KL Rahul: ಒಂದು ನಿಮಿಷದ ಪಂದ್ಯ ನೋಡಿ ಟೀಕಿಸುತ್ತಾರೆ - ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತ ಗೌತಮ್ ಗಂಭೀರ್
Gautam Gambhir : ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್ ಅವರನ್ನು ಎಲ್ಲರ ಮುಂದೆ ಬೈಯುವುದು ಯಾರಿಗೂ ಇಷ್ಟವಾಗಿಲ್ಲ. ಈ ಘಟನೆ ಬಳಿಕ ಟೀಂ ಇಂಡಿಯಾ ಆಟಗಾರರು ಕೂಡ ಸಂಜೀವ್ ಗೋಯೆಂಕಾ ಅವರ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.
Gautam Gambhir On KL Rahul: ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಸೋತ ನಂತರ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಂಡದ ಕ್ಯಾಪ್ಟನ್ ಕೆಎಲ್ ರಾಹುಲ್ ಅವರೊಂದಿಗೆ ಮಾತುಕತೆ ನಡೆಸಿದ ಕೆಲವು ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್ ಅವರನ್ನು ಎಲ್ಲರ ಮುಂದೆ ಬೈಯುವುದು ಯಾರಿಗೂ ಇಷ್ಟವಾಗಿಲ್ಲ. ಈ ಘಟನೆ ಬಳಿಕ ಟೀಂ ಇಂಡಿಯಾ ಆಟಗಾರರು ಕೂಡ ಸಂಜೀವ್ ಗೋಯೆಂಕಾ ಅವರ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.
ಎಲ್ಲರೆದುರೇ ಈ ರೀತಿ ಮಾತನಾಡುವುದು ಸರಿಯಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲೇ ಇದೆಲ್ಲಾ ನಡೆಯಬೇಕು ಎಂದು ಕ್ರಿಕೆಟಿಗ ಮೊಹಮ್ಮದ್ ಶಮಿ ಹೇಳಿದ್ದರು. ಇದೀಗ ಗೌತಮ್ ಗಂಭೀರ್ ಕೂಡ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ. ಗೌತಮ್ ಗಂಭೀರ್ ಶಾರುಖ್ ಖಾನ್ ಹೆಸರನ್ನು ತೆಗೆದುಕೊಳ್ಳುವ ಮೂಲಕ ಸಂಜೀವ್ ಗೋಯೆಂಕಾ ಅವರನ್ನು ಗುರಿಯಾಗಿಸಿ ಮಾತನಾಡಿದಂತಿದೆ.
ಇದನ್ನೂ ಓದಿ: Suresh Raina: ಸೌತ್‌ನ ಸ್ಟಾರ್ ನಟಿಯ ಜೊತೆ ಸುರೇಶ್ ರೈನಾ ಡೇಟಿಂಗ್? ಈ ವದಂತಿ ನಿಜವೇ!
ಕಾರ್ಯಕ್ರಮವೊಂದರಲ್ಲಿ ಸಂವಾದದ ವೇಳೆ ಗೌತಮ್ ಗಂಭೀರ್, ನಮ್ಮ ದೇಶದಲ್ಲಿ ತಜ್ಞರು ಮತ್ತು ತಂಡದ ಮಾಲೀಕರು ಕೇವಲ ಒಂದು ನಿಮಿಷದಲ್ಲಿ ಪಂದ್ಯವನ್ನು ವೀಕ್ಷಿಸಿದ ನಂತರ ಟೀಕಿಸಲು ಪ್ರಾರಂಭಿಸುತ್ತಾರೆ. ಆ ರೀತಿಯ ಒತ್ತಡವನ್ನು ಎದುರಿಸಿದಾಗಲೇ ಟೀಕೆ ಬರಬೇಕು. ಶಾರುಖ್ ಖಾನ್ ಅವರಿಗೆ ಈ ವಿಷಯಗಳು ತಿಳಿದಿವೆ. ಅವರಿಗೆ ಹೋರಾಟ ಮತ್ತು ಒತ್ತಡ ಏನು ಎಂದು ತಿಳಿದಿದೆ ಎಂದಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಚಾಂಪಿಯನ್ ಆಗುವ ರೇಸ್‌ನಲ್ಲಿದೆ. ಆದರೆ ಕಳೆದ ಕೆಲವು ಸೀಸನ್‌ಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅತ್ಯಂತ ಕೆಟ್ಟ ಸೋಲುಗಳನ್ನು ಅನುಭವಿಸಿದೆ. ಇದರ ಹೊರತಾಗಿಯೂ, ಶಾರುಖ್ ಖಾನ್ ತಮ್ಮ ತಂಡವನ್ನು ಬೆಂಬಲಿಸುತ್ತಾರೆ. ಸೋಲಿನ ನಡುವೆಯೂ ಅವರು ತಮ್ಮ ಆಟಗಾರರನ್ನು ಮಾತ್ರವಲ್ಲ ಎದುರಾಳಿ ಆಟಗಾರರನ್ನೂ ಅಪ್ಪಿಕೊಳ್ಳುತ್ತಾರೆ.
ಮತ್ತೊಂದೆಡೆ, ಸಂಜೀವ್ ಗೋಯೆಂಕಾ ಸ್ವಲ್ಪ ವಿಭಿನ್ನವಾಗಿ ವರ್ತಿಸಿದ್ದಾರೆ. ಸಂಜೀವ್ ಗೋಯೆಂಕಾ ಅವರ ಕೋಪವನ್ನು ಎದುರಿಸಿದ್ದು ಕೆಎಲ್ ರಾಹುಲ್ ಮಾತ್ರವಲ್ಲ. 2016 ರ ಐಪಿಎಲ್ ಸೀಸನ್ ನಂತರ ಸಂಜೀವ್ ಗೋಯೆಂಕಾ ಪುಣೆ ಸೂಪರ್‌ಜೈಂಟ್ಸ್ ನಾಯಕತ್ವದಿಂದ ಧೋನಿಯನ್ನು ತೆಗೆದುಹಾಕಿದರು. ಧೋನಿ ನಾಯಕತ್ವದಲ್ಲಿ ಪುಣೆಯ ಪ್ರದರ್ಶನ ತೀರಾ ಕಳಪೆಯಾಗಿತ್ತು. ಇದಾದ ನಂತರ ಸ್ಟೀವ್ ಸ್ಮಿತ್‌ಗೆ ನಾಯಕತ್ವ ನೀಡಲಾಯಿತು. ಅವರು ತಂಡವನ್ನು ಫೈನಲ್‌ಗೆ ಕೊಂಡೊಯ್ದರು.
ಇದನ್ನೂ ಓದಿ: KL Rahul quit LSG captaincy: ಕೆಎಲ್ ರಾಹುಲ್ ಲಖನೌ ಸೂಪರ್ ಜೈಂಟ್ಸ್ ನಾಯಕತ್ವ ತ್ಯಜಿಸುತ್ತಾರಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.