ನವದೆಹಲಿ :  PV Sindhu reached back India from Tokyo Olympics : ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಮಂಗಳವಾರ ಮಧ್ಯಾಹ್ನ ಟೋಕಿಯೊದಿಂದ ಭಾರತಕ್ಕೆ ಮರಳಿದ್ದಾರೆ. ಭಾರತಕ್ಕೆ ಮರಳಿದ ಸಿಂಧುಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಸಿಂಧು ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಸಿಂಧು ಪರವಾಗಿ ಘೋಷಣೆಗಳನ್ನು ಕೂಗುತ್ತಾ ಅಭಿಮಾನಿಗಳು ತಮ್ಮ ಅಭಿಮಾನ ಪ್ರೀತಿಯನ್ನು ವ್ಯಕ್ತಪಡಿಸಿದರು.  


COMMERCIAL BREAK
SCROLL TO CONTINUE READING

ಪಿವಿ ಸಿಂಧು (PV Sindhu) ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಭಾರತೀಯ ಮಹಿಳಾ ಕ್ರೀಡಾಪಟು ಸತತ ಎರಡು ಒಲಿಂಪಿಕ್ಸ್‌ (Tokyo Olympics) ಅಲ್ಲಿ ಪದಕ ಗೆದ್ದಿರುವುದು ಇದೇ ಮೊದಲು. ಸಿಂಧು ಈ ಹಿಂದೆ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಹಿಂದೆ ಸುಶೀಲ್ ಕುಮಾರ್ ಪುರುಷ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು. 


Olympics Hockey: ಭಾರತಕ್ಕೆ ಕೈತಪ್ಪಿದ ‘ಚಿನ್ನ’ದ ಅವಕಾಶ, ಇನ್ನು ಕಂಚಿಗಾಗಿ ಹೋರಾಟ..!


ಪಿವಿ ಸಿಂಧು ಸೆಮಿಫೈನಲ್ ಪಂದ್ಯದಲ್ಲಿ ಸೋಲನುಬವಿಸಬೇಕಾಯಿತು. ನಂತರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ,  ಚೀನಾದ ಬ್ಯಾಡ್ಮಿಂಟನ್ (Badminton) ಆಟಗಾರ್ತಿಯನ್ನು ಎರಡು ಸೆಟ್ ಗಳಲ್ಲಿ ಸೋಲಿಸಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪಿವಿ ಸಿಂಧು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಖಚಿತವಾದ ಮೂರನೇ ಭಾರತೀಯ. ಮೀರಾಬಾಯಿ ಚಾನು (Mirabai Chanu) ಬೆಳ್ಳಿ ಪದಕ ಗೆದ್ದಿದ್ದಾರೆ. ಲವ್ಲಿನಾ ಪದಕವನ್ನು ತರುವುದು ಕೂಡ ನಿಶ್ಚಿತವಾಗಿದೆ. 


ಪದಕದೊಂದಿಗೆ ಭಾರತಕ್ಕೆ ಮರಳಿರುವ ಪಿ.ವಿ ಸಿಂಧು, "ನನಗೆ ತುಂಬಾ ಸಂತೋಷವಾಗಿದೆ.  ಜನರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.  


ಇದನ್ನೂ ಓದಿ : Tokyo Olympics Hockey: ಆಸ್ಟ್ರೇಲಿಯಾಗೆ ಮಣ್ಣುಮುಕ್ಕಿಸಿ ಹೊಸ ಇತಿಹಾಸ ಸೃಷ್ಟಿಸಿದ ಭಾರತದ ವನಿತೆಯರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ