Glenn McGrath Prediction: ಈ ವರ್ಷ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, ಅದಕ್ಕಾಗಿ ಎಲ್ಲಾ ತಂಡಗಳು ಅಭ್ಯಾಸ ನಡೆಸುತ್ತಿವೆ. ಪ್ರತೀ ತಂಡಗಳು ಸಹ ಈ ಪಂದ್ಯದಲ್ಲಿ ಕಪ್ ಎತ್ತಿಹಿಡಿಯಬೇಕು ಎಂಬ ಆಸೆಯನ್ನಿಟ್ಟುಕೊಂಡಿದೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್‌’ಗ್ರಾತ್ 2023 ರ ಏಕದಿನ ವಿಶ್ವಕಪ್‌’ನ ಸೆಮಿಫೈನಲ್ ತಲುಪುವ 4 ತಂಡಗಳ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ಈ ಪಂದ್ಯಾವಳಿಯು ಭಾರತದಲ್ಲಿ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: CSK ತಂಡದಲ್ಲಿದ್ದೇ ನಾಯಕ ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ಆ 3 ಕ್ರಿಕೆಟಿಗರು ಯಾರು?


ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ 2023 ರ ODI ವಿಶ್ವಕಪ್‌’ನ ಸೆಮಿಫೈನಲ್ ತಂಡದ ಬಗ್ಗೆ ತಮ್ಮ ನಿಲುವನ್ನು ನೀಡಿದ್ದಾರೆ. ಅವರ ಪ್ರಕಾರ, ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಸೆಮಿ ಫೈನಲ್ ಗೆ ಎಂಟ್ರಿಕೊಡಬಹುದು.


ಗ್ಲೆನ್ ಮೆಕ್‌’ಗ್ರಾತ್ ಹೇಳುವ ಪ್ರಕಾರ, “ನಾನು ಆಸ್ಟ್ರೇಲಿಯಾವನ್ನು ಅಗ್ರ 4 ರಲ್ಲಿ ಇರಿಸುತ್ತೇನೆ. ಭಾರತ ತವರಿನಲ್ಲಿ ಆಡುತ್ತಿದ್ದು, ಟೂರ್ನಿಯನ್ನು ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಸದ್ಯಕ್ಕೆ ಇಂಗ್ಲೆಂಡ್ ಉತ್ತಮ ಕ್ರಿಕೆಟ್ ಆಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಪ್ರದರ್ಶನ ಕೂಡ ಉತ್ತಮವಾಗಿದೆ. ಹಾಗಾಗಿ ನನ್ನ ಪ್ರಕಾರ ಈ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಬಹುದು. ನನ್ನ ಭವಿಷ್ಯವು ಸರಿಯಾಗಲಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.


ಈ ಬಾರಿಯ ವಿಶ್ವಕಪ್  ತವರಿನಲ್ಲಿ ನಡೆಯುತ್ತಿರುವುದು ಭಾರತ ತಂಡಕ್ಕೆ ಉತ್ತಮ ಸಂಗತಿಯಾಗಿದೆ. ಯಾವುದೇ ತಂಡಕ್ಕಾಗಲಿ ಅವರ ತವರಿನಲ್ಲಿ ಸೋಲಲು ಇಷ್ಟವಿರುವುದಿಲ್ಲ. ಇನ್ನು ಭಾರತವನ್ನು ತನ್ನ ನೆಲದಲ್ಲೇ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ.


ಆಸ್ಟ್ರೇಲಿಯಾದ ಬಗ್ಗೆ ಮಾತನಾಡುವುದಾದರೆ, ಅವರು ಇತ್ತೀಚಿನ ದಿನಗಳಲ್ಲಿ ಉತ್ತಮ ಕ್ರಿಕೆಟ್ ಆಡಿದ್ದಾರೆ. ಈ ಪಂದ್ಯಾವಳಿಯನ್ನು ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಪಾಕಿಸ್ತಾನ ತಂಡಗಳಿಗೂ ಕಠಿಣ ಪೈಪೋಟಿ ನೀಡಬಲ್ಲದು. ODI ಕ್ರಿಕೆಟ್‌  ನಲ್ಲಿ ಇಂಗ್ಲೆಂಡ್‌ ನ ಪ್ರದರ್ಶನ ಯಾವಾಗಲೂ ಉತ್ತಮವಾಗಿರುತ್ತದೆ. ಅವರು 2019 ODI ವಿಶ್ವಕಪ್ ಗೆದ್ದಿದ್ದಾರೆ. ಈ ಬಾರಿ ಯಾವ ತಂಡ ಈ ಅಮೋಘ ಟ್ರೋಫಿಯನ್ನು ಗೆಲ್ಲುತ್ತದೆ ಎಂದು ಕಾದು ನೋಡಬೇಕಿದೆ.


ಇದನ್ನೂ ಓದಿ: IND vs WI: ಭಾರತ vs ವೆಸ್ಟ್ ಇಂಡೀಸ್ ನಡುವಿನ 2ನೇ ಪಂದ್ಯ ರದ್ದಾಗುತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ