`ಭಜ್ಜಿ ಸಂಪೂರ್ಣ ಮ್ಯಾಚ್ ವಿನ್ನರ್`- ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ
ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರು ನಿವೃತ್ತಿ ಹೊಂದುತ್ತಿರುವ ಭಾರತೀಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಶುಕ್ರವಾರದಂದು ಗಮನಾರ್ಹ ವೃತ್ತಿಜೀವನಕ್ಕೆ ಅಭಿನಂದಿಸಿದ್ದಾರೆ.
ನವದೆಹಲಿ: ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರು ನಿವೃತ್ತಿ ಹೊಂದುತ್ತಿರುವ ಭಾರತೀಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಶುಕ್ರವಾರದಂದು ಗಮನಾರ್ಹ ವೃತ್ತಿಜೀವನಕ್ಕೆ ಅಭಿನಂದಿಸಿದ್ದಾರೆ.ಈ ಹಿಂದಿನ ದಿನದಲ್ಲಿ, ಜಲಂಧರ್‌ನ 41 ವರ್ಷದ ಸ್ಪಿನ್ನರ್ ಎಲ್ಲಾ ರೀತಿಯ ಆಟದಿಂದ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದ್ದರು.
ಬಿಸಿಸಿಐ ಪ್ರಕಟಣೆಯಲ್ಲಿ ಸೌರವ್ ಗಂಗೂಲಿ, ಹರ್ಭಜನ್ ಸಿಂಗ್ ಯಶಸ್ವಿ ಕ್ರಿಕೆಟಿಗನಾಗಲು ಹಲವು ಅಡೆತಡೆಗಳನ್ನು ನಿವಾರಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿ ಸರ್ಕಾರ ಉತ್ತರ ಕರ್ನಾಟಕದ ವಿರೋಧಿ ಸರ್ಕಾರ- ಸಿದ್ಧರಾಮಯ್ಯ
'ನಾನು ಗಮನಾರ್ಹವಾದ ವೃತ್ತಿಜೀವನದಲ್ಲಿ ಹರ್ಭಜನ್ ಸಿಂಗ್ ಅವರನ್ನು ಅಭಿನಂದಿಸುತ್ತೇನೆ.ಅವರು ತಮ್ಮ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ,ಆದರೆ ಭಜ್ಜಿ ಸುಲಭವಾಗಿ ಬಿಟ್ಟುಕೊಡುವವರಲ್ಲ.ಅವರು ಅನೇಕ ಅಡೆತಡೆಗಳನ್ನು ನಿವಾರಿಸಿದ್ದಾರೆ ಮತ್ತು ಪ್ರತಿ ಬಾರಿಯೂ ಮೇಲೇರಲು ಅವರ ಹಿಂದೆ ಅನೇಕ ಹಿನ್ನಡೆಗಳನ್ನು ಎದುರಿಸಿದ್ದಾರೆ.ಅವರಲ್ಲಿನ ಪ್ರದರ್ಶನದಲ್ಲಿ ನನಗೆ ಇಷ್ಟವಾಗಿರುವುದೆನೆಂದರೇ ಅವರ ಹಸಿವು, ಅವರ ಶಕ್ತಿ, ಅವರ ಧೈರ್ಯ ಮತ್ತು ಅವರ ಅಪಾರವಾದ ಆತ್ಮವಿಶ್ವಾಸ,ಅವರು ಎಂದಿಗೂ ಜಗಳದಿಂದ ದೂರವಿರಲಿಲ್ಲ.ಅವರು ಡ್ರೆಸ್ಸಿಂಗ್ ರೂಮ್ ವಾತಾವರಣವನ್ನು ಹಗುರವಾಗಿರಿಸಿದರು ಮತ್ತು ಅದು ನಿಜವಾಗಿಯೂ ಮುಖ್ಯವಾದ ವಿಷಯ' ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹರ್ಭಜನ್ ಅವರ ಸಾಧನೆಯು ಅವರು ನೋಡಿದ ಶ್ರೇಷ್ಠ ಪ್ರದರ್ಶನವಾಗಿದೆ ಎಂದು ಗಂಗೂಲಿ ಹೇಳಿದರು.
ಇದನ್ನೂ ಓದಿ : eKYC ಇಲ್ಲದೆ ಖಾತೆಗೆ ಬರುವುದಿಲ್ಲ ಪಿಎಂ ಕಿಸಾನ್ 10ನೇ ಕಂತು, ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿಕೊಳ್ಳಿ
"2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅವರ ಮೊದಲ ಪೂರ್ಣ ಟೆಸ್ಟ್ ಸರಣಿಯು ನಾನು ನೋಡಿದ ಅತ್ಯಂತ ಶ್ರೇಷ್ಠವಾಗಿದೆ, ಅಲ್ಲಿ ಒಬ್ಬ ಬೌಲರ್ ಏಕಾಂಗಿಯಾಗಿ ಸರಣಿಯನ್ನು ಗೆಲ್ಲಿಸಿದರು.ಭಜ್ಜಿ ಸಂಪೂರ್ಣ ಮ್ಯಾಚ್ ವಿನ್ನರ್ ಆಗಿದ್ದಾರೆ.ಅವರು ಸಾಧಿಸಿದ್ದಕ್ಕೆ ಅವರು ಹೆಮ್ಮೆ ಪಡಬೇಕು.ಅವರ ಜೀವನದಲ್ಲಿ ಹೊಸ ಇನ್ನಿಂಗ್ಸ್ ರೋಚಕವಾಗಿರುತ್ತದೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ."ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.