Video : ಪಾಕ್ ಕ್ಯಾಪ್ಟನ್ ಬಾಬರ್ ಅಜಂ ಭೇಟಿ ಮಾಡಿದ ಕಿಂಗ್ ಕೊಹ್ಲಿ!

ಹೀಗೆ ಎರಡೂ ಟೀಂ ಇದೀಗ ಏಷ್ಯಾಕಪ್-2022 ಮೂಲಕ ಭರ್ಜರಿ ಸೆಣೆಸಾಟಕ್ಕೆ ಸಜ್ಜಾಗಿವೆ. ಹೀಗೆ ಹೈವೋಲ್ಟೇಜ್‌ ಪಂದ್ಯದ ಹೊತ್ತಲ್ಲೇ ಕಿಂಗ್‌ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್‌ ಮೇಲೆ ಸರ್ಪ್ರೈಸ್‌ ಕೊಡುತ್ತಿದ್ದಾರೆ.

Written by - Malathesha M | Last Updated : Aug 25, 2022, 07:50 PM IST
  • ಭಾರತ ವಿರುದ್ಧ ಪಾಕಿಸ್ತಾನ ನಡುವೆ ಕ್ರಿಕೆಟ್‌ ಮ್ಯಾಚ್‌
  • ಕ್ರಿಕೆಟ್‌ ಮ್ಯಾಚ್‌ ಎನ್ನುವ ಬದಲು ಥೇಟ್‌ ಯುದ್ಧದಂತೆಯೇ ಭಾಸ
  • ಹೈವೋಲ್ಟೇಜ್‌ ಪಂದ್ಯದ ಹೊತ್ತಲ್ಲೇ ಕಿಂಗ್‌ ಕೊಹ್ಲಿ ಅಭಿಮಾನಿಗಳಿಗೆ ಸರ್ಪ್ರೈಸ್‌
Video : ಪಾಕ್ ಕ್ಯಾಪ್ಟನ್ ಬಾಬರ್ ಅಜಂ ಭೇಟಿ ಮಾಡಿದ ಕಿಂಗ್ ಕೊಹ್ಲಿ! title=

ಭಾರತ ವಿರುದ್ಧ ಪಾಕಿಸ್ತಾನ ನಡುವೆ ಕ್ರಿಕೆಟ್‌ ಮ್ಯಾಚ್‌ ನಡೆಯುತ್ತಿದೆ ಎಂದರೆ ಅದು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತದೆ. ಕ್ರಿಕೆಟ್‌ ಮ್ಯಾಚ್‌ ಎನ್ನುವ ಬದಲು ಥೇಟ್‌ ಯುದ್ಧದಂತೆಯೇ ಭಾಸವಾಗಿಬಿಡುತ್ತದೆ. ಹೀಗೆ ಎರಡೂ ಟೀಂ ಇದೀಗ ಏಷ್ಯಾಕಪ್-2022 ಮೂಲಕ ಭರ್ಜರಿ ಸೆಣೆಸಾಟಕ್ಕೆ ಸಜ್ಜಾಗಿವೆ. ಹೀಗೆ ಹೈವೋಲ್ಟೇಜ್‌ ಪಂದ್ಯದ ಹೊತ್ತಲ್ಲೇ ಕಿಂಗ್‌ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್‌ ಮೇಲೆ ಸರ್ಪ್ರೈಸ್‌ ಕೊಡುತ್ತಿದ್ದಾರೆ.

ಭಾರತ & ಪಾಕ್ ನಡುವೆ ಆಗಸ್ಟ್ 28 ರಂದು ಏಷ್ಯಾಕಪ್-2022‌ ಸರಣಿಯ ಟಿ-20 ಪಂದ್ಯ ನಡೆಯಲಿದೆ. ಈ ಪಂದ್ಯದ ಮತ್ತೊಂದು ವಿಶೇಷತೆ ಏನೆಂದರೆ, ಕೊಹ್ಲಿ ಪಾಲಿಗೆ ಇದು 100ನೇ ಟಿ-20 ಮ್ಯಾಚ್. ಹೀಗಾಗಿಯೇ ಕಿಂಗ್‌ ಕೊಹ್ಲಿ ಭರ್ಜರಿ ಪ್ರಾಕ್ಟಿಸ್‌ ಮಾಡುತ್ತಿದ್ದು, ಎದುರಾಳಿ ತಂಡಕ್ಕೆ ಶಾಕ್‌ ನೀಡಿ ಪಂದ್ಯ ಗೆಲ್ಲಿಸಲು ಸಜ್ಜಾಗಿದ್ದಾರೆ. ಹೀಗೆ ಹೈವೋಲ್ಟೇಜ್‌ ಪಂದ್ಯದ ನಡುವೆ ಯುಎಇ ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ ವಿರಾಟ್‌ ಕೊಹ್ಲಿ. ಈ ವೇಳೆ ಪಾಕಿಸ್ತಾನ ಆಟಗಾರರು ವಿರಾಟ್‌ ಕೊಹ್ಲಿಗೆ ಎದುರಾಗಿದ್ದಾರೆ.

ಇದನ್ನೂ ಓದಿ : Asia Cup 2022 : ಕ್ಯಾಪ್ಟನ್ ಶರ್ಮಾಗೆ ಟೆನ್ಷನ್ ಹೆಚ್ಚಿಸಿದ ದೀಪಕ್ ಹೂಡಾ!

ರನ್‌ ಮಳೆ..!

ನೆಟ್‌ ಪ್ರಾಕ್ಟಿಸ್‌ ವೇಳೆ ವಿರಾಟ್‌ ಕೊಹ್ಲಿ ಅಲಿಯಾಸ್‌ ಕಿಂಗ್‌ ಕೊಹ್ಲಿ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಅವರ ಮಾರ್ಗದರ್ಶನದಲ್ಲಿ ಮೊದಲ ಪ್ರ್ಯಾಕ್ಟಿಸ್‌ ಸೆಷನ್ ಸೂಪರ್‌ ಸಕ್ಸಸ್‌ ಕಂಡಿದೆ.‌ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಹಾಗೂ ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರ್ಯಾಕ್ಟಿಸ್‌ ಮಾಡಲು ಅಫ್ಘಾನಿಸ್ತಾನ, ಪಾಕ್‌ ಕ್ರಿಕೆಟ್‌ ತಂಡದ ಆಟಗಾರರೂ ಅಲ್ಲಿಗೆ ಬಂದಿದ್ದಾರೆ. ಆಗ ಪಾಕ್‌ ಕ್ರಿಕೆಟ್‌ ಟೀಂ ಕ್ಯಾಪ್ಟನ್‌ ಬಾಬರ್ ಅಜಮ್ ಕೂಡ ಎಂಟ್ರಿ ಕೊಟ್ಟಿದ್ದು, ವಿರಾಟ್‌ ಕೊಹ್ಲಿಗೆ ಎದುರಾಗಿದ್ದಾರೆ. ಈ ಸೀನ್‌ನ ಬಿಸಿಸಿಐ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದೆ.

ಇಬ್ಬರು ಪ್ರಬಲ ಆಟಗಾರರು ಮುಖಾಮುಖಿ ಆದ ಸಂದರ್ಭದಲ್ಲಿ ಕೈಕುಲುಕಿ ತೆರಳಿದ್ದು, ಭಾರತ & ಪಾಕ್ ನಡುವಿನ ಪಂದ್ಯಕ್ಕೆ ಮತ್ತಷ್ಟು ಹೀಟ್‌ ಕೊಟ್ಟಿದೆ. ಯಾರು ಗೆಲ್ಲುತ್ತಾರೆ..? ಯಾರು ಸೋಲ್ತಾರೆ..? ಎಂಬುದುರ ಜೊತೆಗೆ ವಿರಾಟ್‌ ಕೊಹ್ಲಿ ತಮ್ಮ 100ನೇ ಟಿ-20 ಪಂದ್ಯದಲ್ಲಿ ಸೆಂಚ್ಯುರಿ ಭಾರಿಸೋದು ಪಕ್ಕಾನಾ ಅನ್ನೋ ಕುತೂಹಲ ಕೋಟಿ ಕೋಟಿ ಭಾರತೀಯರನ್ನ ಹಾಗೂ ಭಾರತೀಯ ಕ್ರಿಕೆಟ್‌ ತಂಡದ ಅಭಿಮಾನಿಗಳನ್ನ ಕಾಡುತ್ತಿದೆ. ಇದಕ್ಕೆಲ್ಲಾ ಉತ್ತರ ಆಗಸ್ಟ್ 28ರ ಭಾನುವಾರ ಸಂಜೆ ಸಿಗಲಿದೆ.

ಇದನ್ನೂ ಓದಿ : Asia Cup 2022: ಏಷ್ಯಾಕಪ್‌ಗೂ ಮುನ್ನ ಪಾಕಿಸ್ತಾನದ ಬಲಿಷ್ಠ ನಡೆ, ಟೀಂ ಇಂಡಿಯಾಗೆ ದೊಡ್ಡ ಸಂಕಷ್ಟ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News