ನವದೆಹಲಿ: ಕ್ರಿಕೆಟ್ ಅಭಿಮಾನಿಗಳ ಕಣ್ಣು ಇದೀಗ ಏಷ್ಯಾ ಕಪ್ ಮೇಲಿದೆ. ದುಬೈನಲ್ಲಿ ಇಂದಿನಿಂದ ಈ ಟೂರ್ನಿ ಆರಂಭವಾಗಲಿದೆ. ಇಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ಗುಂಪು ಹಂತದ ಪಂದ್ಯ ನಡೆಯಲಿದೆ. ನಾಳೆ ನಡೆಯಲಿರುವ ಪಂದ್ಯವನ್ನು ವೀಕ್ಷಿಸಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಏಕೆಂದರೆ ಆಗಸ್ಟ್ 28ರ ಭಾನುವಾರ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ.


COMMERCIAL BREAK
SCROLL TO CONTINUE READING

ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಪಾಕಿಸ್ತಾನದ ಮಾರಕ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಆಡುತ್ತಿಲ್ಲ. ಆದರೆ ಈ ನಡುವೆ ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಪಾಕಿಸ್ತಾನದ ಮತ್ತೊಬ್ಬ ಮಾರಕ ಬೌಲರ್ ಈ ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.  


ಇದನ್ನೂ ಓದಿ: India vs Pakistan Asia Cup 2022: ನೆಟ್ಸ್‌ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾರ ಭರ್ಜರಿ ತಯಾರಿ ಹೇಗಿದೆ- ನೀವೇ ನೋಡಿ


ಪಾಕಿಸ್ತಾನಕ್ಕೆ ದೊಡ್ಡ ಹೊಡೆತ!


ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಗಾಯದ ಸಮಸ್ಯೆಯಿಂದ ಏಷ್ಯಾಕಪ್‌ನಿಂದ ಹೊರಗುಳಿದ ನಂತರ ಪಾಕಿಸ್ತಾನಕ್ಕೆ ದೊಡ್ಡ ಹಿನ್ನೆಡೆಯುಂಟಾಗಿತ್ತು. ಇದೀಗ ವೇಗಿ ಮೊಹಮ್ಮದ್ ವಾಸಿಮ್ ಕೂಡ ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿಯಬೇಕಾಗಿದೆ. ಇದು ಪಾಕ್ ತಂಡಕ್ಕೆ ಮತ್ತೊಂದು ಹೊಡೆತ ನೀಡಿದಂತಾಗಿದೆ. ಕಳಪೆ ಫಾರ್ಮ್‌ನಿಂದಾಗಿ ಈ ಕಾಂಟಿನೆಂಟಲ್ ಪಂದ್ಯಾವಳಿಯಿಂದ ಹೊರಗುಳಿದಿದ್ದ ಹಸನ್ ಅಲಿ ಅವರನ್ನು ವಾಸಿಂ ಜೂನಿಯರ್ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಖಚಿತಪಡಿಸಿದೆ.


ಎಡಭಾಗದಲ್ಲಿ ಗಾಯ


‘ತಂಡದ ವೈದ್ಯಕೀಯ ಸಿಬ್ಬಂದಿ ಮೊಹಮ್ಮದ್ ವಾಸಿಮ್ ಅವರನ್ನು ಪರೀಕ್ಷಿಸಿದರು. ನಂತರ ದುಬೈನಲ್ಲಿ MRI ಸ್ಕ್ಯಾನ್ ಎಡಭಾಗದಲ್ಲಿ ಗಾಯವಾಗಿರುವುದು ದೃಢವಾಗಿದೆ’ ಎಂದು PCB ಹೇಳಿಕೆಯಲ್ಲಿ ತಿಳಿಸಿದೆ. ಸ್ಕ್ಯಾನ್‌ನಲ್ಲಿ ಪತ್ತೆಯಾದ ಗಾಯವನ್ನು ಪಿಸಿಬಿಯ ವೈದ್ಯಕೀಯ ಸಲಹಾ ಸಮಿತಿಯೊಂದಿಗೆ ಚರ್ಚಿಸಲಾಯಿತು ಮತ್ತು ಗಾಯವನ್ನು ಪರಿಣಿತ ಭೌತಚಿಕಿತ್ಸಕರಿಂದ ಪರಿಶೀಲಿಸಲಾಯಿತು ಅಂತಾ ಪಿಸಿಬಿ ತಿಳಿಸಿದೆ.


ಇದನ್ನೂ ಓದಿ: Team India: ‘ನನಗೆ 35 ವರ್ಷ, 75 ಅಲ್ಲ…’ ಟೀ ಇಂಡಿಯಾದಲ್ಲಿ ಸಿಗದ ಅವಕಾಶಕ್ಕೆ ಆಕ್ರೋಶ..!


ಪಾಕ್‍ ತಂಡಕ್ಕೆ ಆಘಾತ!


‘ವೈದ್ಯಕೀಯ ತಂಡವು ವಾಸೀಮ್ ಅವರ 'ಪುನರ್ವಸತಿ'ಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸದ ಮೊದಲು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದನ್ನು ನಿರ್ಣಯಿಸುತ್ತದೆ’ ಎಂದು ಪಿಸಿಬಿ ಹೇಳಿದೆ. ಮೊಣಕಾಲಿನ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿರುವ ತಮ್ಮ ಪ್ರಮುಖ ಬೌಲರ್ ಶಾಹೀನ್ ಇಲ್ಲದೆ ಪಾಕಿಸ್ತಾನ ಆಡಲಿದೆ. ಆಯ್ಕೆಗಾರರು ಶಾಹೀನ್ ಬದಲಿಗೆ ಮೊಹಮ್ಮದ್ ಹಸ್ನೈನ್ ಅವರನ್ನು ಏಷ್ಯಾಕಪ್‌ಗೆ ಆಯ್ಕೆ ಮಾಡಿದ್ದಾರೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಗಾಯದ ಸಮಸ್ಯೆಯಿಂದ ಪ್ರಮುಖ ಬೌಲರ್‍ಗಳು ಹೊರಗುಳಿದಿದ್ದು, ಈ ಸವಾಲನ್ನು ಪಾಕ್ ತಂಡ ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.