86 ಬೌಂಡರಿ, 7 ಸಿಕ್ಸರ್... ಒಂದೇ ಪಂದ್ಯದಲ್ಲಿ 498 ರನ್ ಚಚ್ಚಿದ 18ರ ಬಾಲಕ! ಕ್ರಿಕೆಟ್ ದೇವರು ಸಚಿನ್ ಸಮಕ್ಕೆ ನಿಂತೇ ಬಿಟ್ಟ ಈ ಕ್ರಿಕೆಟಿಗ ಯಾರು?
Drona Desai: ಈ ಆಟಗಾರನ ಹೆಸರು ದ್ರೋಣ ದೇಸಾಯಿ. ದ್ರೋಣ ದೇಸಾಯಿ ಅವರು ದಿವಾನ್ ಬಲ್ಲೂಭಾಯಿ ಕಪ್ ಅಂಡರ್-19 ಮಲ್ಟಿ-ಡೇ ಟೂರ್ನಮೆಂಟ್‌ನಲ್ಲಿ ಸೇಂಟ್ ಕ್ಸೇವಿಯರ್ ಶಾಲೆಯ ಪರವಾಗಿ ಆಡುವಾಗ 498 ರನ್‌ಗಳ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದಾರೆ.
Drona Desai: ಕ್ರಿಕೆಟ್ ಮೈದಾನದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಶೇಷಗಳು ನಡೆಯುತ್ತಲೇ ಇರುತ್ತವೆ. ಅದು ಅಂತಾರಾಷ್ಟ್ರೀಯ ಕ್ರಿಕೆಟ್ ಆಗಿರಲಿ, ಅಥವಾ ದೇಶೀಯ, ಶಾಲಾ ಮಟ್ಟದ ಕ್ರಿಕೆಟ್ ಪಂದ್ಯವೇ ಆಗಿರಲಿ... ಇದೀಗ ಗುಜರಾತ್‌ನ ಅಹಮದಾಬಾದ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, 18 ವರ್ಷದ ಕ್ರಿಕೆಟಿಗನೊಬ್ಬ ತನ್ನ ಹೆಸರನ್ನು ದಾಖಲೆ ಪುಸ್ತಕದಲ್ಲಿ ದಾಖಲಿಸಿದ್ದಾನೆ.
ಇದನ್ನೂ ಓದಿ: ಕಾನ್ಪುರ ಟೆಸ್ಟ್ ನನ್ನ ಕೊನೆಯ ಪಂದ್ಯ..! ಟೆಸ್ಟ್ ಸರಣಿ ಮಧ್ಯೆಯೇ ನಿವೃತ್ತಿ ಘೋಷಿಸಿದ ಆಲ್‌ರೌಂಡರ್
ಈ ಆಟಗಾರನ ಹೆಸರು ದ್ರೋಣ ದೇಸಾಯಿ. ದ್ರೋಣ ದೇಸಾಯಿ ಅವರು ದಿವಾನ್ ಬಲ್ಲೂಭಾಯಿ ಕಪ್ ಅಂಡರ್-19 ಮಲ್ಟಿ-ಡೇ ಟೂರ್ನಮೆಂಟ್‌ನಲ್ಲಿ ಸೇಂಟ್ ಕ್ಸೇವಿಯರ್ ಶಾಲೆಯ ಪರವಾಗಿ ಆಡುವಾಗ 498 ರನ್‌ಗಳ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದಾರೆ.
ಜೆಎಲ್ ಇಂಗ್ಲಿಷ್ ಶಾಲೆಯ ವಿರುದ್ಧದ ಈ ಪಂದ್ಯದಲ್ಲಿ, ದ್ರೋಣ ದೇಸಾಯಿ 320 ಎಸೆತಗಳನ್ನು ಎದುರಿಸಿದ್ದರು. ಅದರಲ್ಲಿ 86 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಸಹ ಬಾರಿಸಿದ್ದರು. ಇನ್ನೊಂದೆಡೆ 320 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಅವರು, ಬರೋಬ್ಬರಿ 498 ರನ್ ಕಲೆ ಹಾಕಿದ್ದಾರೆ.
ಇದನ್ನೂ ಓದಿ: ಈ ಕಾಲೇಜುಗಳಲ್ಲಿ ನೀವು ಪದವಿ ಪಡೆದಿದ್ದರೆ Amazonನಲ್ಲಿ ಉನ್ನತ ಸ್ಥಾನ ಅಲಂಕರಿಸಬಹುದು
ಇನ್ನೊಂದೆಡೆ ದ್ರೋಣಾ ದೇಸಾಯಿ ಮಿಂಚಿನ ಆಟ, ಸದ್ಯ ಭಾರತೀಯ ಕ್ರಿಕೆಟ್ ಇತಿಹಾದಲ್ಲಿ ಗಣ್ಯರ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ. ಇನ್ನೊಂದೆಡೆ ಸಚಿನ್ ತೆಂಡೂಲ್ಕರ್‌ರಿಂದ ಹಿಡಿದು ಪೃಥ್ವಿ ಶಾ ವರೆಗೆ ಹಲವರು ದಿಗ್ಗಜರು ತಮ್ಮ ಶಾಲಾ ದಿನಗಳಿಂದಲೇ ಕ್ರಿಕೆಟ್ ಆಡಿ ಅಬ್ಬರಿಸಿ, ಆ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ