IND vs WI: ಭಾರತ vs ವೆಸ್ಟ್ ಇಂಡೀಸ್ ನಡುವಿನ 2ನೇ ಪಂದ್ಯ ರದ್ದಾಗುತ್ತಾ? ಹೊರಬಿತ್ತು ಬಿಗ್ ಅಪ್ಡೇಟ್

IND vs WI 2nd T20 Weather Update: ಆಗಸ್ಟ್ 6 ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ಮುಂಜಾನೆ ಮಳೆಯಾಗುವ ಸಾಧ್ಯತೆ ಇದ್ದು, ಪಂದ್ಯದ ವೇಳೆ ಮಳೆಯ ಸಾಧ್ಯತೆ ತೀರಾ ಕಡಿಮೆಯಿರಲಿದೆ.

Written by - Bhavishya Shetty | Last Updated : Aug 6, 2023, 09:15 AM IST
    • ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ T20 ಸರಣಿಯ ಎರಡನೇ ಪಂದ್ಯ
    • ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ ಈ ಪಂದ್ಯವನ್ನು ಗೆದ್ದು ಸರಣಿಯ ಫಾರ್ಮ್ ಗೆ ಮರಳಲು ಕಾಯುತ್ತಿದೆ
    • ಆಗಸ್ಟ್ 6 ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಮೋಡ ಕವಿದ ವಾತಾವರಣ ಇರಲಿದೆ
IND vs WI: ಭಾರತ vs ವೆಸ್ಟ್ ಇಂಡೀಸ್ ನಡುವಿನ 2ನೇ ಪಂದ್ಯ ರದ್ದಾಗುತ್ತಾ? ಹೊರಬಿತ್ತು ಬಿಗ್ ಅಪ್ಡೇಟ್ title=
India vs West Indies Cricket

IND vs WI 2nd T20 Weather Update: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ T20 ಸರಣಿಯ ಎರಡನೇ ಪಂದ್ಯ ಇಂದು (ಆಗಸ್ಟ್ 6) ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 4 ರನ್‌ ಗಳಿಂದ ಸೋಲನುಭವಿಸಿತ್ತು. ಹೀಗಾಗಿ ಭಾರತ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ ಈ ಪಂದ್ಯವನ್ನು ಗೆದ್ದು ಸರಣಿಯ ಫಾರ್ಮ್ ಗೆ ಮರಳಲು ಕಾಯುತ್ತಿದೆ.

ಇದನ್ನೂ ಓದಿ: iPhone 14 ಮೇಲೆ ಭಾರೀ ರಿಯಾಯಿತಿ! ಅತ್ಯಂತ ಕಡಿಮೆ ಬೆಲೆಗೆ ಇಂದೇ ಇಲ್ಲಿ ಖರೀದಿಸಿ

ಈ ಪಂದ್ಯಕ್ಕೂ ಮುನ್ನ ಗಯಾನಾ ಹವಾಮಾನದ ಸ್ಥಿತಿಗತಿ, ಆಗಸ್ಟ್ 6 ರಂದು ಅಲ್ಲಿ ಮಳೆಯ ಬೀಳುವ ಸಂಭವ ಇದೆಯೇ ಎಂಬುದನ್ನು ತಿಳಿಯೋಣ.

ಆಗಸ್ಟ್ 6 ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ಮುಂಜಾನೆ ಮಳೆಯಾಗುವ ಸಾಧ್ಯತೆ ಇದ್ದು, ಪಂದ್ಯದ ವೇಳೆ ಮಳೆಯ ಸಾಧ್ಯತೆ ತೀರಾ ಕಡಿಮೆಯಿರಲಿದೆ. ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಪಂದ್ಯವು ರಾತ್ರಿ 8 ರಿಂದ ಪ್ರಾರಂಭವಾಗಲಿದೆ. ಟಾಸ್ ಸಮಯ ಸಂಜೆ 7.30.

ಗಯಾನಾ ಪಿಚ್ ಹೇಗಿರಲಿದೆ?

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿರುವ ಈ ಮೈದಾನದಲ್ಲಿ ಇದುವರೆಗೆ 11 ಟಿ20 ಪಂದ್ಯಗಳು ನಡೆದಿದ್ದು, ಮೊದಲ ಇನ್ನಿಂಗ್ಸ್‌’ನ ಸರಾಸರಿ ಸ್ಕೋರ್ 123 ರನ್ ಆಗಿದೆ. ಈ ಮೈದಾನದಲ್ಲಿ ಇದುವರೆಗೆ ನಡೆದ ಪಂದ್ಯಗಳಲ್ಲಿ ಚೇಸಿಂಗ್ ತಂಡ 5 ಬಾರಿ ಗೆದ್ದಿದ್ದರೆ, ಮೊದಲು ಬ್ಯಾಟ್ ಮಾಡಿದ ತಂಡ 3 ಬಾರಿ ಮಾತ್ರ ಜಯ ಸಾಧಿಸಿದೆ. ಪಿಚ್ ಬಗ್ಗೆ ಮಾತನಾಡುವುದಾದರೆ, ಇಲ್ಲಿ ಬ್ಯಾಟ್ಸ್‌’ಮನ್‌’ಗಳಿಗೆ ರನ್ ಗಳಿಸುವುದು ಸುಲಭವಲ್ಲ. ಸ್ವಿಂಗ್ ಬೌಲರ್‌’ಗಳು ಪಿಚ್‌ನಿಂದ ಸಹಾಯ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಇದಾದ ಬಳಿಕ ನಿಧಾನಗತಿಯ ಪಿಚ್ ನಲ್ಲೂ ಸ್ಪಿನ್ನರ್ ಗಳ ಜಾದೂ ಕಾಣಬಹುದಾಗಿದೆ.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ 11:

ಭಾರತ: ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.

ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (WK), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (c), ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:

ಇಶಾನ್ ಕಿಶನ್ (WK), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (vc), ಸಂಜು ಸ್ಯಾಮ್ಸನ್ (wk), ಹಾರ್ದಿಕ್ ಪಾಂಡ್ಯ (c), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್ , ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್.

ಇದನ್ನೂ ಓದಿ: ಇನ್ನೇನು 2 ತಿಂಗಳಲ್ಲಿ ಈ ರಾಶಿಯವರಿಗೆ ಅಷ್ಟೈಶ್ವರ್ಯ ಕರುಣಿಸಿ ನೆರಳಾಗಿ ಕಾಯುವನು ಶನಿದೇವ!

ಭಾರತ ವಿರುದ್ಧ ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡ-

ರೋವ್‌ಮನ್ ಪೊವೆಲ್ (C), ಕೈಲ್ ಮೇಯರ್ಸ್ (VC), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಒಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್, ಓಡಿಯನ್ ಥಾಮಸ್ ಸ್ಮಿತ್ .

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News