಗಳಲ್ಲಿ 39.68 ಸರಾಸರಿಯಲ್ಲಿ 5238 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 2011ರ ವಿಶ್ವಕಪ್ ಫೈನಲ್‌ನಲ್ಲಿ 97 ರನ್‌ ಗಳ ಸ್ಮರಣೀಯ ಇನ್ನಿಂಗ್ಸ್ ಅನ್ನು ಆಡಿದ್ದಾರೆ. ಇದರಿಂದಾಗಿ ಭಾರತವು ಎರಡನೇ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಏಕದಿನ ಪಂದ್ಯಗಳಲ್ಲಿ 11 ಶತಕಗಳ ಇನ್ನಿಂಗ್ಸ್‌ ಗಳನ್ನು ಆಡಿದ್ದಾರೆ. ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲೂ ಗಂಭೀರ್ ತಮ್ಮ ಛಾಪು ಮೂಡಿಸಿದ್ದಾರೆ. 37 ಪಂದ್ಯಗಳಲ್ಲಿ ಏಳು ಅರ್ಧಶತಕಗಳ ಸಹಾಯದಿಂದ 932 ರನ್ ಗಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ