Tokyo Olympics Hockey: ಆಸ್ಟ್ರೇಲಿಯಾಗೆ ಮಣ್ಣುಮುಕ್ಕಿಸಿ ಹೊಸ ಇತಿಹಾಸ ಸೃಷ್ಟಿಸಿದ ಭಾರತದ ವನಿತೆಯರು

ಸೆಮಿಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಸಿದ ಭಾರತದ ವನಿತೆಯರು.

Written by - Zee Kannada News Desk | Last Updated : Aug 2, 2021, 11:40 AM IST
  • ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೇ ಬಗ್ಗುಬಡಿದ ಭಾರತದ ಮಹಿಳಾ ಹಾಕಿ ತಂಡ
  • ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಲಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಸಾಧನೆ
  • ಬಲಿಷ್ಠ ಆಸೀಸ್ ತಂಡಕ್ಕೆ ಮಣ್ಣುಮುಕ್ಕಿಸಿದ ಭಾರತದ ವನಿತೆಯರಿಗೆ ಪ್ರಶಂಸೆಗಳ ಸುರಿಮಳೆ
Tokyo Olympics Hockey: ಆಸ್ಟ್ರೇಲಿಯಾಗೆ ಮಣ್ಣುಮುಕ್ಕಿಸಿ ಹೊಸ ಇತಿಹಾಸ ಸೃಷ್ಟಿಸಿದ ಭಾರತದ ವನಿತೆಯರು title=
ಬಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಭಾರತದ ವನಿತೆಯರು

ನವದೆಹಲಿ: ಟೋಕಿಯೊ ಒಲಂಪಿಕ್ಸ್ ನಲ್ಲಿಭಾರತದ ವನಿಯತೆಯರು(India Womens Hockey)ಬಲಿಷ್ಠ ಆಸ್ಟ್ರೇಲಿಯಾಗೆ ಮಣ್ಣುಮುಕ್ಕಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸೋಮವಾರ ನಡೆದ ಮಹತ್ವದ ಪಂದ್ಯದಲ್ಲಿ 1-0 ಅಂತರದ ಗೋಲುಗಳಿಂದ ಗೆಲುವು ಸಾಧಿಸುವ ಮೂಲಕ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್(Semifinal)ಪ್ರವೇಶಿಸಿದೆ.

ಕೊನೆವರೆಗೂ ಭಾರೀ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಭಾರತದ ವನಿತೆಯ(India Womens)ರು ವಿಜಯಲಕ್ಷ್ಮೀಯನ್ನು ತಮ್ಮದಾಗಿಸಿಕೊಂಡರು. ಬಲಿಷ್ಠ ಆಸೀಸ್(Australia) ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಮೂಲಕ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡರು. ಭಾರತೀಯ ಮಹಿಳಾ ಹಾಕಿ ತಂಡವು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಲಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿ ಹೊಸ ಇತಿಹಾಸ(New History) ಸೃಷ್ಟಿಸಿದೆ. ರಾಣಿ ರಾಂಪಾಲ್ ನೇತೃತ್ವದ ಭಾರತ ತಂಡವು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರ್ಜಿತ್ ಕೌರ್ ಅವರ 22ನೇ ನಿಮಿಷದ ಸ್ಟ್ರೈಕ್ ನಿಂದಾಗಿ ವಿಶ್ವ ನಂ .2 ಆಸೀಸ್ ತಂಡವನ್ನು 1-0 ಗೋಲಿನಿಂದ ಸೋಲಿಸಿತು. 1980ರ ಒಲಿಂಪಿಕ್ ಕ್ರೀಡಾಕೂಟದಲ್ಲಿ 6 ತಂಡಗಳೊಂದಿಗೆ ರೌಂಡ್-ರಾಬಿನ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದಿದ್ದು ಭಾರತದ ಇದುವರೆಗಿನ ಅತ್ಯುತ್ತಮ ಫಲಿತಾಂಶವಾಗಿತ್ತು.

1980 ಮತ್ತು 2016 ರಿಯೋ ಒಲಿಂಪಿಕ್ಸ್(Rio Olympics 2016)ನಂತರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡವು 3ನೇ ಬಾರಿಗೆ ಕಾಣಿಸಿಕೊಳ್ಳುತ್ತಿದೆ. ಭಾರತದ ವನಿತೆಯರು ಈಗ ಫೈನಲ್‌ನಲ್ಲಿ ಆಡಲು ಸ್ಥಾನ ಪಡೆಯಲಿದ್ದಾರೆ. ಭಾರತವು ತನ್ನ Pool A  ಪ್ರಕ್ರಿಯೆಯನ್ನು 6 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಮುಕ್ತಾಯಗೊಳಿಸಿದೆ. ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸತತ ಗೆಲುವು ಸಾಧಿಸಿದ ಭಾರತದ ಮಹಿಳಾ ಹಾಕಿ ತಂಡ ಟೋಕಿಯೊ ಒಲಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ಪ್ರತಿ ಪೂಲ್‌ನಿಂದ ಅಗ್ರ 4 ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಿವೆ.

ಟೋಕಿಯೋ ಒಲಂಪಿಕ್ಸ್(Tokyo Olympics 2020)ನ ಆರಂಭಿಕ ಪಂದ್ಯಗಳಲ್ಲಿ ಭಾರತದ ವನಿತೆಯರು ಹಿನ್ನಡೆ ಅನುಭವಿಸಿದ್ದರು. ನೆದರ್ಲ್ಯಾಂಡ್ಸ್, ಜರ್ಮನಿ ಮತ್ತು ಹಾಲಿ ಚಾಂಪಿಯನ್ ಗ್ರೇಟ್ ಬ್ರಿಟನ್ ವಿರುದ್ಧದ ಮೊದಲ 3 ಪಂದ್ಯಗಳಲ್ಲಿ ಸೋತ ನಂತರ ಭಾರತೀಯ ಮಹಿಳೆಯರು ಅದ್ಭುತವಾದ ಪುನರಾಗಮನ ಮಾಡಿದರು. ಉನ್ನತ ಶ್ರೇಣಿಯ ಐರ್ಲೆಂಡ್ ಅನ್ನು 1-0 ಅಂತರದಿಂದ ಸೋಲಿಸಿದರು. ಅಲ್ಲದೆ ದಕ್ಷಿಣ ಆಫ್ರಿಕಾವನ್ನು 4-3ರಿಂದ ಸೋಲಿಸಿದರು. ಕೊನೆಯ ಪೂಲ್ A  ಪಂದ್ಯದಲ್ಲಿ ಗ್ರೇಟ್ ಬ್ರಿಟನ್ 2-0 ಗೋಲುಗಳಿಂದ ಐರ್ಲೆಂಡ್ ಅನ್ನು ಸೋಲಿಸಿದ ನಂತರ ಭಾರತ ಮಹಿಳಾ ತಂಡದ ಸ್ಥಾನ ಭದ್ರವಾಯಿತು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News